ಕುಂದಾಪುರ : ಇದುವರೆಗೆ ನಮ್ಮ ರಾಜ್ಯದಿಂದ ಸಂಗ್ರಹವಾದ ಜಿಎಸ್‌ಟಿ ತೆರಿಗೆಯ ಪಾಲಿನಲ್ಲಿ ರಾಜ್ಯಕ್ಕೆ ಬರಬೇಕಿರುವ ಜಿಎಸ್ಟಿಯ ಪಾಲನ್ನು ಕೇಂದ್ರ ಕೊಡದೆ ಇರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಆದಷ್ಟು ಬೇಗ ಕೇಂದ್ರ ಸರ್ಕಾರ ಬಾಕಿ ಇರಿಸಿಕೊಂಡಿರುವ ಕರ್ನಾಟಕದ ಜಿಎಸ್ಟಿ ಪಾಲನ್ನು ನೀಡಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳೆ ಮಾತನಾಡಿದರು. ಕುಂದಾಪುರದ ಖಾಸಗಿ ಕಾರ್ಯಕ್ರಮ ಹೊಂದಿರಲಿ ಭಾಗವಹಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಚಿವ ಜಾರಕಿಹೊಳಿ ಈಗಾಗಲೇ ಹಲವು ಬಾರಿ ನಾವು ಕೇಂದ್ರಕ್ಕೆ ಜಿಎಸ್‌ಟಿ ಪಾಲನ್ನ ನೀಡುವಂತೆ ಕೋರಿದ್ದೇವೆ. ಆದರೆ ಇದುವರೆಗೆ ರಾಜ್ಯಕ್ಕೆ ಸೇರಬೇಕಾಗಿರುವ ಹಣವನ್ನು ನೀಡಿಲ್ಲ ತಕ್ಷಣ ನೀಡಬೇಕು ಿಎಸ್‌ಟಿ ಪಾಲು ರಾಜ್ಯಕ್ಕೆ ದೊರಕಿದರೆ ರಾಜ್ಯದಲ್ಲಿ ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಕೇಂದ್ರದ ನಿತಿನ್ ಗಳಿಕೆ ಚರ್ಚಿಸಿದ್ದು ರಾಜ್ಯದಲ್ಲಿ ಕರಾವಳಿ ತೀರದ ರಿಂಗ್ ರೋಡ್ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಭರವಸೆ ದೊರಕಿದೆ ಎಂದಿದ್ದಾರೆ.