ಉಡುಪಿ :- – ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇದರ ವತಿಯಿಂದ ಮಣಿಪಾಲ ಮಂಚಿಕೆರೆ ಬಳಿಯ ಗ್ರೀನ್ ವ್ಯಾಲಿ ಪ್ಯಾರಡೈಸ್ ಫಾರ್ ಸೀನಿಯರ್ ಸಿಟಿಜನ್ ನಲ್ಲಿ ಜುಲೈ 3 ಗುರುವಾರ ಮನೆಯೇ ಗ್ರಂಥಾಲಯ ಅಭಿಯಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಡಾ. ಇಂದಿರಾ ಶಾನುಭಾಗ್ ಮತ್ತು ಡಾ.ವೆಂಕಟೇಶ್ ಶಾನುಭಾಗ್ ಅವರನ್ನು ಗೌರವಿಸಲಾಯಿತು.

Spread the love

ಉಡುಪಿ :- – ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇದರ ವತಿಯಿಂದ ಮಣಿಪಾಲ ಮಂಚಿಕೆರೆ ಬಳಿಯ ಗ್ರೀನ್ ವ್ಯಾಲಿ ಪ್ಯಾರಡೈಸ್ ಫಾರ್ ಸೀನಿಯರ್ ಸಿಟಿಜನ್ ನಲ್ಲಿ ಜುಲೈ 3 ಗುರುವಾರ ಮನೆಯೇ ಗ್ರಂಥಾಲಯ ಅಭಿಯಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಡಾ. ಇಂದಿರಾ ಶಾನುಭಾಗ್ ಮತ್ತು ಡಾ.ವೆಂಕಟೇಶ್ ಶಾನುಭಾಗ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಕಸಾಪ ಉಡುಪಿ ತಾಲೂಕು ಘಟಕ ತನ್ನ ವೈವಿಧ್ಯಪೂರ್ಣವಾದ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಹೆಸರು ಪಡೆದಿದೆ. ಈ ಅಭಿಯಾನಗಳು ನಿರಂತರವಾಗಿ ನಡೆಯುತ್ತಿದ್ದು, ಸಾಹಿತ್ಯಪ್ರಿಯರ ಮನಸ್ಸುಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರು.
ಉರಗತಜ್ಞ ಗುರುರಾಜ ಸನಿಲ್ ಮಾತನಾಡಿ, ಬದುಕಿನ ವಿವಿಧ ಹಂತಗಳಲ್ಲಿ ಅನುಭವವನ್ನು ಪಡೆದು ಇದೀಗ ನಿವೃತ್ತಿ ಜೀವನ ನಡೆಸುತ್ತಿರುವ ಎಲ್ಲ ಹಿರಿಯ ನಾಗರಿಕರು ನಮಗೆಲ್ಲ ಆದರ್ಶರು. ಪ್ರಕೃತಿ ಮತ್ತು ಮನುಷ್ಯನ ಸಂಬಂಧ ಬಹಳ ಹತ್ತಿರದ್ದಾಗಿದೆ ಪ್ರಕೃತಿಯನ್ನು ಬೆಳೆಸುವಲ್ಲಿ ನಾವೆಲ್ಲರೂ ಕೂಡ ನಮ್ಮಿಂದಾದ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ನಮ್ಮ ಮನೆ ನಮ್ಮ ಮರ ತಂಡದ ವತಿಯಿಂದ ವಿವಿಧ ಗಿಡಗಳನ್ನು ಸಂಸ್ಥೆಯ ಆವರಣದಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಡಾ.ವಿಶ್ವನಾಥ ಶಾನುಭಾಗ್, ಡಾ.ತಾರಾ ಶಾನುಭಾಗ್ ಭಾಗವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಜನಾದ೯ನ ಕೊಡವೂರು, ರಂಜನಿ ವಸಂತ್, ನಿರೂಪಕ ಅವಿನಾಶ್ ಕಾಮತ್ ದೀಪಾ ಚಂದ್ರಕಾಂತ್ ವಸಂತ್ ಮುಂತಾದವರಿದ್ದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.

Right Click Disabled