ದೆಹಲಿ ಗಣರಾಜ್ಯೋತ್ಸವದಲ್ಲಿ ಕನ್ನಡತಿ ಕಮಾಲ್..!
ಮಡಿಕೇರಿ : ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎನ್‌ಸಿಸಿಯ (NCC) ಅಖಿಲ ಭಾರತ ಯುವತಿಯರ ವಿಭಾಗದ ಕಮಾಂಡರ್ ಆಗಿ ಕರ್ನಾಟಕ ರಾಜ್ಯದ ಮಡಿಕೇರಿಯ ಪುಣ್ಯ ಪೊನ್ನಮ್ಮ ಅವರು ಆಯ್ಕೆಯಾಗಿದ್ದಾರೆ. ಈ ವಿಚಾರ ತಿಳಿದು ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.
ದೆಹಲಿಯಲ್ಲಿ ಗಣರಾಜ್ಯೋತ್ಸವ ತಯಾರಿ ಅದ್ದೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ದೇಶದ ಪ್ರಮುಖ ಗಣ್ಯರು ಭಾಗವಹಿಸುವುದರಿಂದ ಖಾಕಿ ಪಡೆ ಅಲರ್ಟ್ ಆಗಿದೆ. ದೆಹಲಿಯಲ್ಲಿ ಜ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪುಣ್ಯ ಪೊನ್ನಮ್ಮ ಅವರು ಎನ್‌ಸಿಸಿಯ ಅಖಿಲ ಭಾರತ ಯುವತಿಯರ ವಿಭಾಗವನ್ನು ಮುನ್ನಡೆಸಲಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ವಿವಿ ಕಾನೂನಿ ವಿದ್ಯಾರ್ಥಿನಿಯಾಗಿರುವ ಪುಣ್ಯ ಅವರು ಮಡಿಕೇರಿ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ಅವರ ಪುತ್ರಿಯಾಗಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಬಗ್ಗೆ ಪುಣ್ಯ ಪೊನ್ನಮ್ಮ ಖುಷಿ ಹಂಚಿಕೊಂಡಿದ್ದಾರೆ.