ಮಾಯಸಂದ್ರ ಗ್ರಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ,
ಕಿಂಗ್ ಅಂಡ್ ಕಿಂಗ್ ಮೇಕರ್ ಗೆ ಕೈ ಕೊಟ್ಟ ಭವಿಷ್ಯ! ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ.

Spread the love

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ಎರಡನೇ ಅವಧಿಯ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜುನಾಥ್ ಎಂ.ಜಿ. ಮತ್ತು ವಿಶಾಲಕ್ಷಮ್ಮ ಆಯ್ಕೆಯಾಗಿದ್ದಾರೆ.

15 ಸದಸ್ಯ ಬಲವುಳ್ಳ ಮಾಯಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಾಯಸಂದ್ರ ಕ್ಷೇತ್ರದ ಇಬ್ಬರು ಸದಸ್ಯರಾದ ಅಜಿತ್ ಪ್ರಸಾದ್ ಮತ್ತು ಮಂಜುನಾಥ್ ಎಂ‌.ಜಿ, ನಾಮಪತ್ರ ಸಲ್ಲಿಸಿದರು. ಚುನಾವಣಾ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯನ್ನು ಕೈಗೊಂಡು ಇಬ್ಬರು ಸ್ಪರ್ಧಿಗಳ ನಡುವೆ ಚುನಾವಣೆ ನಡೆಸಿದರು. ಚುನಾವಣೆಯಲ್ಲಿ ಸದಸ್ಯ ಅಜಿತ್ ಪ್ರಸಾದ್ ಆರು ಮತಗಳನ್ನು ಪಡೆದರು. ಪ್ರತಿಸ್ಪರ್ಧಿ ಸದಸ್ಯ ಮಂಜುನಾಥ ಎಂ‌.ಜಿ ಒಂಭತ್ತು ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡ ಶೆಟ್ಟಿಕೆರೆ ಕ್ಷೇತ್ರದ ಸದಸ್ಯೆ ವಿಶಾಲಕ್ಷಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಎಂದು ಚುನಾವಣೆ ಅಧಿಕಾರಿಗಳಾದ ಹೇಮಾವತಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ್ ಅಧಿಕೃತವಾಗಿ ಘೋಷಿಸಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳು ‌ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ನೂತನ ಗ್ರಾ.ಪಂ.ಅಧ್ಯಕ್ಷರಾದ ಮಂಜುನಾಥ್ ಎಂ.ಜಿ. ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿಯೂ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗುವುದು. ಶಿಕ್ಷಣ, ಸರ್ಕಾರಿಶಾಲೆಗಳು, ಗ್ರಂಥಾಲಯಗಳು ಸೇರಿದಂತೆ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಎಲ್ಲಾ ಸದಸ್ಯರ ಸಹಕಾರದೊಂದಿಗೆ ಒಮ್ಮತದ ಪಾರದರ್ಶಕ ಆಡಳಿತ ನಡೆಸುವ ಗುರಿ ಹೊಂದಿದ್ದು ತಮ್ಮೆಲ್ಲರ ಸಹಕಾರ ಅತ್ಯಗತ್ಯ, ಆದರ್ಶ ಗ್ರಾಮ ಪಂಚಾಯಿತಿಯಾಗಿ ಮಾರ್ಪಡಿಸುವ ಸಂಕಲ್ಪ ಹೊಂದಿರುವುದಾಗಿ ಮನವಿ ಮಾಡುತ್ತಾ, ಆಯ್ಕೆಗೆ ಸಹಕರಿಸಿದ ಪ್ರತಿಯೊಬ್ಬ ಸದಸ್ಯರಿಗೂ ಗ್ರಾಮ ಪಂಚಾಯಿತಿ ಆಡಳಿತಕ್ಕೂ, ಗ್ರಾಮಸ್ಥರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಈ ವೇಳೆ ಸಾರ್ವಜನಿಕ ವಲಯದಲ್ಲಿ ಕಿಂಗ್ ಅಂಡ್ ಕಿಂಗ್ ಮೇಕರ್ ಗಳು ಎಂದು ಹಗಲುಗನಸು ಕಾಣುತ್ತಿದ್ದ ಕೆಲವರಿಗೆ ಈ ಬಾರಿಯ‌ ಮಾಯಸಂದ್ರ ಗ್ರಾಮ ಪಂಚಾಯಿತಿ ಚುನಾವಣೆಯು ತಕ್ಕ ಉತ್ತರ ನೀಡಿದೆ ಎಂಬ ಮಾತುಗಳು, ಚರ್ಚೆಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದ್ದವು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಮಂಗಳ ಗೌರಮ್ಮ ಹೊನ್ನಪ್ಪ. ಭಾರತಿಲಕ್ಷ್ಮಣ್. ಪೂರ್ಣಿಮವಾಸು. ಶ್ರೀನಿವಾಸ್ (ಕಾಳಿ).ಖಾದೀರ್ ಪಾಷಾ.ಹುಸ್ನಾ ಭಾನು ತಬ್ರೇಜ್. ಚಂದ್ರು, ಮುಂತಾದ ಸದಸ್ಯರುಗಳು‌ ಮತ್ತು ರೈತ ಸಂಘದ ಗೌರವಾಧ್ಯಕ್ಷರಾದ ಕಣಕೂರು ಚಂದ್ರಶೇಖರ್. ಮುಖಂಡರಾದ ಆಟೋ ರಂಗಣ್ಣ. ಜೀವನ ಪ್ರಕಾಶ್. ಕಿಫಾಯತ್. ಮಂಜುನಾಥ್ ಗುಂಡ. ಕೃಷ್ಣಮೂರ್ತಿ.ಕನ್ನೆ. ನಸ್ರುಲ್ಲಾ. ಲೋಕೇಶ್.ರಂಗಸ್ವಾಮಿ. ಸೇರಿದಂತೆ ಪ್ರಭಾರ ಪಿಡಿಒ ಸುರೇಶ್ ಸಿಬ್ಬಂದಿ ವರ್ಗ, ಹಲವಾರು ಗ್ರಾಮಸ್ಥರು ,ಯುವ ಮುಖಂಡರುಗಳು, ಸ್ಥಳೀಯ ಜನಪ್ರತಿನಿಧಿಗಳು, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಶುಭ ಕೋರಿದರು.

Right Click Disabled