ವೈದ್ಯ, ಲೆಕ್ಕಪರಿಶೋಧಕ, ಪತ್ರಿಕಾ ದಿನಾಚರಣೆ ಗೌರವ ಪುರಸ್ಕಾರ 2025 ಪ್ರದಾನ ಸಮಾರಂಭ

Spread the love

ಉಡುಪಿ :-ಪ್ರತಿ ದಿನ ಹೊಸತನ್ನು ತಿಳಿಯಲು, ಕಲಿಯುವ ನಿಟ್ಟಿನಲ್ಲಿ ನಾವು ಬದುಕಿನುದ್ದಕ್ಕೂ ನಾವು ನಿರಂತರ ವಿದ್ಯಾರ್ಥಿಗಳಾಗಬೇಕುದಾನದಿಂದ ಸಿಗುವ ತೃಪ್ತಿ ಬದುಕಿನ ಶ್ರೇಷ್ಠ ಅಂಶ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನದಂಗವಾಗಿ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯಲ್ಲಿ ಮಂಗಳವಾರ ಗೌರವ ಪುರಸ್ಕಾರ 2025 ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ,
ಚಾಲಕ ವೃತ್ತಿ, ಕೂಲಿ ಕಾರ್ಮಿಕ, ವೈದ್ಯ, ಸರಕಾರಿ ನೌಕರ ಸಹಿತ ಯಾವುದೇ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಬದ್ಧತೆಯಿಂದ ದುಡಿವ -ವ್ಯಕ್ತಿ ಆರೋಗ್ಯವಂತ ಸಮಾಜ ನಿರ್ಮಾಣದ ಜತೆಗೆ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಲು ಸಾದ್ಯ
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ವಿಶೇಷ ಕಾರ್ಯಕ್ರಮದಿಂದ ರಾಜ್ಯದಲ್ಲಿಡೆ ಗುರುತಿಸಿದೆ ಇದು ಅಭಿನಂದನೀಯ ಎಂದರು.

ಸಂಘ ಸಂಸ್ಥೆಗಳು ನಾನಾ ಕ್ಷೇತ್ರದ ಸಾಧಕರನ್ನು ಗುರುತಿಸಿದಾಗ ಅವರು ಮತ್ತಷ್ಟು ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ
ಮಲಬಾರ್ ವೈದ್ಯ ಪುರಸ್ಕಾರ: ಡಾ. ಅಶೋಕ್ ಕುಮಾರ್ ವೈ.ಜಿ., ಡಾ. ಛಾಯಾ ಲತಾ. ಮಲಬಾರ್ ವಿಶ್ವ ಲೆಕ್ಕ ಪರಿಶೋಧಕರ ಪುರಸ್ಕಾರ: ಕೆ.ಸುರೇಂದ್ರ ನಾಯಕ್, ಪಿ.ಚಂದ್ರ ಮೋಹನ್ ಹಂದೆ, ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರ: ಸುಭಾಷ್ ಚಂದ್ರ ವಾಗ್ಲೆ, ನಜೀರ್ ಪೋಲ್ಯ ಗೌರವ ಪುರಸ್ಕಾರ 2025 ಸ್ವೀಕರಿಸಿದರು.

ಸನ್ಮಾನಿತರನ್ನು ರಂಜಿನಿ ವಸಂತ್, ಸಿದ್ಧಬಸಯ್ಯ ಚಿಕ್ಕಮಠ, ಉಮೇಶ್ ಆಚಾರ್ಯ, ವಿದ್ಯಾ ಸರಸ್ವತಿ, ಸುಮಿತ್ರಾ ಕೆರೆಮಠ ಪರಿಚಯಿಸಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ,ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆ ವ್ಯವಸ್ಥಾಪಕ ಹಫೀಜ್ ರೆಹಮಾನ್, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಉಪಸ್ಥಿತರಿದ್ದರು.

ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಸ್ವಾಗತಿಸಿದರು. ಗೌರವ ಪುರಸ್ಕಾರ ಸಮಿತಿಯ ಸಂಚಾಲಕ ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಜೋಶಿ ವಂದಿಸಿದರು.
ಅಂತರಾಷ್ಟ್ರೀಯ ಖ್ಯಾತಿಯ ಛಾಯಾ ಗ್ರಾಹಕ ಆಸ್ಟ್ರೋ ಮೋಹನ್ ಹಾಗೂ ಡಾ. ಗಣೇಶ್ ಪ್ರಸಾದ್ ನಾಯಕ್ ಅವರನ್ನು ಅಂತಾರಾಷ್ಟ್ರೀಯ ಪ್ರಶಸ್ತಿ, ಪಿ.ಎಚ್ ಡಿ ಸಾಧನೆಗಾಗಿ ಗೌರವಿಸಲಾಯಿತು.
ಸಮಾರಂಭದಲ್ಲಿ ಪತ್ರಕರ್ತರನ್ನು ಲೆಕ್ಕಪರಿಶೋಧಕರನ್ನು ಮತ್ತು ವೈದ್ಯರನ್ನು ಗುರುತಿಸಲಾಯಿತು

Right Click Disabled