ನಕಲಿ ಸಂಪಾದಕ ವಿ. ಗೋಪಾಲ ಶೆಟ್ಟಿ, ಪತ್ರಿಕಾಗೋಷ್ಠಿಯಲ್ಲಿ ನಕಲಿಗೆ ಸಾಥ್ ನೀಡಿದ ಸತೀಶ್ ಖಾರ್ವಿ ಮತ್ತು ಸುಳ್ಳು ವರದಿ ಪ್ರಕಟಿಸಿ ಮಾನಹಾನಿ ಮಾಡಿದ ಗಣೇಶ್ ದಾಸ್ ಖಾರ್ವಿ ಮೇಲೆ ಈIಖ ದಾಖಲು

Spread the love

ವಿ. ಗೋಪಾಲ ಶೆಟ್ಟಿ ಎನ್ನುವ ನಕಲಿ ಸಂಪಾದಕನ ಕಿರುಕುಳದಿಂದ ಬೇಸತ್ತು ಹಾಯ್ ಕರಾವಳಿ ಎನ್ನುವ ಕನ್ನಡ ಪತ್ರಿಕೆ ಅಧಿಕೃತ ಮಾಲಿಕರಾದ ಶ್ರೀಮತಿ ಆಶಾರವರು ಅಧಿಕೃತವಾಗಿ /ಪ್ರಕಾಶಕ/ಮುದ್ರಕ/ ಸಂಪಾದಕರಾಗಿ ಶ್ರೀ ಅಮ್ಮರವಿಯವರ ಮೇಲೆ ಸುಖಾ ಸುಮ್ಮನೆ ಸಿಕ್ಕ ಠಾಣೆಯಲ್ಲಿ ದೂರು ನೀಡಿದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ, ಪ್ರತಿಕಾಗೋಷ್ಠಿ ಕರೆದು ಮಾದ್ಯಮದವರನ್ನು ದಿಕ್ಕು ತಲಿಸುವ ಗುತ್ತಿಗೆ ಪಡೆದಿರುವ ನಕಲಿ ಸಂಪಾದಕ ವಿ.ಗೋಪಾಲ ಶೆಟ್ಟಿ , ಮತ್ತು ಈತನಿಗೆ ಸಾಥ್ ನೀಡಿ ಪತ್ರಿಕಾಗೋಷ್ಠಿಯಲ್ಲಿ ಸತ್ಯದ ಅರಿವಿಲ್ಲದೇ ಸುಳ್ಳು ಅಪವಾದ ಮಾಡಿದ ಸತೀಶ್ ಖಾರ್ವಿ ಹಾಗೂ ಇವರಿಗೆ ಪತ್ರಿಕಾಗೋಷ್ಠಿ ಮಾಡಿ ಎಂದು ಸ್ಕ್ರೀನ್ ಪ್ಲೇ ಮಾಡಿದ ಪತ್ರಕರ್ತ ಗಣೇಶ್ ದಾಸ್ ಖಾರ್ವಿ. ಈ ಮೂವರ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ಸಾರಂಶ :
ಹಾಯ್ ಕರಾವಳಿ ಪತ್ರಿಕೆಯನ್ನು ವಿ.ಗೋಪಾಲ ಶೆಟ್ಟಿಯಿಂದ ಖರೀದಿ ಮಾಡಿ ಅಧಿಕೃತವಾಗಿ 2020-21 ರಲ್ಲಿ ಪಡೆದುಕೊಂಡು, ವರ್ಗಾವಣೆ ಸಹ ಆಗಿರುತ್ತದೆ. ಅಂದಿನಿAದ ಹಾಯ್ ಕರಾವಳಿ ಪತ್ರಿಕೆ ಪ್ರಕಟಿಸಲು RNI ಅನುಮತಿ ನೀಡಿರುವುದಾಗಿದೆ. ಅದರ ಮೇಲೆ ನಾನು ಪತ್ರಿಕೆಯನ್ನು ಮೇಲಾ ದರ್ಜೆಗೆ ಕೊಂಡು ಹೋಗಿ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರನ್ನು ಪಡೆದು , ಅಭಿವೃದ್ಧಿ ಹೊಂದಿದ್ದನ್ನು ಕಂಡು ವಿ.ಗೋಪಾಲ ಶೆಟ್ಟಿ ನನ್ನ ಬಳಿಗೆ ಬಂದು ನನ್ನ ಪತ್ರಿಕೆ ವಾಪಸು ನೀಡಿ ನಾನೇ ನಡೆಸುತ್ತೇನೆ, ಇಲ್ಲವದಲ್ಲಿ 15 ಲಕ್ಷ ರೂಪಾಯಿ ನೀಡಿ ಎಂದು ಕೇಳಿದರು. ಅದಕ್ಕೆ ನಾನು ನಿರಾಕರಿಸಿದೆ ಅದಕ್ಕೆ ನೀನು ಒಬ್ಬಳು ದಲಿತ ಮಹಿಳೆ ನೀನು ಈ ಪತ್ರಿಕೆಗೆ ನಡೆಸುತ್ತಿಯ ನೋಡುತ್ತೇನೆ. ನಿನ್ನ ಗಂಡನ ಮಾನ ಮಾರ್ಯದೆಯನ್ನು ಹರಾಜು ಹಾಕಿ ನಿಮ್ಮನ್ನು ಬೀದಿಗೆ ತರುತ್ತೇನೆ ಎಂದು ಅವ್ಯಾಚ ಪದಗಳನ್ನು ಮತ್ತು ಅಸಂವಿಧಾನಿಕ ಪದಗಳ ಬಳಕೆ ಮಾಡಿ, ಗಂಡ ಹೆಂಡತಿಯನ್ನು ಕೊಲೆ ಮಾಡುತ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ಇತ್ತೀಚೆಗೆ ನನಗೆ ತಿಳಿದು ಬಂದ ಹಾಗೆ ಉಡುಪಿ ಜಿಲ್ಲೆಯಿಂದ ವಿ.ಗೋಪಾಲ ಶೆಟ್ಟಿ ಎನ್ನುವವರು ಪತ್ರಿಕೆಯನ್ನು ಪ್ರಕಟಿಸುತ್ತಿದ್ದು, ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ Pಆಈ ಮೂಲಕ ಪ್ರಕಟಿಸುತ್ತಿದ್ದಾರೆ ಎಂದು ತಿಳಿದು ಬಂದಿರುತ್ತದೆ. ತದನಂತರ ನಾನು ಈ ಬಗ್ಗೆ ಪರಿಶೀಲನೆ ಮಾಡಿದಾಗ ಎಲ್ಲಾ ವಿಚಾರವು ನನ್ನ ಗಮನಕ್ಕೆ ಬಂದಿರುತ್ತದೆ.ನನ್ನ ಅಧಿಕೃತ ಪತ್ರಿಕೆಯಾದ ಹಾಯ್ ಕರಾವಳಿ ಪತ್ರಿಕೆಯನ್ನು ವಿ. ಗೋಪಾಲ ಶೆಟ್ಟಿ ಎನ್ನುವ ವ್ಯಕ್ತಿ ಹಳೆಯ ದಾಖಲೆಗಳನ್ನು ಕಂದಾಯ ಇಲಾಖೆ ಹಾಗೂ ಪೋಲೀಸ್ ಇಲಾಖೆ ಮತ್ತು ಇನ್ನಿತರ ಇಲಾಖೆಗಳಿಗೆ ತಪ್ಪು ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ಅದಲ್ಲದೆ ಸೋಷಿಯಲ್ ಮಾಧ್ಯಮದಲ್ಲಿ ನನ್ನ ಹಾಯ್ ಕರಾವಳಿ ಎಂಬ ಹೆಸರಿನಿಂದ ಯೂಟ್ಯೂಬ್ ಮತ್ತು ನ್ಯೂಸ್ ವೆಬ್‌ಸೈಟ್‌ನ್ನು ಅಭಿವೃದ್ಧಿ ಪಡಿಸಿಕೊಂಡು ಪತ್ರಿಕೆಯನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ.ಅಲ್ಲದೇ ಈತ ಕಲ್ಲುಕೋರೆ, ಮರಳು ದಂಧೆ ಮಾಡುವರ ಹತ್ತಿರ ಹಣ ಪಡೆದು, ಮತ್ತು ಕೆಲವು ಸರಕಾರಿ ಅಧಿಕಾರಿಗಳಿಗೂ ಬೆದರಿಕೆ ಹಾಕಿ ನನ್ನ ಪತ್ರಿಕೆಯ ಹೆಸರನ್ನು ಸಾರ್ವಜನಿಕ ವಲಯದಲ್ಲಿ ಕೇಡಿಸುತ್ತಿದ್ದಾನೆ. ತನ್ನ ನಕಲಿ ಮಾಲೀಕತ್ವದ ಪತ್ರಿಕೆಯ ಹೆಸರಿನಲ್ಲಿ ಅನಧೀಕೃತವಾದ ಜಾಹೀರಾತು ಸಂಗ್ರಹಿಸಿ ಪ್ರಕಟ ಮಾಡಿದ್ದು, ಇದು ಒಂದು ಜಿಲ್ಲೆಯ ಅಧಿಕಾರಿ ವರ್ಗಕ್ಕೆ ಮತ್ತು ಜಿಲ್ಲೆಯ ಜನತೆಗೆ ಮಾಡಿದ ಬಹುದೊಡ್ಡ ವಂಚನೆ ಆಗಿದೆ. ಅದರ ನಂತರ ದಿನಾಂಕ 05/02/2022 ವಿ.ಗೋಪಾಲ ಶೆಟ್ಟಿ ಕಂಡ್ಲೂರು ಗ್ರಾ. ಪೊಲೀಸ್ ಠಾಣೆಯಲ್ಲಿ ನನ್ನ ಗಂಡನ ಮೇಲೆ ದೂರು ನೀಡುತ್ತಾನೆ. ಅದರ ನಂತರ ಪೊಲೀಸ್ ಇಲಾಖೆ ಕೂಲಂಕುಶವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುತ್ತದೆ. ದಿನಾಂಕ 12/12/2023ರಂದು ಉಡುಪಿ ನ್ಯಾಯಾಲಯ ಅಮ್ಮ ರವಿಯವರ ಮೇಲೆ ಹಾಕಿದ ಎಲ್ಲಾ ಆರೋಪಗಳಿಗೆ ಸರಿಯಾದ ಸಾಕ್ಷಿಯನ್ನು ನೀಡಿಲ್ಲ ಎಂದು ವಿ.ಗೋಪಾಲ ಶೆಟ್ಟಿಯ ದೂರನ್ನು ವಜಾಗೊಳಿಸಿದೆ. ಅಲ್ಲದೆ ಈ ಮಧ್ಯೆ ವಿ.ಗೋಪಾಲ ಶೆಟ್ಟಿ RNI ದೆಹಲಿಗೆ ದೂರು ನೀಡಿ ನನಗೆ 2 ವರ್ಷಗಳ ಪತ್ರಿಕೆ ನಡೆಸಲು ಅಡಿಪಡಿಸಿದ್ದು, RNI ಸಹ ಕೂಲಂಕುಶವಾಗಿ ಪರಿಶೀಲಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ರವರು ಸಹ ಇದ್ದು ಆಶಾರವರಿಗೆ ಸೇರಿದ್ದು ಎಂದು ವರದಿ ನೀಡಿದರು. ಈಗ ಮತ್ತೆ ವಿ. ಗೋಪಾಲ ಶೆಟ್ಟಿ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಮತ್ತೆ ದೂರು ನೀಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಪದೇ ಪದೇ ಇವರ ಕಿರುಕುಳ ಹೆಚ್ಚಾಗಿದ್ದು ಇವರ ವರ್ತನೆ ಮೀತಿ ಮೀರಿದ್ದು, ಜಿಲ್ಲಾಧಿಕಾರಿ ವರದಿ, ಪೊಲೀಸ್ ವರದಿ, ನ್ಯಾಯಾಲಯದ ತೀರ್ಪನ್ನು ಸಹ ಉಲ್ಲಂಘನೆ ಮಾಡಿ ಮಹಿಳೆಯ ಮೇಲೆ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನಾವುಗಳು ಸಂಸ್ಥೆಯ ಕೆಲಸಗಳಿಗೆ ಕರ್ಜೆಯಿಂದ ಉಡುಪಿ ಹಾಗೂ ಇತರ ಸ್ಥಳಗಳಿಗೆ ಹೋಗುವುದರಿಂದ ಈ ಮೂವರು ವ್ಯಕ್ತಿಗಳಿಂದ ನಮ್ಮ ಜೀವಕ್ಕೆ ಅಪಾಯವಿದ್ದು, ನಮಗೆ ಏನೇ ಜೀವ ಅಪಾಯ ಆದರೂ ಅದಕ್ಕೆ ಇವರುಗಳೇ ಮೂಲ ಕಾರಣ. ದಿನಾಂಕ 26/12/2023ರಂದು ವಿ.ಗೋಪಾಲ ಶೆಟ್ಟಿ ಮತ್ತು ಸತೀಶ್ ಖಾರ್ವಿ ಹಾಗೂ ಇತರರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮತ್ತೆ ಪತ್ರಿಕಾ ಗೋಷ್ಠಿ ನಡೆಸಿ ನನ್ನ , ನನ್ನ ಗಂಡನ ಮತ್ತು ನನ್ನ ಮಾಲಿಕತ್ವದ ಹಾಯ್ ಕರಾವಳಿ ಪತ್ರಿಕೆಯ ಬಗ್ಗೆ ಸುಳ್ಳು , ಅಲ್ಲ ಸಲ್ಲದ ಅಪವಾದ ಮಾಡಿ ನಮ್ಮ ಮಾನಹಾನಿ ಮಾಡಿದಲ್ಲದೇ, ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ ತನಿಖಾ ವರದಿ ಅಗೌರವ ತೊರಿದ್ದು ಅಲ್ಲದೇ ಪೋಲಿಸ್ ತನಿಖಾ ವರದಿಯನ್ನು ಉಲ್ಲಂಘಿಸಿ ಸಂವಿಧಾನವನ್ನು ಅವಮಾನ ಮಾಡಿದ್ದಾರೆ. ಅಲ್ಲದೇ ನಮ್ಮ ಪತ್ರಿಕೆಯ ಹೆಸರನ್ನು ಬಳಸಿ ಸಾಕಷ್ಟು ಜಾಹಿರಾತು ಪಡೆದು ನಮ್ಮ ಸಂಸ್ಥೆಗೆ ಆದಾಯದಲ್ಲಿ ಸಹ ಸಾಕಷ್ಟು ಹಾನಿ ಮಾಡಿದ್ದು, ನಮ್ಮ ಸಂಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಲ್ಲಸಲ್ಲದ ವಿಷಯಗಳನ್ನು ಬರೆದು ನಮಗೂ ಜಾಹಿರಾತು ಬರುವುದಕ್ಕೆ ತಡೆಯೊಡಿದ್ದಾರೆ. ಪ್ರತಿಕಾಗೋಷ್ಠಿ ಕರೆದು ಮಾದ್ಯಮದವರನ್ನು ದಿಕ್ಕು ತಪಿಸುವ ನಕಲಿ ಸಂಪಾದಕ ವಿ. ಗೋಪಾಲ ಶೆಟ್ಟಿ , ಮತ್ತು ಈತನಿಗೆ ಸಾಥ್ ನೀಡಿ ಪತ್ರಿಕಾಗೋಷ್ಠಿಯಲ್ಲಿ ಸತ್ಯದ ಅರಿವಿಲ್ಲದೇ ಸುಳ್ಳು ಅಪವಾದ ಮಾಡಿದ ಸತೀಶ್ ಖಾರ್ವಿ ಹಾಗೂ ಇವರಿಗೆ ಪತ್ರಿಕಾಗೋಷ್ಠಿ ಮಾಡಿ ಎಂದು ಸ್ಕ್ರೀನ್ ಪ್ಲೇ ಮಾಡಿದ ಪತ್ರಕರ್ತ ಗಣೇಶ್ ದಾಸ್ ಖಾರ್ವಿ ತನ್ನ ಫೇಸ್ ಬುಕ್ ಖಾತೆಯಲ್ಲಿಸುಳ್ಳು ವರದಿಯನ್ನು ಬರೆದು ಅಲ್ಲದೇ ಕಿಂಗ್ ಫಿಶರ್ ವಾಟ್ಸಪ್ ಗ್ರೂಪ್ನಲ್ಲಿ ಕೊಂಕಣಿಯಲ್ಲಿ ಸಹ ತನ್ನ ವಿಕೃತವನ್ನು ತೋರಿದ್ದಾನೆ. ಆದ್ದರಿಂದ ಈ ನನ್ನ ಹಾಯ್ ಕರಾವಳಿ ಪತ್ರಿಕೆಯನ್ನು ನಾನು ವಿ.ಗೋಪಾಲ ಶೆಟ್ಟಿಗೆ ಪ್ರಕಾಶನ/ಸಂಪಾದಕ/ಮುದ್ರಕ/ಮಾಲಕತ್ವಕ್ಕೆ ಯಾವುದೇ ಒಪ್ಪಿಗೆ ನೀಡಿರುವುದಿಲ್ಲ. ಇದು ಉಡುಪಿ ಜಿಲ್ಲೆಯಲ್ಲಿ ಗಂಭೀರ ಮತ್ತು ಬಹುದೊಡ್ಡ ಮೋಸದ ಪ್ರಕರಣವಾಗಿದ್ದು, ಮಾನ್ಯರಾದ ತಾವು ಈ ಬಗ್ಗೆ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಕೂಡಲೇ ಕ್ರಿಮಿನಲ್ ಪ್ರಕರಣದ ಸೆಕ್ಷನ್ ಹಾಕಿ ಎಫ್.ಐ.ಆರ್. ಮಾಡಿ ಆ ವ್ಯಕ್ತಿಯನ್ನು ಬಂಧಿಸಿ, ಮತ್ತು ಇದಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಿ ಈ ಕೂಡಲೇ ಈ ಪತ್ರಿಕೆಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಕ್ಕಾಗಲೀ ಮುದ್ರಿಸುದಾಗಲೀ ಮಾಡದಂತೆ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದಯಾಳುಗಳಾದ ತಾವು ದಲಿತ ಮಹಿಳೆಗೆ ನ್ಯಾಯ ಕೊಡಿಸಬೇಕೆಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಾಯ್ ಕರಾವಳಿಯ ಅಧೀಕೃತ ಮಾಲಿಕತ್ವ ಹೊಂದಿರುವ ಶ್ರೀಮತಿ ಆಶಾರವರು ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 249/2023 ಕಲಂ : 420, 465, 471, 504, 506, 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Right Click Disabled