ಉದ್ಯೋಗಖಾತರಿ ಕೂಲಿ ಕಾರ್ಮಿಕರಿಗೆ ಹಣ ಪಾವತಿ ಮಾಡಲು ಮಂಜೇಗೌಡ ಬೆದರಿಕೆ

ಕೆ.ಆರ್.ಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇವನಹಳ್ಳಿ ಗ್ರಾಮದ ಅಮಾನಿಕೆರೆ ಅಭಿವೃದ್ಧಿ ಮತ್ತು ಹೊಳೇತ್ತುವ ಕಾಮಗಾರಿಯನ್ನು ಸುಮಾರು 100 ಹೆಚ್ವು ಮಹಿಳಾ ಕೂಲಿ ಕಾರ್ಮಿಕರು ಉದ್ಯೋಗ ಖಾತರಿ ಯೋಜನೆಯಡಿ ಕಳೆದ ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದು ಕಳೆದ ಮೂರು ವಾರದಿಂದ ತಮ್ಮ ಕೂಲಿ ಹಣವನ್ನು ಬಿಡುಗಡೆ ಮಾಡಲು (ಬೆರಳಚ್ಚು) ನೀಡುಲು ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾದ ನಂದಿನಿರವರ ಪತಿ ಮಂಜೇಗೌಡ ವಿವಿಧ ಬೇಡಿಕೆಗಳನ್ನು ಇಟ್ಟು ತೊಂದರೆ ನೀಡುತ್ತಿದ್ದರೆ ಎಂದು ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ
ಮಂದಗರೆ ಸುತ್ತ-ಮುತ್ತಲಿನ ಗ್ರಾಮಗಳ ಅನೇಕ ಕೂಲಿ ಕಾರ್ಮಿಕರು ಬೇವನಹಳ್ಳಿ ಕೆರೆಯ ಹೊಳೆತ್ತುವ ಕೆಲಸ ಮಾಡುತ್ತಿದ್ದು ಮೂರು ವಾರದ ಕೂಲಿ ಹಣಕ್ಕೆ ಅಧ್ಯಕ್ಷರು ಹೆಬ್ಬೆಟ್ಟು ನೀಡುವಂತೆ ಕೂಲಿ ಕಾರ್ಮಿಕರು ತಿಳಿಸಿದ್ದು ನಿಮ್ಮ ಕೆಲಸಕ್ಕೆ ನಾನು 15 ಜನರ ಜಾಬ್ ಕಾರ್ಡ್ ನೀಡುತ್ತೇನೆ ಇದನ್ನು ನಿಮ್ಮೊಂದಿಗೆ ಸೇರಿಸಿದರೆ ಆಗ ಮಾತ್ರ ನಿಮ್ಮಗೆ ಹಣ ಬಿಡುಗಡೆ ಮಾಡಲು ನನ್ನ ಪತ್ನಿ ನಂದಿನಿ ಬೆರಳಚ್ಚು ನೀಡುತ್ತಾರೆ ಇಲ್ಲವಾದರೆ ನಿಮ್ಮ ಕೂಲಿ ಹಣ ಹೇಗೆ ಪಡೆದುಕೊಳ್ಳುವಿರಾ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಅದಲ್ಲದೆ ಕೆಲ ಬಲಾಂಡ್ಯರು ಉದ್ಯೋಗಖಾತ್ರಿ ಯೋಜನೆಯ ಕೆಲಸವನ್ನು ಜೆ.ಸಿ.ಬಿ ಯಂತ್ರದಲ್ಲಿ ಕೆಲಸ ಮಾಡಿ ಎಲ್ಲಾ ಅಧಿಕಾರಿಗಳಿಗೂ ಕಮಿಷನ್ ನೀಡಿ ಸಂಪೂರ್ಣ ಬಿಲ್ ಪಡೆದುಕೊಂಡಿದ್ದು ಇದರ ಬಗ್ಗೆ ಇಂಜಿನಿಯರ್ ಪಾರ್ಥ ರವರನ್ನು ವಿಚಾರಿಸಿದರೆ ಯಂತ್ರದಲ್ಲಿ ಕೆಲಸ ಮಾಡಿಲ್ಲ ಜೆ.ಸಿ.ಬಿ ಯಂತ್ರವನ್ನು ಕೆರೆಯಲ್ಲಿ ಸುಮ್ಮನೆ ನಿಲ್ಲಿಸಿದ್ದಾರೆ ಎಂದು ಉಡಾಫೆ ಉತ್ತರ ನೀಡುತ್ತಿದ್ದು ಹಲವು ಅನುಮಾನಗಳು ಎದ್ದು ಕಾಣುತ್ತಿದೆ..
ಇಷ್ಟು ಪ್ರಾಮಾಣಿಕ ಕೆಲಸ ಮಾಡುತ್ತಿದ್ದರೂ ಕೂಲಿ-ಕಾರ್ಮಿಕರು ದಿನಕ್ಕೆ ಎಂಟು ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಒತ್ತಡ ನೀಡುತ್ತಿದ್ದು ನಮ್ಮ ಕೂಲಿ ಹಣವನ್ನು ಬಿಡುಗಡೆ ಮಾಡದಿದ್ದರೆ ಗ್ರಾಮ ಪಂಚಾಯತಿ ವಿರುದ್ದ ಪ್ರತಿಭಟನೆ ನೆಡೆಸುವುದಾಗಿ ಎಚ್ಚರಿಗೆ ನೀಡಿದ್ದಾರೆ
ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ್ಯ ಕೂಲಿ ಕಾರ್ಮಿಕರ ಸಂಘದ ತಾಲ್ಲೂಕು ಕಾರ್ಯದರ್ಶಿ ಗೋಪಾಲ್, ಮುಖಂಡರಾದ ಚಿಕ್ಕಮಂದಗರೆ ಸುರೇಶ್, ಕೂಲಿಕಾರ್ಮಿಕರಾದ ಕಾಂತಮಣಿ. ನೀಲಮ್ಮ.ಕಾವ್ಯ.ಪವಿತ್ರ. ರಾಧ.ಯೋಶೋದಮ್ಮ.ಸಾಕಮ್ಮ. ಸೇರಿದಂತೆ ನೂರಾರು ಕಾರ್ಮಿಕರು ಇದ್ದರು , ವರದಿ: ಲೋಕೇಶ್.ವಿ