ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಪೂರ್ವ ಭಾವಿ ಸಭೆ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದದ) ಸುತ್ತೋಲೆಯಂತೆ ದಲಿತರ,ಶೋಷಿತರ ಹಕ್ಕುಗಳಿಗಾಗಿ ಆಗ್ರಹಿಸಿ, ದಲಿತರ ಹಕ್ಕುಗಳ ಜಾಗೃತಿ ಸಮಾವೇಶವನ್ನು ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ನಡೆಸಲು ಇಚ್ಚಿಸಿ ರುವುದರಿಂದ ಉಡುಪಿ ಜಿಲ್ಲೆಯಲ್ಲಿಯೂ ಜಿಲ್ಲಾ ಮಟ್ಟದ ಸಮಾವೇಶ ನಡೆಸಲು ಪೂರ್ವ ತಯಾರಿ ಮಾಡಿಕೊಳ್ಳುವ ಸಲುವಾಗಿ ದಿನಾಂಕ 19/11/2023ರಂದು 11ಘಂಟೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಮಿತಿ ವತಿಯಿಂದ ಆದಿ ಉಡುಪಿಯ ಅಂಬೇಡ್ಕರ್ ಭವನ ದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು
ಸಭೆಯಲ್ಲಿ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆದು ಬರುವ ಡಿಸೆಂಬರ್ ತಿಂಗಳಲ್ಲಿ ಬ್ರಹತ್ ಕಾರ್ಯಕ್ರಮ ನಡೆಸುವುದೆಂದು ತೀರ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ್ ಮಾಸ್ಟರ್, ರಾಜ್ಯ ಸಂಘಟನಾ ಸಂಚಾಲಕಿ, ವಸಂತಿ ಶಿವಾನಂದ ಪಡುಬಿದ್ರಿ, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕರಾದ ಹೂವಪ್ಪ ಮಾಸ್ಟರ್, ಪರಮೇಶ್ವರ್ ಉಪ್ಪೂರ್, ಮಂಜುನಾಥ್ ಬಾಳ್ಕುದ್ರು, ಶ್ರೀನಿವಾಸ್ ಮಲ್ಯಾಡಿ, ಹಾಗೂ ರಾಘವೇಂದ್ರ ಬೆಳ್ಳೆ, ಜಿಲ್ಲಾ ಸಂಚಾಲಕರು ದಲಿತ ನೌಕರರ ಒಕ್ಕೂಟ ಉಡುಪಿ, ದಲಿತ ಹೋರಾಟಗಾರ್ತಿ ಕುಸುಮ ಬಾಳ್ಕುದ್ರು, ಶ್ರೀನಿವಾಸ್ ವಡ್ಡರ್ಸೆ, ಸಂಚಾಲಕರು ಬ್ರಹ್ಮಾವರ ತಾಲೂಕು, ವಿಠ್ಠಲ, ಸಂಚಾಲಕರು ಕಾಪು ತಾಲೂಕು, ಶಿವರಾಮ ಕಾಪು, ಅಣ್ಣಪ್ಪ ಕೊಳಲಗಿರಿ, ಮೋಹನ್ ಮೂಡು. ಬೆಟ್ಟು, ತಾಲೂಕು ಸಂಘಟನಾ ಸಂಚಾಲಕರು, ಉಡುಪಿ ತಾಲೂಕು, ರಮೇಶ್ ಸಂಘಟನಾ ಸಂಚಾಲಕರು ಕಾರ್ಕಳ ತಾಲೂಕು, ಶ್ರೀಧರ ನಲ್ಲೂರು, ಸಂಜೀವ ಕಾಪು, ಸುಂದರ್ ನಲ್ಲೂರು, ಕೆ. ಕೃಷ್ಣ, ಕುಂತಳ ನಗರ, ಶಂಕರ್ ಕೊಡಂಕೂರು ಮತ್ತಿತರು ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು. ಪರಮೇಶ್ವರ್ ಉಪ್ಪೂರು ಸ್ವಾಗತಿಸಿ ಮಂಜುನಾಥ್ ಬಾಳ್ಕುದ್ರು ವಂದಿಸಿದರು