ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ: ಪ್ರಯೋಗಾಲಯ (ಲ್ಯಾಬೋರೇಟರಿ) ಸೇವೆಗಳ ರಚನಾತ್ಮಕ ತರಬೇತಿ ಕಾರ್ಯಕ್ರಮ : ಫಸ್ಟ್ ಟೈಮ್ ರೈಟ್ , ಗೆಟ್ ಸ್ಯಾಂಪಲ್ ರೈಟ್ , ದಿ ಫಸ್ಟ್ ಟೈಮ್ & ಎವೆರಿಟೈಮ್

Spread the love

ಮಣಿಪಾಲ , 18 ಅಕ್ಟೋಬರ್ 2023: ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲದ ಕಸ್ತೂರ್ಬಾ ಹಾಸ್ಪಿಟಲ್ ಲ್ಯಾಬೊರೇಟರಿ ಸರ್ವಿಸಸ್ (ಕೆಎಚ್ಎಲ್ಎಸ್) , ಬಿಡಿ ಇಂಡಿಯಾ ಸಹಯೋಗದೊಂದಿಗೆ 3-ದಿನಗಳ ತರಬೇತಿ (ಅಕ್ಟೋಬರ್ 17ರಿಂದ ಅಕ್ಟೋಬರ್ 19)ಕಾರ್ಯಕ್ರಮವನ್ನು ಆಯೋಜಿಸಿದೆ – ಮೊದಲ ಬಾರಿಗೆ ಸರಿಯಾಗಿ – ಮಾದರಿಗಳನ್ನು ಸರಿಯಾಗಿ ಪಡೆಯಿರಿ, ಮೊದಲ ಬಾರಿ ಮತ್ತು ಪ್ರತಿ ಬಾರಿಯೂ ಎಂಬ ವಿಷಯದಲ್ಲಿ ಫ್ಲೆಬೊಟೊಮಿಸ್ಟ್ಗಳು, ಪ್ರಯೋಗಾಲಯ ತಂತ್ರಜ್ಞರು (ಆಸ್ಪತ್ರೆಯ ಮತ್ತು ಹೊರಗಿನ), ಮತ್ತು ದಾದಿಯರಿಗಾಗಿ ಈ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ರಚನಾತ್ಮಕ ತರಬೇತಿ ಕಾರ್ಯಕ್ರಮವನ್ನು ಕೆಎಂಸಿ ಮಣಿಪಾಲದ ಡಾ ಟಿ ಎಂ ಎ ಪೈ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು ಮಾತನಾಡಿ, ಪ್ರಯೋಗಾಲಯದಲ್ಲಿ ಶೇ.70ರಷ್ಟು ತಪ್ಪುಗಳು ಪ್ರಾಥಮಿಕ ಹಂತದಲ್ಲಿಯೇ ಸಂಭವಿಸುತ್ತವೆ. ತಂತ್ರಜ್ಞರ ಪ್ರಾಯೋಗಿಕ ಜ್ಞಾನದ ಕೊರತೆಯೇ ಇದಕ್ಕೆ ಕಾರಣ. ಇದನ್ನು ಹೋಗಲಾಡಿಸಲು ರಚನಾತ್ಮಕ ಪ್ರಾಯೋಗಿಕ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಿಡಿ ಇಂಡಿಯಾ ತಂಡವು, ಮೊದಲ ಬಾರಿಗೆ ಸರಿಯಾಗಿ – ಮಾದರಿಗಳನ್ನು ಸರಿಯಾಗಿ ಪಡೆಯಿರಿ, ಮೊದಲ ಬಾರಿ ಮತ್ತು ಪ್ರತಿ ಬಾರಿಯೂ ಎಂಬ ರಚನಾತ್ಮಕ ತರಬೇತಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಎಂದರು.

ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಶಿರನ್ ಶೆಟ್ಟಿ ಅವರು ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಪ್ರಾಯೋಗಿಕ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಈ ಉಪಕ್ರಮಕ್ಕಾಗಿ ಬಿಡಿ ಇಂಡಿಯಾ ತಂಡವನ್ನು ಅಭಿನಂದಿಸಿದರು.

ಈ ತರಬೇತಿ ಕಾರ್ಯಕ್ರಮವು ಇತ್ತೀಚಿನ ತಂತ್ರಜ್ಞಾನದ ಪರಿಚಯ, ಲೈವ್ ಪ್ರಾತ್ಯಕ್ಷಿಕೆ, ಉತ್ತಮ ಅಭ್ಯಾಸಗಳ ಕುರಿತು ತರಬೇತಿ ಮತ್ತು ಶುಶ್ರೂಷೆ ಮತ್ತು ಲ್ಯಾಬ್ ಸಿಬ್ಬಂದಿಗೆ ಮಾದರಿ ಸಂಗ್ರಹಣೆಯ ಉತ್ತಮ ಅಭ್ಯಾಸಗಳ ಕುರಿತು ವಸ್ತುನಿಷ್ಠ ಮೌಲ್ಯಮಾಪನದ ನಂತರದ ಮಧ್ಯಸ್ಥಿಕೆಯನ್ನು ಒಳಗೊಂಡಿರುವ ರಚನಾತ್ಮಕ ತರಬೇತಿ ಒಳಗೊಂಡಿದೆ. ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ (ಕೆಎಚ್ಎಲ್ಎಸ್) ಲ್ಯಾಬ್ ನಿರ್ದೇಶಕ ಡಾ.ರವೀಂದ್ರ ಮರಡಿ ಸ್ವಾಗತಿಸಿ, 1000ಕ್ಕೂ ಹೆಚ್ಚು ಸಿಬ್ಬಂದಿ ಈ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ ಎಂದರು.

ಡಾ.ಶ್ವೇತಾ, ವೈದ್ಯಕೀಯ ವ್ಯವಹಾರಗಳ ವ್ಯವಸ್ಥಾಪಕಿ, ಬಿಡಿ ಇಂಡಿಯಾ ತರಬೇತಿ ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ಕ್ಲಿನಿಕಲ್ ಲ್ಯಾಬ್ ನ ಮುಖ್ಯಸ್ಥೆ ಡಾ.ಸುಷ್ಮಾ ಬೇಲೂರ್ಕರ್, ನರ್ಸಿಂಗ್ ಸೇವೆಗಳ ಮುಖ್ಯಸ್ಥೆ ಡಾ ಶುಭ ಸೂರಿಯ ಪಿ ,ಆಸ್ಪತ್ರೆ ಆಡಳಿತ ಮಂಡಳಿಯ ಸಹ ನಿರ್ದೇಶಕ ಜಿಬು ಥಾಮಸ್, ವ್ಯವಸ್ಥಾಪಕ ಮೋಹನ್ ಶೆಟ್ಟಿ, ಸಹ ವ್ಯವಸ್ಥಾಪಕಿ ಸುಚೇತಾ ನಾಯಕ್ ಉಪಸ್ಥಿತರಿದ್ದರು.

ವೈದ್ಯಕೀಯ ಅಧೀಕ್ಷಕರು

Right Click Disabled