ಕೆ. ಆರ್. ಪೇಟೆ: ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು ಭಾಗವಹಿಸಿ ವಿಜೇತರಾಗಿ ನಮ್ಮ ರಾಜ್ಯಕ್ಕೆ ಕೀರ್ತಿ ಹೆಚ್ಚಿಸುತ್ತಿರುವುದು ಎಂದು ಸಮಾಜಸೇವಕ ಆರ್. ಟಿ. ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು

ಪಟ್ಟಣದಲ್ಲಿರುವ ಇನ್ಫ್ತಾಂಟ್ ಜೀಸಸ್ ಕಾಟೇಜ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಹಾಗೂ ,ಪತ್ರಕರ್ತ ಕಾಮನಹಳ್ಳಿ ಮಂಜುನಾಥ್ ಸುಪುತ್ರ ಶಾಶ್ವತ್ ಮಂಜು ಮಂಡ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಎತ್ತರ ಜಿಗಿತ(ಹೈಜಂಪ್), 100ಮೀಟರ್ ಹಾಗೂ 200 ಮೀಟರ್ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ತಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿ ಮಾತನಾಡಿದ ಅವರು ಕ್ರೀಡಾ ಕ್ಷೇತ್ರ ಎಂದರೇನು ನೆನಪಾಗುವುದೇ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಕಣಜ,ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸದೆ ಮೊಬೈಲ್,ಟಿವಿಗೆ ದಾಸರಾಗಿ ತಮ್ಮ ಉಜ್ವಲ ಭವಿಷ್ಯವನ್ನರೂಪಿಸಿ ಆರೋಗ್ಯಕ್ಕೂ ಸಹಕಾರಿಯಾಗಿ ತಮ್ಮ ಪ್ರತಿಭೆ ಹೊರಹಾಕುವ ಉತ್ತಮ ವೇದಿಕೆಯಾದ ಕ್ರೀಡಾ ಕ್ಷೇತ್ರದಿಂದ ದೂರ ಉಳಿದಿರುವ ಕೆಲ ವಿದ್ಯಾರ್ಥಿಗಳಿಗೆ ಮಾದರಿ ಸ್ಪೂರ್ತಿದಾಯಕವಾಗುವಂತೆ ಹಾಗೂ ತಮ್ಮ ತಂದೆ ತಾಯಿಯ ಕನಸನ್ನ ನನಸಾಗುವಂತೆ ಜಿಲ್ಲಾ ಮಟ್ಟದ ವಿವಿಧ ಕ್ರೀಡಾಕಣದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಹಾಗುವ ಮುಖಾಂತರ ನಮ್ಮ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ,ರಾಜ್ಯಮಟ್ಟದಲ್ಲೂ ತನ್ನ ಪ್ರತಿಭೆಯನ್ನ ದ್ವಿಗುಣಗೊಳಿಸಿ ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗುವ ಮೂಲಕ ಕೀರ್ತಿಪತಾಕೆಯನ್ನು ರಾರಾಜಿಸಲಿ ಎಂದು ಅಭಿನಂದಿಸಿ ಸನ್ಮಾನಿಸುವ ಮುಖಾಂತರ ಗೌರವಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ್, ಮಹೇಶ್, ಮಧು,ವಿಜಯ್ ಕುಮಾರ್, ಯೋಗೇಶ್ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
