ಗೋವುಗಳು ತಂದೆತಾಯಿಗೆ ಸಮಾನ
ನೀಲಾವರ ಗೊಗ್ರಾಸ ಕಾರ್ಯಕ್ರಮ

Spread the love

ಗೋವು ಮತ್ತು ಗೋವೃಷಭ ತಂದೆತಾಯಿಗೆ ಸಮಾನ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ಶನಿವಾರ ನೀಲಾವರ ಕಾಮಧೇನು ಗೋಶಾಲೆಯಲ್ಲಿ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಉಡುಪಿ ಭಾರತೀಶ ಜ್ಯುವೆಲ್ಲರ್ಸ್ ಮಾಲ್ಹಕ ಶಶಿಧರ ಭಟ್ ನೇತೃತ್ವದಲ್ಲಿ ತಮ್ಮ ಬಂಧುಗಳೊಂದಿಗೆ ನಡೆದ ಗೋಗ್ರಾಸ ಕಾರ್ಯಕ್ರಮ ಸಂದರ್ಭ ಆಶೀರ್ವಚನ ನೀಡಿ ಮಾತನಾಡಿ, ತಮ್ಮ ಜನ್ಮ ದಿನ ಮತ್ತು ಇನ್ನಿತರ ಸಂಭ್ರಮದ ದಿನಗಳನ್ನು ಗೋಸೇವೆ ಮಾಡುವುದರ ಮೂಲಕ ಆಚರಿಸಿಕೊಂಡು ಕೃತಾರ್ಥರಾಗಬೇಕು ಎಂದರು. ಆ ಮೂಲಕ ಶಶಿಧರ ಭಟ್ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಸ್ಥಳದಲ್ಲಿಯೇ ೩ಕ್ವಿಂಟಾಲ್ ನಷ್ಟು ಕುಚ್ಚಿಗೆ ಅಕ್ಕಿ ಗಂಜಿ ಮಾಡಿ, ಅದರೊಂದಿಗೆ ನಾಲ್ಕು ಕ್ವಿಂಟಾಲ್ ಕಾಯಿ ಹಿಂಡಿ, ನಾಲ್ಕು ಕ್ವಿಂಟಾಲ್ ಎಳ್ಳು ಹಿಂಡಿ, ೧೦ ಕ್ವಿಂಟಾಲ್ ಗೋಪಿ ಹಿಂಡಿ, ೧೨೦ ಕೆ.ಜಿ ಬೆಲ್ಲ ಸೇರಿದಂತೆ ಇನ್ನಿತರ ಆಹಾರವನ್ನು ಮಿಶ್ರಣ ಮಾಡಿ ಗೋಶಾಲೆಯ ಎಲ್ಲ ಗೋವುಗಳಿಗೆ ಉಣ ಬಡಿಸುವ ಮೂಲಕ ಗೋಸೇವೆಯನ್ನು ಮಾಡಲಾಯಿತು. ಶ್ರೀಪಾದರಿಗೆ ಈ ಸಂದರ್ಭದಲ್ಲಿ ಪಾದಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹರೀಶ್ ಆಚಾರ್ಯ ರಮೇಶ್ ಮೂಡಬೆಟ್ಟು, ಸವಿತಾ ಶಶಿಧರ್ ಭಟ್, ಮಂಜುನಾಥ ರಾವ್, ಜನಾರ್ಧನ ಭಟ್, ಗೋವಿಂದ ಭಟ್, ರಾಜಗೋಪಾಲ್ ಭಟ್, ನಾಗರಾಜ್ ಬಾಯರಿ, ವರದ ಭಟ್ ಮಣಿಪಾಲ, ಅನಂತ್ರಾಮ್ ರಾವ್, ನಿರಂಜನ್ ಭಟ್, ಶೈಲೇಶ್ ಭಟ್, ರಜನೀಶ್ ಭಟ್, ಯುವ ಬ್ರಾಹ್ಮಣ ಪರಿಷತ್ ಸದಸ್ಯರು, ವಿಪ್ರ ಭಾಂದವರು ಉಪಸ್ಥಿತರಿದ್ದರು.

Right Click Disabled