ಕೋಟ : ಹರ್ಕ್ಯುಲಸ್ ಜಿಮ್ ಮಾಲೀಕ ಸತೀಶ್ ಖಾರ್ವಿಯಿಂದ ಕೋಟ ಮೂಲದ ವ್ಯಕ್ತಿಗೆ 3 ಲಕ್ಷ ಪಂಗ ನಾಮ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲು..!!

Spread the love

ಕೋಟ : ಉಡುಪಿ ಜಿಲ್ಲೆಯ ಕುಂದಾಪುರ ಹೆರ್ಕ್ಯುಲಸ್ ಜಿಮ್ ಮಾಲೀಕ ಸತೀಶ್ ಖಾರ್ವಿಯವರು ಕೋಟ ಮೂಲದ ವ್ಯಕ್ತಿ ಒಬ್ಬರಿಗೆ 3 ಲಕ್ಷ ಹಣ ಪಡೆದು ವಂಚನೆ ಮಾಡಿದ್ದು, ಹಣ ಮರಳಿ ಕೇಳಿದಾಗ ಕೊಲೆ ಬೆದರಿಕೆ ಹಾಕಿರುವ ದೂರು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಜಿ .ವಿ ಅಶೋಕ ಎಂಬವರ ಬಳಿ 3 ಲಕ್ಷ ಸಾಲ ಪಡೆದಿದ್ದು ಹಣ ವಾಪಸು ಕೇಳಿದಕ್ಕೆ ಕೊಲ್ಲುದಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಸತೀಶ್ ಖಾರ್ವಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Right Click Disabled