ಕೊಡವೂರು ಶ್ರೀ ಶಂಕರ ನಾರಾಯಣ ದೇವಳದ ಪ್ರಧಾನ ಅರ್ಚಕರಾಗಿ ವಿದ್ವಾನ್ ಸೀತಾರಾಮ ಆಚಾರ್ಯ ನೇಮಕ

Spread the love

.

ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಪ್ರಧಾನ ಅರ್ಚಕರಾಗಿ ಕೊಡವೂರು ಅಗ್ರಹಾರ ನಿವಾಸಿ ವಿದ್ವಾನ್ ಸೀತಾರಾಮ ಆಚಾರ್ಯ ಅಧಿಕಾರ ಸ್ವೀಕರಿಸಿದರು.

ದೇವಳದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಮತ್ತು ವೇದಮೂರ್ತಿ ಪುತ್ತೂರು ವಾದಿರಾಜ ತಂತ್ರಿ ಹಾಗು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು ಸಮಕ್ಷಮದಲ್ಲಿ ಅಧಿಕಾರ ಹಸ್ತಾoತರಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರು, ಭಕ್ತ ವೃಂದ ಸದಸ್ಯರು, ಸೇವಾ ಸಮಿತಿ ಸದಸ್ಯರು,ಶ್ರೀದೇವಳದ ಚಾಕರಿ ವರ್ಗದವರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

Right Click Disabled