ಪತ್ರಿಕೆಗಳಿಂದ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಳ : ಎಸ್. ಪಿ. ಮಲ್ಲಿಕಾರ್ಜುನ ಬಾಲದಂಡಿ.

ಪತ್ರಿಕಾದಿನಾಚರಣೆಯಲ್ಲಿ ಸಾಧಕರಿಗೆ ಅಭಿನಂದನೆ.
ಮಂಡ್ಯ : ದೃಶ್ಯ ಮಾದ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆ ಪತ್ರಿಕೆಗಳು ಜನರ ವಿಶ್ವಾಸ ಉಳಿಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಿಸಿವೆ ಎಂದು ಮಂಡ್ಯ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.ನಗರದ ಹಿಂದಿಭವನದಲ್ಲಿ ಮಂಡ್ಯ ಜಿಲ್ಲಾ ಪತ್ರಕರ್ತರ, ಮುದ್ರಣಕಾರರ ಮತ್ತು ವಿತರಕರ ವಿವಿದೊದ್ದೇಶ ಸಹಕಾರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಸಾಧಕರನ್ನು ಅಭಿನಂದಿಸಿ ಅವರು ಮಾತನಾಡಿದರು.
ನಾವು ಓದುವ ಸಮಯದಲ್ಲಿ ಪತ್ರಿಕೆಗಳಿಗೆ ಕಾಯುತ್ತಿದ್ದೆವು, ಇಂದಿಗೂ ಸಹಾ ಪತ್ರಿಕೆ ಓದದೆ ದಿನ ಶುರುವಾಗುವುದಿಲ್ಲ, ಎಷ್ಟೋ ಸಲ ನ್ಯೂಸ್ ಪೇಪರ್ ಬರಲಿಲ್ಲ ಅಂದರೆ ವಿಚಾರಗಳ ಕೊರತೆ ಕಾಡುತ್ತದೆ ಎಂದರು.ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಬಂದು ಎಲ್ಲವೂ ಬೇಗ ಸಿಗುತ್ತಿದೆ. ಆದರೆ, ಹಿಂದೆ ಯಾವುದೇ ಸಾಮಾಜಿಕ ಮಾಧ್ಯಮಗಳು ಇರಲಿಲ್ಲ, ಪ್ರತಿಯೊಬ್ಬರು ಪತ್ರಿಕೆಗಳಿಗಾಗಿ ಕಾಯಬೇಕಿತ್ತು. ಈಗಲೂ ಸಹಾ ಎಷ್ಟೇ ಸಮಾಜಿಕ ಮಾಧ್ಯಮ ಇದ್ದರೂ ಕೂಡ ಪತ್ರಿಕೆಗಳು ಪ್ರಭಾವ ಶಾಲಿಯಾಗಿ ಕೆಲಸ ಮಾಡುತ್ತಿವೆ ಎಂದರು.
ಅರ್ಥಿಕ ಸ್ಥಿತಿ, ಮನರಂಜನಾ, ಕ್ರೀಡೆ, ರಾಜಕೀಯ ಸುದ್ದಿಗಳನ್ನು ಪತ್ರಿಕೆಗಳು ಸಂಪೂರ್ಣವಾಗಿ ತಿಳಿದು ವ್ಯಕ್ತಪಡಿಸುತಿದ್ದವು. ಇತ್ತೀಚಿನ ದಿನಗಳಲ್ಲಿ ಕೆಲವು ಸಾಮಾಜಿಕ ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ. ಇಂತಹ ಸಮಯದಲ್ಲಿ ಪತ್ರಿಕೆಗಳು ಒಳ್ಳೆಯ ಸುದ್ದಿಗಳನ್ನು ಮಾಡುತ್ತಿವೆ. ಕೆಲವು ಸಮಾಜಿಕ ಮಾಧ್ಯಮಗಳು ದೊಡ್ಡ ವ್ಯಕ್ತಿಗಳ ಬಗ್ಗೆ ಕೆಟ್ಟದಾಗಿ ಬರೆಯೋದು, ಅಧಿಕಾರಿಗಳ ಬಗ್ಗೆ ತಿಳಿಯೋದು ಮಾಡುತ್ತಿವೆ. ಇತ್ತೀಚೆಗೆ ನಮ್ಮ ಅಧಿಕಾರಿಯ ಬಗ್ಗೆ ಬರೆದು ನಮ್ಮ ಅಧಿಕಾರಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡರು. ಸತ್ಯ ಸತ್ಯತೆಗಳ ಬಗ್ಗೆ ಯೋಚಿಸಿ ಸುದ್ದಿ ಮಾಡಬೇಕು. ಇಂದಿನ ಯುವಕರು ಮಾಧ್ಯಮಕ್ಕೆ ಬರುತ್ತಿಲ್ಲ. ಯುವಕರು ಸೋಷಿಯಲ್ ಮೀಡಿಯಕ್ಕೆ ಮಾರು ಹೋಗಿದ್ದಾರೆ. ಮಾಧ್ಯಮಕ್ಕೆ ಅವರ ಒಲವು ಬರುವುದಕ್ಕೆ ಪತ್ರಿಕೆಗಳು ಒಳ್ಳೆಯ ಸುದ್ದಿಗಳನ್ನು ಬರೆಯಬೇಕು. ನಮ್ಮಲ್ಲಿ ಸೋಷಿಯಲ್ ಮೀಡಿಯಾ ಮಾನಿಟರ್ ವ್ಯವಸ್ಥೆ ಮಾಡುತ್ತಿದ್ದೀವಿ. ಪ್ರತಿದಿನ ಅದನ್ನ ವಾಚ್ ಮಾಡುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದು ಕಂಡುಬಂದರೆ ಕಾನೂನು ರೀತಿ ಶಿಕ್ಷೆ ಇದೆ. ಗಣ್ಯ ವ್ಯಕ್ತಿಗಳ ತೇಜೋವದೆ ಮಾಡುವುದು, ಚಾರಿತ್ರವಧೆ ಮಾಡೋದು, ಮಾನಹಾನಿ ಮಾಡುವುದು, ಸುಳ್ಳು ಸುದ್ದಿ ಹರಡುವುದು ಕೋಮು ಸಂಘರ್ಷಕ್ಕೆ ಕಾರಣವಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು ಬೇರೆ ಜಿಲ್ಲೆಯಲ್ಲಿ ಏನೆ ಆದರೂ ಇಲ್ಲಿ ಪೋಸ್ಟ್ ಮಾಡುತ್ತಾರೆ. ಅವರಿಗೆ ಎಚ್ಚರಿಕೆ ಮಾಡಿದ್ದೇವೆ. ಪತ್ರಿಕೆಗಳು ಮಾಧ್ಯಮಗಳು ಜನರಿಗೆ ಹತ್ತಿರವಾಗುವ ಹಾಗೆ ಸುದ್ದಿಗಳನ್ನು ಮಾಡಬೇಕು ಎಂದು ಅಭಿಪ್ರಾಯಗಳನ್ನು ಹಂಚಿಕೊಂಡರು.
ಜಿಲ್ಲಾಧಿಕಾರಿ ಡಾ.ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಕೆ.ಆರ್.ನಂದಿನಿ, ಕ.ಕಾ.ಪ.ಸಂಘದ ರಾಜ್ಯಾಧ್ಯಕ್ಷ ಹುಲಿ ಅಮರನಾಥ್, ಮಂಡ್ಯ ಜಿಲ್ಲಾಧ್ಯಕ್ಷ ಬಿ.ಕೃಷ್ಣ, ಕೌಡ್ಲೆ ಚನ್ನಪ್ಪ, ಫ್ರಾಂಕ್ಲೀನ್ ಪ್ರಭು, ವಿಕಾಸನ ಸಂಸ್ಥೆ ರಘು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಶಿವಕುಮಾರ್, ವಸಂತ್ ಮೊಟಾಲಿಯಾ, ಪತ್ರಿಕಾವಿತರಕ ಗೋವಿಂದಸ್ವಾಮಿ, ಮುದ್ರಣಕಾರ ನವೀನ್ ಅವರನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದರು.
ವರದಿ: ಲೋಕೇಶ್.ವಿ