ರಸ್ತೆಯಲ್ಲಿ ಗೋವಿನ ರುಂಡ ಹಾಕಿದವರನ್ನು ಕೂಡಲೇ ಬಂಧಿಸಿ. ಶ್ರೀರಾಮಸೇನೆ ಅಗ್ರಹ.

Spread the love

ಗೋವಿನ ರುಂಡ ಕತ್ತರಿಸಿ ವಿಕೃತಿ ಮೆರೆದು, ಬ್ರಹ್ಮಾವರ – ಹೆಬ್ರಿ ರಸ್ತೆಯ ಕುಂಜಾಲುವಿನ ಮುಖ್ಯ ಪೇಟೆಯಲ್ಲಿ ಹಾಕಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಶ್ರೀರಾಮಸೇನೆಯ ಮಂಗಳೂರು ವಿಭಾಗ ಕಾರ್ಯಧ್ಯಕ್ಷ ಜಯರಾಂ ಅಂಬೆಕಲ್ಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಸರಕಾರವನ್ನು ಅಗ್ರಹಿಸಿದ್ದಾರೆ.
ಸಾಮರಸ್ಯದಿಂದ ಬದುಕುತ್ತಿದ್ದ ಕುಂಜಾಲು ವಿನಲ್ಲಿ ಈ ಘಟನೆ ನಡೆದಿರುವುದು ಅತ್ಯಂತ ಖೇದಕರವಾಗಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿಯಲ್ಲಿ ಹಾಗೂ ಕೋಮು ಸೌಹಾರ್ದತೆ ಯನ್ನು ಕೇರಳಿಸುವ ಷಡ್ಯಂತರವಾಗಿದೆ. ಇದನ್ನು ಯಾವತ್ತೂ ಹಿಂದೂ ಸಮಾಜ ಸಹಿಸಲ್ಲ ಹಾಗೂ ಇದನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಸರಕಾರ ಮಾಡಿದರೆ ಮುಂದಿನ ಹಿಂದೂಗಳ ಹೋರಾಟಕ್ಕೆ ಸಜ್ಜಾಗಿ ಎಂದು ಅಂಬೆಕಲ್ಲು ನೇರವಾಗಿ ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

Right Click Disabled