ಸಮಯಪ್ರಜ್ಞೆ – ಪ್ರಯಾಣಿಕರ ಸುರಕ್ಷತೆಗೆ ಮುಂದಾದ ಪೊಲೀಸ್ ಅಧಿಕಾರಿ : ಡಿಸಿಪಿ ಬಿಂದುಮಣಿ.

ಸರ್ಕಾರಿ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ : ನಡುರಸ್ತೆಯಲ್ಲಿ ನಿಂತು ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಪೊಲೀಸ್ ಅಧಿಕಾರಿ.
ಮೈಸೂರು : ಸರ್ಕಾರಿ ಬಸ್ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಸಿಲುಕಿ ಹೊರಬಂದು ಅಸಹಾಯಕರಾಗಿ ನಿಂತಿದ್ದ ಚಾಮುಂಡಿ ಭಕ್ತರ ನೆರವಿಗೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ರವರು ಧಾವಿಸಿ ಸಾರ್ವಜನಿಕ ಕಳಕಳಿ ಮೆರೆದಿದ್ದಾರೆ.ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಆತಂಕ ದೂರ ಮಾಡಿದ್ದಾರೆ.ಬಿಂದುಮಣಿ ರವರ ಸರಳತೆ ಮಾನವೀಯತೆಗೆ ಚಾಮುಂಡಿ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಡದೇವತೆ ಚಾಮುಂಡೇಶ್ವರಿ ವರ್ಧಂತಿ.ಎಂದಿನಂತೆ ಚಾಮುಂಡಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.ಉಚಿತ ಸಾರಿಗೆ ಬಸ್ ಹತ್ತಿ ಬೆಟ್ಟಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಮಾರ್ಗಮಧ್ಯೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕಕ್ಕೆ ಒಳಗಾಗಿ ಇಳಿದಿದ್ದಾರೆ.ಇದೇ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಬಿಂದುಮಣಿ ರವರು ತಮ್ಮ ಅಧಿಕೃತ ವಾಹನದಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದಾಗ ಆತಂಕದಲ್ಲಿ ಸಿಲುಕಿದ್ದ ಪ್ರಯಾಣಿಕರ ಪರಿಸ್ಥಿತಿಗೆ ಸ್ಪಂದಿಸಿದ್ದಾರೆ.ತಮ್ಮ ವಾಹನದಿಂದ ಇಳಿದು ಪ್ರಯಾಣಿಕರಿಗೆ ಧೈರ್ಯತುಂಬಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪ್ರಯಾಣಿಕರಿಗೆ ಬೆಟ್ಟಕ್ಕೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ತಿಳಿದು ನಂತರ ಸುಸ್ಥಿತಿಗೆ ತಲುಪಿದ್ದನ್ನ ಖಚಿತಪಡಿಸಿಕೊಂಡು ಪ್ರಯಾಣಿಕರಿಗೆ ತೆರಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ವರದಿ: ಲೋಕೇಶ್.ವಿ
