ಸಿಂಧನೂರಿನ ಶಶಿಕುಮಾರ ದಾನಿ ಹಾಗೂ ಮಾಳಪ್ಪ ಬರ್ಸಿ ಗೆ ಗೌರವ ಡಾಕ್ಟರೇಟ್ —-
ತಮಿಳುನಾಡು ಹೊಸೂರಿನ ಕ್ಲಾರೆಷ್ಟಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಂಧನೂರಿನ ವೈದ್ಯಕೀಯ ಹಾಗೂ ಸಮಾಜ ಸೇವೆ ಮತ್ತು ಕಲಾ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಶಶಿಕುಮಾರ. ಎನ್ . ದಾನಿ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಮತ್ತು ಗ್ರಾಮೀಣ ಭಾಗದಲ್ಲಿನ ಆರೋಗ್ಯ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಪರಿಗಣಿಸಿ ಮಾಳಪ್ಪ ಬರ್ಸಿ ಇವರುಗಳಿಗೆ ಶ್ರೀ ಶ್ರೀ ಗುರು ಶಾಂತವೀರ ಶಿವಾಚಾರ್ಯ ಮಹಾಲಿಂಗ ಸ್ವಾಮೀಜಿಗಳು ಭೂ ಕೈಲಾಸ ಮೇಲುಗದ್ದಿಗೆ ಹಿರೇಮಠ ಸಂಸ್ಥಾನ ಪುಣ್ಯಕ್ಷೇತ್ರ ಇಟಗಿ ಹಿರೇಮ್ಯಾಗೇರಿ ಇವರುಗಳ ದಿವ್ಯ ಸಾನಿಧ್ಯದಲ್ಲಿ ಅಕಾಡೆಮಿಯ ಸಂಸ್ಥಾಪಕರಾದ ವಿ.ಬಾಬು ವಿಜಯನ್ ಹಾಗೂ ಡಾ. ಎಮ್ ರಾಜಗೋಪಾಲನ್ ಪುಡುಪಕ್ಕಂ ಬೆನೆಫಿಟ್ ಫಂಡ್ ಲಿಮಿಟೆಡ್ ಸಂಸ್ಥಾಪಕರು ಚೆನ್ನೈ. ಟಿ. ತ್ಯಾಗರಾಜು ಕೆ.ಪಿ.ಟಿ.ಸಿ.ಎಲ್. ಚಿಕ್ಕನಾಯಕನಹಳ್ಳಿ.ಮಂಜುಳಾ ಚಿತ್ರನಟಿ. ಶ್ರೀ ಬಸವ ಯೋಗಿ ಗುರೂಜಿ ಸಂಸ್ಥಾಪಕರು ಏಕತಾ ಫೌಂಡೇಶನ್ ಯಲಹಂಕ ಬೆಂಗಳೂರು. ಡಾ ಶ್ರೀನಿವಾಸ್ ಬಾಬು ಕರ್ನಾಟಕ ಬಲಿಜ ಯುವ ಸಮಾಜ ರಾಜ್ಯಾಧ್ಯಕ್ಷರು. ಡಾ. ರವಿಚಂದ್ರನ್ ಶ್ರೀ ಗಂಗಮ್ಮ ದೇವಿ ಶಕ್ತಿ ಪೀಠ ಚಾರಿಟೇಬಲ್ ಟ್ರಸ್ಟ್ ಸೌತ್ ಇಂಡಿಯಾ. ಯೋಗೀಶ್ ಕುಮಾರ್ ನಟರು ಹಾಗೂ ನಿರ್ಮಾಪಕರು ಇವರುಗಳ ಸಮಕ್ಷಮದಲ್ಲಿ “ಗೌರವ ಡಾಕ್ಟರೇಟ್ ” ವಿತರಿಸಿ ಸನ್ಮಾನಿಸಿ ಅಭಿನಂದಿಸಿದರು ಈ ಸಮಯದಲ್ಲಿ ಚಿತ್ರನಟಿ ಮಂಜುಳಾ ಮಾತನಾಡಿ ಇಂದಿನ ಈ ಕಾರ್ಯಕ್ರಮ ವೈವಿಧ್ಯಮಯ ಕಾರ್ಯಕ್ರಮ ನಮ್ಮ ಕರುನಾಡಿನ ಕಲ್ಯಾಣ ಕರ್ನಾಟಕದ ಕರುಣೆಯ ತವರಾದ ಸಿಂಧನೂರಿನ ಗ್ರಾಮೀಣ ಭಾಗದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ನೆರವು ನೀಡುವ ಮೂಲಕ ಡಾ.ಶಶಿಕುಮಾರ್. ಎನ್.ದಾನಿ ಹಾಗೂ ಡಾ.ಮಾಳಪ್ಪ ಬರ್ಸಿ ಇವರುಗಳ ಸಮಾಜ ವೈದ್ಯಕೀಯ ಕ್ಷೇತ್ರದ ಬಡ ರೋಗಿಗಳಿಗೆ ಸಹಾಯ ಸಹಕಾರ “ಗೌರವ ಡಾಕ್ಟರೇಟ್”ಗೆ ಶೋಭೆ ತಂದುಕೊಟ್ಟಿದೆ ಇಂತಹ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ ನಾನು ನನ್ನದು ಎನ್ನುವ ಸ್ವಾರ್ಥ ಜಗತ್ತಿನಲ್ಲಿ ನಿಸ್ವಾರ್ಥತೆಯ ಕಾರ್ಯ ರಾಜ್ಯದ ಸಿಂಧನೂರಿನಲ್ಲಿ ಅದ್ಭುತವಾಗಿ ಜರುಗುತ್ತಿದೆ. ಅಲ್ಲಿನ ಕಾರುಣ್ಯ ಆಕ್ರಮವೂ ಕೂಡ ರಾಜ್ಯದ ಜನರ ಮನೆ ಮನಸ್ಸಿನಲ್ಲಿದೆ ಇಂತಹ ಸೇವೆ ಮಾಡಲು ಕೂಡ ಅದೃಷ್ಟವಂತರಾಗಿರಬೇಕು ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳ ಡಾ.ಚನ್ನಬಸವ ಸ್ವಾಮಿ ಹಿರೇಮಠ. ಹಾಗೂ ವೀರಭದ್ರಗೌಡ ಗಿಣಿವಾರ ಇವರುಗಳು ಭಾಗವಹಿಸಿದ್ದರು