ಮೀನುಗಾರಿಕೆಗೆ ,ಸ್ವೀಮಿಂಗ್ ಲೈಫ್ ಜಾಕೆಟ್ ಕಡ್ಡಾಯ ಮಾಡಿಪ್ರತಿಯೊಬ್ಬ ಮೀನುಗಾರರಿಗೂ ಮೀನುಗಾರಿಕೆ ಹೋಗುವಾಗ ಲೈಫ್ ಜಾಕೆಟ್ ಧರಿಸಿ ನೀರಿಗೆ ಇಳಿಯುವುದು, ಜೀವಕ್ಕೆ ಸುರಕ್ಷಿತವಾದ ನಿಯಮವಾಗಿದೆ
ಈಜು ಬಂದವರು ಕೂಡ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಡುವಾಗ , ಮಳೆಗಾಲ ಮತ್ತು ಸಮುದ್ರದಲ್ಲಿ ವಾತಾವರಣ ಏರಿಳಿತಿರುವಾಗ ಈ ನಿಯಮವನ್ನು ಸರಕಾರ ಕಡ್ಡಾಯವಾಗಿ ಮಾಡಿದಾಗ ಮೀನುಗಾರರ ಜೀವ ಸುರಕ್ಷಿತವಾಗಿರುತ್ತದೆ ಆದುದರಿಂದ ಸರಕಾರವು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸಿ ಮೀನುಗಾರಿಕೆ ಮಾಡುವಂತೆ ನಿಯಮಗಳನ್ನು ಜಾರಿ ಮಾಡಬೇಕು
ನಾಡ ದೋಣಿ ಮತ್ತು ಬೋಟಿನ ಮಾಲೀಕರು, ಲೈಫ್ ಜಾಕೆಟ್ ಖರೀದಿ ಮಾಡಿ ಕೊಡುವಂತೆ ಸರಕಾರ ಕಡ್ಡಾಯ ಮಾಡಿದಲ್ಲಿ ಕರಾವಳಿಯ ಪ್ರದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ಈ ಅನಾಹುತಗಳನ್ನು ತಡೆಯಬಹುದು
ಸುರಕ್ಷಿತವಾದ ಲೈಫ್ ಜಾಕೆಡ್ ಧರಿಸಿ ಮೀನುಗಾರಿಕೆ ಮಾಡಿದರೆ ದೋಣಿ ಮುಳುಗಿದಾಗ ಲೈಫ್ ಜಾಕೆಟ್ ನಿಮ್ಮನ್ನು ಕಾಪಾಡಬಲ್ಲದು.
ಉತ್ತಮ ಕ್ವಾಲಿಟಿಯ ಲೈಫ್ ಜಾಕೆಟ್ಅನ್ನೆ ಧರಿಸುವುದು ಕೂಡ ಅನಿವಾರ್ಯ. ಸರಕಾರ ಮತ್ತು ಜಿಲ್ಲಾಡಳಿತ ಡಿಸಿ ಅವರು ಆದಷ್ಟು ಬೇಗ ತ್ವರಿತವಾಗಿ ಮೀನುಗಾರಿಕೆಗೆ ಹೊರಡುವ ಎಲ್ಲರಿಗೂ ಲೈಫ್ ಜಾಕೆಟ್ ಧರಿಸುವಂತೆ ಕಡ್ಡಾಯವಾದ ನಿಯಮ ಜಾರಿ ಮಾಡಿ
ಈ ನಿಯಮವನ್ನು ಪಾಲಿಸುವಂತೆ ಮೀನುಗಾರರು ಮತ್ತು ಬೋಟಿನ ದೋಣಿಯ ಮಾಲೀಕರಿಗೆ ಮನವರಿಕೆ ಮಾಡಿ ಕಾನೂನು ಪಾಲಿಸದಿದ್ದಲ್ಲಿ ಶಿಕ್ಷೆ ಮತ್ತು ದಂಡಕ್ಕೆ ಗುರಿಪಡಿಸುವ ಕಾನೂನು ಸುವ್ಯವಸ್ಥೆಯನ್ನು ಜಾರಿಗೊಳಿಸಬೇಕು
ಈ ಅವ್ಯವಸ್ಥೆಗೆ ತಾಜಾ ಉದಾಹರಣೆ ಎಂದರೆ ಈಗ ಗಂಗೊಳ್ಳಿ ಯಲ್ಲಿ ಸಂಭವಿಸಿದ ಮೀನುಗಾರ ದೋಣಿಯ ಅನಾಹುತ.
ಪ್ರತಿವರ್ಷವು ಕರಾವಳಿಯಲ್ಲಿ ಮಳೆಗಾಲದಲ್ಲಿ ಮೀನುಗಾರರು ಜೀವ ಕಳೆದುಕೊಳ್ಳುವುದು. ವಾಡಿಕೆ ತರ ಆಗಿ ಬಿಟ್ಟಿದೆ ಇದು ನಿಲ್ಲಬೇಕಾದರೆ
ಲೈಫ್ ಜಾಕೆಟ್ ಕಡ್ಡಾಯ ಇಂಥಹ ನಿಯಮಗಳು ಜಾರಿ ಆಗಲೇಬೇಕು
ಇಂತಹ ಅವಘಡ ಸಂಭವಿಸಿದಾಗ ಬಡ ಸಂಸಾರವು ತತ್ತರಗೊಂಡು ನೋವವನ್ನು ಹೇಳ ತೀರದ ವೇದನೆ ಯಾಗಿದೆ
ಈ ಅನುಭವಿಸುವುದು ನೋಡಲಿಕ್ಕೆ ಆಗುವುದಿಲ್ಲ.
ಸರಕಾರ ಮತ್ತು ಮೀನುಗಾರಿಕಾ ಸಚಿವರು ಇತ್ತ ಗಮನ ಹರಿಸಿ ಜೀವ ಕಳೆದುಕೊಂಡಂತ ಮೀನುಗಾರರಿಗೆ ಸಂಸಾರಕ್ಕೆ ಪರಿಹಾರ ಸರಕಾರದಿಂದ ಪರಿಹಾರ ಕೊಡುವುದಕ್ಕೆ ಮುಂದಾಗಬೇಕು
ಪ್ರಸ್ತುತ ಹೀಗೆ ಇರುವ ಮೀನುಗಾರಿಕಾ ಸಚಿವರಾದ ಮಂಕಾಳ ಸ್ ವೈದ್ಯ ಮಿಡಿಯುವ ಹೃದಯದ ಮಾನವೀಯತೆ ಇರುವ ಮೀನುಗಾರಿಕಾ ಸಚಿವರಾಗಿದ್ದಾರೆ. ಸಚಿವರಾಗಿರುವುದರಿಂದ ಕರಾವಳಿಯಲ್ಲಿ ಪ್ರತಿವರ್ಷ ಸಂಭವಿಸುವ ಈ ಅನಾಹುತಕ್ಕೆ ಮುಂದೆಂದು ಸಂಭವಿಸದಂತೆ ಮೀನುಗಾರಿಕಾ ಸಚಿವರು ಕಾಳಜಿವಹಿಸಲಿ
ಎಲ್ಲರ ಕಳಕಳಿಯ ಕೋರಿಕೆ ಏನೆಂದರೆ ಮುಂದೆಂದು ಹೀಗೆ ಆಗದಂತೆ ಕಡ್ಡಾಯವಾದ ಕಾನೂನು ಜಾರಿಗೆ ತರಬೇಕೆಂದು ವಿನಂತಿಸುತಿದ್ದೇವೆ.
✍️ ಈಶ್ವರ್ ಸಿ ನಾವುಂದ
ಚಿಂತಕ,ಬರಹಗಾರರು

