ವನಸುಮ ವೇದಿಕೆಯ ಸಾರಥ್ಯ ವಿನಯ್ ಆಚಾರ್ಯ ಮುಂಡ್ಕೂರು ಬಗಲಿಗೆ

Spread the love

ಕಾಪು : ವನಸುಮ ವೇದಿಕೆ (ರಿ.) ಕಟಪಾಡಿ ಇದರ ವಾರ್ಷಿಕ​ ಮಹಾಸಭೆ ಜು. ೪, ಶುಕ್ರವಾರದಂದು ಕಟಪಾಡಿಯ​ ವನಸುಮ ವೇದಿಕೆಯ ಕಛೇರಿಯಲ್ಲಿ ನಡೆಯಿತು.

ಬಾಸುಮ ಕೊಡಗು ಅಧ್ಯಕ್ಷತೆಯಲ್ಲಿ ನಡೆದ ಆಡಳಿತ​ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ೨೦೨೫-೨೬ ನೇ​ ಸಾಲಿನ ನೂತನ ಅಧ್ಯಕ್ಷರನ್ನಾಗಿ ವಿನಯ್ ಆಚಾರ್ಯ​ ಮುಂಡ್ಕೂರು, ಉಪಾಧ್ಯಕ್ಷರನ್ನಾಗಿ ಭಾಸ್ಕರ್ ಉದ್ಯಾವರ,​ ​ಕಾರ‍್ಯದರ್ಶಿಯನ್ನಾಗಿ ಸೋನಿ ಪ್ರಭುದನ್‌ರವರನ್ನು​ ಆಯ್ಕೆ ಮಾಡಲಾಯಿತು.

ಜೊತೆ ​ಕಾರ‍್ಯದರ್ಶಿಯಾಗಿ ಕು.ರಮ್ಯಾ ಕಾಮತ್, ಕೋಶಾಧಿಕಾರಿಯಾಗಿ ಕು. ಪಲ್ಲವಿ​ ಕೊಡಗು, ಸಾರ್ವಜನಿಕ ಸಂಪರ್ಕಾಧಿಕಾರಿ​ ಯಾಗಿ​ ಶುಭ​​ಲಕ್ಷ್ಮೀ ಕಡೆಕಾರ್ ಮತ್ತು ನಿರ್ದೇಶಕರಾಗಿ ಕಾಪು​ ಶ್ರೀಕಾಂತ್​ ಆಚಾರ್ಯ, ಸುದರ್ಶನ್ ಪಡುಕೆರೆ, ರಾಕೇಶ್​ ಆಚಾರ್ಯ ಹಾಗೂ ಕುಮಾರ್ ಪಿ ಇವರನ್ನು​ ನೇಮಿಸಲಾಯಿತು.

ವೇದಿಕೆಯ ಗೌರವ​ ಸಲಹೆಗಾರರನ್ನಾಗಿ ಗುರುರಾಜ್ ಮಾರ್ಪಳ್ಳಿ, ಬಾಸುಮ​ ಕೊಡಗು, ಜಯರಾಂ ನೀಲಾವರ, ಇವರನ್ನು ಆಯ್ಕೆ​ ಮಾಡಲಾಯಿತು.​ ಜೀವನ್ ಶೆಟ್ಟಿಯವರು ವೇದಿಕೆಯ​ ಲೆಕ್ಕಪರಿಶೋಧಕರಾಗಿ ನಿಯೋಜಿಸಲಾಯಿತು.

Right Click Disabled