ನಂಬಿಕೆಗೆೆ ದ್ರೋಹ ಎಸಗಿದ ಹರ್ಕ್ಯುಲಸ್ ಜಿಮ್ ಸತೀಶ್ ಖಾರ್ವಿ? ನಯವಂಚಕ ಸತೀಶ್ ಜಿಮ್ ಗೆ ಬರುವ ಅಧಿಕಾರಿಗಳು ಮತ್ತು ಹಣವಂತರೆ ಇವನ ಟಾರ್ಗೆಟ್?

Spread the love

ಕುಂದಾಪುರದ ಭಂಡಾರಕಾರ್ಸ್ ಕಾಲೇಜ್ ಹತ್ತಿರದಲ್ಲೇ ಇರುವುದು ಸತೀಶ್ ಖಾರ್ವಿ ಎನ್ನುವ ನಯ ವಂಚಕನ ಹರ್ಕ್ಯುಲಸ್ ಜಿಮ್, ಇದೆ ಇವನ ಜೀವಾಳ. ಈ ಜಿಮ್‌ಗೆ ಸೇರಿ ಪಂಗನಾಮ ಹಾಕಿಸಿ ಕೊಂಡವರು ಎಷ್ಟು ಜನರೋ ಆ ದೇವನೇ ಬಲ್ಲ. ಅಸಲಿಗೆ ಫಾರ್ಮ್ಯಾಲ್ ಶರ್ಟ್, ಜೀನ್ಸ್ ಪ್ಯಾಂಟ್ ಗೆ ಕಾರ್ ರಿಮೋಟ್ ಕೀ ಸಿಕ್ಕಿಸಿ ಪೋಸ್ ಕೊಡುವುದೇ ಇವನ ಯೂನಿಕ್ ಸ್ಟೈಲ್.

ಇವನ ಟಿಪ್ ಟಾಪ್ ಉಡುಗೆ ತೊಡಿಗೆ ನೋಡಿ ಇವನು ಸಭ್ಯಸ್ತ ಎಂದು ಕುರಿ ಆದವರು ಬಹುಮಂದಿ ಎನ್ನುತ್ತಾರೆ ಕುಂದಾಪುರದ ಜನತೆ. ಅಸಲಿಗೆ ಇವನ ಬಂಡವಾಳವನ್ನ ಬಯಲಿಗೆ ತಂದವರೇ ಇವನಿಂದ ಮೋಸ ಹೋದ ಜಿ.ವಿ. ಅಶೋಕ್ ಎನ್ನುವ ನಿವೃತ್ತಿ ಬ್ಯಾಂಕ್ ಉದ್ಯೋಗಿ, ಇವರು ಕೋಟ ಮೂಲದವರು, ಇದೇ ಜಿಮ್‌ನಲ್ಲಿ ವರ್ಕ್ ಔಟ್ ಮಾಡಲಿಕ್ಕೆ ಬರುತ್ತಿದ್ದವರು. ಇವರು ಒಬ್ಬ ಜಂಟಲ್ ಮ್ಯಾನ್ ಎನ್ನುವುದಕ್ಕೆ ಎರಡು ಮಾತಿಲ್ಲ. ಇವರ ಮತ್ತು ಸತೀಶ್ ಖಾರ್ವಿ ಅವರ ಉತ್ತಮ ಬಾಂದವ್ಯವೇ ಇಂದು ಇವರಿಗೆ ಮುಳ್ಳು ಆಯಿತು ಎನ್ನುವುದೇ ವಿಪರ್ಯಾಸ.

ಜಿ. ವಿ ಅಶೋಕ್‌ರವರ ಮುಗ್ದತೆ, ಕ್ರೀಡಾ ಅಭಿಮಾನ ಇಂದು ಅವ್ರಿಗೆ ಸ್ಟೇಷನ್ ಮೆಟ್ಟಿಲು ಹತ್ತುವಂತೆ ಮಾಡಿದೆ. ಇದೇ ಸತೀಶ್ ಖಾರ್ವಿಯವರಿಗೆ ಕಜಕಿ ಸ್ಥಾನದಲ್ಲಿ ಸ್ಪರ್ಧೆಗೆ ಹೋಗುವಾಗ, ನಿರ್ಧಿಷ್ಟ ನಿಗದಿತ ಸಮಯದಲ್ಲಿ ಎಲ್ಲಿಯೂ 90,000 ಹೊಂದಿಸಲು ಸಾಧ್ಯವಾಗದೇ ಇದ್ದಾಗ ಜಿ.ವಿ ಅಶೋಕ್ ರವರು 90 ಸಾವಿರ ರೂಪಾಯಿಯನ್ನು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನೀಡಿದ್ದರು. ನಂತರ ಕಜಕಿಸ್ತಾನದಿಂದ ಬಂದು ಸರಿ ಸುಮಾರು ಐದು ಆರು ತಿಂಗಳ ನಂತರ ಅವರ ಹಣವನ್ನು ಹಿಂದಿರುಗಿಸಿದ್ದಾರೆ.

ತದನಂತರ ಜಿ. ವಿ ಅಶೋಕ್ ಮತ್ತು ಸತೀಶ್ ಖಾರ್ವಿಯವರ ಗೆಳೆತನ ಇನ್ನಷ್ಟು ಗಟ್ಟಿಯಾಯಿತು. ನಂತರ ಪವರ್ ಲಿಫ್ಟಿಂಗ್ ಬಾರ್ ಸ್ಟಾಂಡ್ ಮತ್ತು ವೆಟ್ಸ್ 1ಲಕ್ಷ್ಮದ 10ಸಾವಿರದ ಮೆಕಾನಿಸಂ ಅಶೋಕ್ ಬಳಿ ಇರುವುದನ್ನು ಕ್ರೀಡಾ ಮನೋಭಾವದಿಂದ ಇನ್ನಷ್ಟು ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಕೇವಲ 70 ಸಾವಿರಕ್ಕೆ ಸತೀಶ್ ಅವರಿಗೆ ನೀಡಿದರು. ಅದನ್ನು ಸಹ ಸಲ್ಪ ಸಲ್ಪ ಹಣ ನೀಡಿ ಸತೀಶ್ ಹಣ ಮರುಪಾವತಿಸಿದ್ದರು. ಸತೀಶ್ ಖಾರ್ವಿಯವರ ಜಿಮ್‌ನಲ್ಲಿರುವ ಪವರ್ ಲಿಫ್ಟಿಂಗ್ ಪ್ಲ್ಯಾಟ್ ಫಾರ್ಮ್ ಸಹ ಜೀವಿ ಅಶೋಕರವರದ್ದು, ಆದರೆ ಅದನ್ನು ಹಿಂದೆ ಪಡೆಯಲು ಅಶೋಕ್ ರವರು ಭಯ ಬೀತರಾಗಿದ್ದಾರೆ.

ಕರೋನ ಸಮಯದಲ್ಲಿ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಮತ್ತೆ ಸತೀಶ್ ಅಶೋಕ್ ರವರಲ್ಲಿ ಮೂರು ಲಕ್ಷ ರೂಪಾಯಿಯನ್ನು ಸಹಾಯ ನೀಡಿ ಎಂದು ಸತೀಶ್ ಖಾರ್ವಿ ನನ್ನ ಕಾರ್ ಡಾಕ್ಯುಮೆಂಟ್ಸ್, ಬುಲೆಟ್ ಡಾಕ್ಯುಮೆಂಟ್ಸ್ ಕೊಡುತ್ತೇನೆ ಎಂದು ಹೇಳುತ್ತಾರೆ. ಆದರೆ ಯಾವುದೇ ಡಾಕ್ಯುಮೆಂಟ್ಸ್ ಮತ್ತು ಬ್ಲಾಂಕ್ ಚೆಕ್ ಪಡೆಯದೇ, ಒಬ್ಬ ಕ್ರೀಡಾಪಟು ಮತ್ತು ಸ್ನೇಹಿತನಿಗೆ ಸಹಾಯವಾಗಲಿ ಎಂದು ಅಶೋಕ್ ಮೂರು ಲಕ್ಷ ರೂಪಾಯಿಯನ್ನು ಚೆಕ್ ಮುಖಾಂತರ ನೀಡುತ್ತಾರೆ. ಆದರೆ ಅಶೋಕ್ ರವರ ಪುತ್ರಿಯ ಮದುವೆ ಸಂದರ್ಭದಲ್ಲಿ ತಾನು ನೀಡಿದ ಹಣವನ್ನು ಸತೀಶ್ ರವರಲ್ಲಿ ಕೇಳುತ್ತಾರೆ. ಆಗ ಸತೀಶ್ ನನ್ನಲ್ಲಿ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಆರು ಸಾವಿರ ರೂಪಾಯಿಗಳನ್ನು ಮೂರು ಬಾರಿ ಅಕೌಂಟ್ ಟ್ರಾನ್ಸ್ಫರ್ ಮಾಡಿದ್ದಾರೆ. ಅದರ ನಂತರ ಅಶೋಕ್ ಸತೀಶ್ ರನ್ನು ಪರಿಪರಿಯಾಗಿ ಬೇಡಿಕೊಂಡರು ಸತೀಶ್ ಅವರು ಯಾವುದೇ ರೀತಿಯ ಸ್ಪಂದನೆ ನೀಡದೆ ಅಶೋಕ ಅವರಿಗೆ ಬೇಕಾಬಿಟ್ಟಿ ಮಾತನಾಡುತ್ತಾರೆ.

ಇದರಿಂದ ಮನನೊಂದು ಅಶೋಕ್ ಅವರು ಕೋಟ ಠಾಣೆಯಲ್ಲಿ ತನ್ನ ದೂರನ್ನು ದಾಖಲಿಸುತ್ತಾರೆ. ಆದರೆ ಅಲ್ಲಿಯೂ ಸಹ ಸರಿಯಾದ ಪ್ರತ್ಯುತ್ತರ ಸಿಗದೇ ಇದ್ದಾಗ ಉಡುಪಿ ಜಿಲ್ಲಾ ಎಸ್ ಪಿ ಸಾಹೇಬರನ್ನು ಭೇಟಿ ಮಾಡಿ ತನಗಾದ ಅನ್ಯಾಯವನ್ನು ತೋಡಿಕೊಳ್ಳುತ್ತಾರೆ. ಆಗ ಈ ವಿಷಯವನ್ನು ಬ್ರಹ್ಮವಾರ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್ ರವರ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಒಂದು ವರ್ಷದ ಗಡುವನ್ನು ಸತೀಶ್ ರವರು ಕೇಳುತ್ತಾರೆ. ಅದಕ್ಕೆ ಒಪ್ಪಿ ಇಬ್ಬರೂ ಸಹ ಒಂದು ಕರಾರು ಪತ್ರವನ್ನು ತಯಾರಿಸಿ ಅದನ್ನು ನೋಟರಿ ಮಾಡುವ ಸಮಯದಲ್ಲಿ ನನಗೆ ಸ್ವಲ್ಪ ಕೆಲಸ ಇದೆ ಬರುತ್ತೇನೆ ಎಂದು ಸತೀಶ್ ಅಲ್ಲಿಂದ ಕಾಲು ಕೇಳುತ್ತಾನೆ. ನಂತರ ಎಷ್ಟೇ ಕರೆ ಮಾಡಿದರೂ ಅಶೋಕ್ ರವರಿಗೆ ಸಿಕ್ಕಿದ್ದು ಅವ್ಯಾಚ ನಿಂದನೆ, ಜೀವ ಬೆದರಿಕೆಯ ಧಮ್ಕಿ ಮತ್ತೆ ಯಾವ ಆಫೀಸರ್ ಹೇಳಿದರೂ ನಾನು ಹೆದರಲ್ಲ ನಿನಗೆ ತಾಕತ್ತಿದ್ದರೆ ಸಿವಿಲ್ ಕೋರ್ಟಿನಲ್ಲಿ ಕೇಸು ದಾಖಲಿಸು ಅಲ್ಲಿ ನಿನ್ನ ನೋಡಿಕೊಳ್ಳುತ್ತೇನೆ ಎನ್ನುತ್ತಾನೆ ನಯವಂಚಕ ಸತೀಶ್ ಖಾರ್ವಿ.

ಆಗ ಜಿ. ವಿ ಅಶೋಕ್ ರವರು ಯಾವುದೇ ದಾರಿ ಕಾಣದೆ ಮಾಧ್ಯಮಗಳ ಮೋರೆ ಹೋಗುತ್ತಾರೆ. ಮಾಧ್ಯಮ ಅವರಿಗಾದ ಅನ್ಯಾಯವನ್ನು ಪ್ರಕಟಿಸಿದ ಕೂಡಲೇ , ಸತೀಶ್ ಖಾರ್ವಿ ಮಾಧ್ಯಮದವರಿಗೆ ಕರೆ ಮಾಡಿ ನೀವು ಮಾಡಿದ ನ್ಯೂಸ್ ಸುಳ್ಳು ಅದನ್ನು ಕೂಡಲೇ ಡಿಲೀಟ್ ಮಾಡಿ. ಇಲ್ಲ ಅಂದ್ರೆ ನಿಮ್ಮ ಮೇಲೆ ದೂರು ದಾಖಲಿಸುತ್ತೇನೆ ಎಂದು ಮಾಧ್ಯಮಕ್ಕೆ ಧಮ್ಕಿ ಹಾಕುತ್ತಾರೆ. ಸತೀಶ್ ಖಾರ್ವಿಯವರೇ ಮಾಧ್ಯಮಗಳು ದಾಖಲೆ ಇಲ್ಲದೆ ಯಾವುದೇ ಸುದ್ದಿಯನ್ನು ಬಿತ್ತಾರ ಮಾಡುವುದಿಲ್ಲ. ಹಾಗೆ ನಿಮ್ಮ ಕ್ರೀಡಾ ಸಾಧನೆಯನ್ನು ಸಹ ಮಾಧ್ಯಮ ಬಿತ್ತರಿಸಿತು ಅನ್ನುವುದನ್ನು ನೀವು ಈ ಸಮಯದಲ್ಲಿ ಮರೆಯಬಾರದು.

ಮಾಧ್ಯಮಗಳನ್ನು ಸದÀ ಹಾದಿ ತಪ್ಪಿಸಿದ ಸತೀಶ್ ಖಾರ್ವಿ ಜೂನ್ 10/06/2022ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮಾಸ್ಟರ್ ವಿಭಾಗದಲ್ಲಿ ಬೆಸ್ಟ್ ಲಿಪ್ಟರ್ ಪ್ರಶಸ್ತಿಗೆ ಬಾಜನರಾದರೂ, ಮಾಧ್ಯಮಗಳಿಗೆ ವಿಷಯ ತಿಳಿಸುವಾಗ ಮಾಸ್ಟರ್ ಎಂಬ ವಿಚಾರವನ್ನು ಮರೆ ಮಾಚಿರುವುದು. ಜೂನ್ 17,2022 ಕೊಯಂಬತ್ತೊರಿನಡೆದ ಏಷನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಮಾಸ್ಟರ್ ವಿಭಾಗದಲ್ಲಿ “ಬೆಸ್ಟ್ ಲಿಫ್ಟರ್” ರನ್ನರ್ ಅಪ್ ಆದರೂ, ಮಾಧ್ಯಮಗಳಿಗೆ ಬೆಸ್ಟ್ ಲಿಪ್ಟರ್‌ಎಂದು ತಿಳಿಸಿರುವುದು. ಮೇಲಿನ ಎರಡು ನಿದರ್ಶನಗಳಲ್ಲಿ ರಾಜ್ಯ ಸಂಸ್ಥೆಯಿಂದ ಮೌಖಿಕ ಹಾಗೂ ವಾಟ್ಸಪ್ ಮೂಲಕ ಎಚ್ಚರಿಕೆ ಕೊಡಲಾಗಿತ್ತು. 25/11/2022 ನ್ಯೂಜಿಲೇಂಡ್ ನಲ್ಲಿ ನಡೆದ ಕಾಮನ್ ವೆಲ್ತ್ ಪಿ/ಎಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು ಪ್ರಶಸ್ತಿಗಳಿಸಿದರೂ, ಆದರೆ ಬೆಸ್ಟ್ ಲಿಪ್ಟರ್ ಪ್ರಶಸ್ತಿ ಬಗ್ಗೆ ಮತ್ತೊಮ್ಮೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದರು. ಆಗಲು ಮೌಖಿಕ ಸಲಹೆ ಮತ್ತು ಎಚ್ಚರಿಕೆ ನೀಡಲಾಯಿತು.

ಹೈದರಾಬಾದ್‌ನಲ್ಲಿ ನಡೆದ ರಾಷ್ರ್ಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿ ಆದರೆ ಭಾರತೀಯ ಪಡೆ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲೇ ಉದಯವಾಣಿಯಲ್ಲಿ ಆಯ್ಕೆ ಪ್ರಕಟಣೆ ಇದರಿಂದಾಗಿ ಇವರ ಆಯ್ಕೆಯನ್ನು ಪರಿಗಣಿಸಲಾಗಿಲ್ಲ. ಆಗ ಮತ್ತೆ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಮಂಗಳೂರು ಇವರಿಗೆ ನೋಟಿಸ್ ನೀಡಿ ಚೀಮಾರಿ ಹಾಕಿದ್ದಾರೆ. ಈ ಎಲ್ಲಾ ಕೃತ್ಯವನ್ನು ಪ್ರಶ್ನಿಸಿದ್ದಕ್ಕಾಗಿ ಈತ ಇದೆಲ್ಲಕ್ಕೂ ಕಾರಣ ಜಿ.ವಿ ಅಶೋಕ್ ಎಂದು ಅವರ ಮೇಲೆ ಹರಿಹಾಯ್ದರು.

ಸತೀಶ್ ಖಾರ್ವಿಯವರೇ ಒಬ್ಬ ಕ್ರೀಡಾಪಟುವಿಗೆ ಬೇಕಿರುವುದು ಶಿಸ್ತು. ಪಡೆದ ಗೌರವವನ್ನು ಕಾಪಾಡಿಕೊಳ್ಳುವುದು, ಹತ್ತಿದ ಏಣಿಯನ್ನು ತುಳಿಯುವುದು ಸಭ್ಯತೆ ಅಲ್ಲ. ನಿಮ್ಮಲ್ಲಿ ಕಿಂಚಿತ್ತಾದರೂ ಉಪಕಾರ ಸ್ಮರಣೆ ಇದ್ದದ್ದೇ ಹೌದಾದಲ್ಲಿ ಕಾರು, ಬುಲೆಟ್ ತೆಗೆದುಕೊಂಡು ಶೋ ಬಿಡುವುದು ಬಿಟ್ಟು. ಆಪತ್ಕಾಲದಲ್ಲಿ ಸಹಾಯ ಮಾಡಿದ ಜಿ.ವಿ ಅಶೋಕ್ ರವರ ಹಣವನ್ನು ಮರುಪಾವತಿಸಿ ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿ. ಕುಂದಾಪುರದ ಜನತೆ ಹೇಳುವಂತೆ ಈತ ಓಡಾಡುತ್ತಿರುವ ಬುಲೆಟ್ ಸಹ ಜಾಕ್ಸನ್ ಎನ್ನುವನಿಗೆ ಪಂಗನಾಮ ಹಾಕಿ ಪಡೆದೆದ್ದು ಎನ್ನುತ್ತಾರೆ. ಇನ್ನೆಷ್ಟು ನಾಮ ಹಾಕಿದ್ದಾರೋ ಆ ದೇವನೇ ಬಲ್ಲ ಕುರಿಯಾಗುವವರು ಇರುವರೆಗೂ ಕುರಿ ಮಾಡುವವರು ಇದ್ದೇ ಇರುತ್ತಾರೆ. ಕುಂದಾಪುರದ ಜನತೆ ಈಗಲಾದರೂ ಎಚ್ಚೆತ್ತಿಕೊಳ್ಳಿ ಬಣ್ಣ ಬಣ್ಣದ ಮಾತಿಗೆ ಮರುಳಾಗಬೇಡಿ.

ಕರಾವಳಿಯ ಪ್ರತಿಷ್ಠಿತ ದಿನ ಪತ್ರಿಕೆಗಳೇ ನಿಮಗೊಂದು ಕಿವಿಮಾತು ಕೂಲಂಕುಶವಾಗಿ ಎಲ್ಲಾ ದಾಖಲೆಯನ್ನು ಪರಿಶೀಲಿಸಿದ ಮೇಲೆ ಸುದ್ದಿಯನ್ನು ಬಿತ್ತರಿಸಿ ಎನ್ನುತ್ತಿದ್ದಾರೆ ಉಡುಪಿಯ ಜನತೆ. ಇನ್ನಷ್ಟು ಸ್ಪೋಟಕ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ…….

Right Click Disabled