ರಾಜ್ಯ ಸರ್ಕಾರಗಳ ವೈಫಲ್ಯ ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ.

Spread the love

ಮಳವಳ್ಳಿ: ರಾಜ್ಯ ಸರ್ಕಾರಗಳ ವೈಪಲ್ಯ ಖಂಡಿಸಿ ರೈತರ, ಸಾರ್ವಜನಿಕ ಬೇಡಿಕೆ ಈಡೇರಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ. ರೈತ ಸಂಘ ಏಕೀಕರಣ ಸಮಿತಿ ಕಾರ್ಯಕರ್ತರು ಮಳವಳ್ಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು ‌.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಅನಂತರಾಂ ವೃತ್ತದ ಬಳಿ ಜಮಾಯಿಸಿ ಕೆಲ ನಿಮಿಷ ರಸ್ತೆತಡೆ ಮಾಡಲಾಯಿತು.
ಬಳಿಕ ಪ್ರಮುಖ ಬೀದಿಗಳ ಮೂಲಕ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ,ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ರೈತರ ಬೆಳೆಗೆ ವಿಮೆ ನೀಡಬೇಕು, ಕಂದಾಯ ಇಲಾಖೆ ರೈತರ ವಂಶವೃಕ್ಷ ಇದ್ದಂತೆ ರೈತರಿಗೆ ಎಲ್ಲರೂ ಸ್ಪಂದಿಸಬೇಕಾಗಿದೆ ಎಂದರು.
ಇದೇ ವೇಳೆ ತಹಸೀಲ್ದಾರ್ ಲೋಕೇಶ್ ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಈ ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಬಸವರಾಜು, ಮಹೇಶ್, ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪುಟ್ಟಸ್ವಾಮಿ, ಜಯರಾಮು ಅಣ್ಣೂರುಮಹೇಂದ್ರ, ನಾಗೇಂದ್ರಸ್ವಾಮಿ ಸೇರಿದಂತೆ ಹಲವರು ಇದ್ದರು. ವರದಿ: ಲೋಕೇಶ್.ವಿ

Right Click Disabled