ಕೆ.ಆರ್.ಪೇಟೆ.ಪರಿಸರ ಪ್ರೇಮಿ ಮತ್ತು ರೈತರ ಉಳಿವಿಗಾಗಿ

ಹಗಲಿರುಳು ಹೋರಾಡುವ ರೈತಪರ ಹೋರಾಟಗಾರರಿಗೆ ಕೋರಮಂಡಲ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಕಿಡಿಗೇಡಿಗಳು ಎಂದರೆ, ದಿನನಿತ್ಯವೂ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಿಗೆ ವಿಷಕಾರಿ ಹಾರುವ ಬೂದಿ ಮತ್ತು ಅಪಾಯಕಾರಿ ಎಥನಲ್ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿರುವ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರನ್ನ ಏನೆಂದು ಕರೆಯಬೇಕು ಎಂದು ತಾಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಪಶ್ನಿಸಿದರು
ಶುಕ್ರವಾರ ಕಾರ್ಖಾನೆಯ ಆವರಣದದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಲವು ವರ್ಷಗಳಿಂದ ಕಾರ್ಖಾನೆಯ ಎಚ್ಚರಗೊಳಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ರೈತಪರ ಹೋರಾಟಗಾರರನ್ನು ಕಿಡಿಗೇಡಿಗಳು ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿ.
ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಕಾರ್ಖಾನೆಯ ನಿರ್ಮಾಣಕ್ಕಾಗಿ ಲಕ್ಷ ಲಕ್ಷ ಬೆಲೆಬಾಳುವ ಜಮೀನು ನೀಡಿದ ಕುಟುಂಬಸ್ಥರಿಗೆ ಸೂಕ್ತ
ಉದ್ಯೋಗವಿಲ್ಲ,ಕಾರ್ಖಾನೆ ಹೊರ ಜಿಲ್ಲೆ ಮತ್ತು ತಾಲೂಕಿನಿಂದ ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿದರೆ ತನ್ನ ಸುತ್ತ ಮುತ್ತಲಿನಲ್ಲಿ ಬೆಳೆಯುವ ರೈತರ ಕಬ್ಬಿನ ಫಸಲಿಗೆ
15 ಕ್ಕೂ ಹೆಚ್ಚು ತಿಂಗಳಾದರೂ ಕಬ್ಬಿಗೆ ಕಟಾವಿನ ಭಾಗ್ಯ ದೊರಕಿಲ್ಲ ಮತ್ತು ಕಾರ್ಖಾನೆಯ ಸುತ್ತಮುತ್ತಿನ ಗ್ರಾಮಗಳಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಕಾರ್ಖಾನೆ ಮುಂದಾಗುತ್ತಿಲ್ಲ ಎಂದರೆ ಕಾರ್ಖಾನೆ ಪಕ್ಕದಲ್ಲಿ ಇದ್ದರೂ ಯಾವುದೇ ಪ್ರಯೋಜನವಿಲ್ಲ ರಾಜ್ಯದಲ್ಲಿ ರಾಜಕಾರಣಿಗಳ ಕಾರ್ಖಾನೆಗಳು ಹೆಚ್ಚಾಗಿ ಇರುವುದರಿಂದ ಎಫ್. ಆರ್.ಪಿ ದರ ಹೆಚ್ಚಿಸಿಲ್ಲ ಕಾರ್ಖಾನೆಯವರು ತಮ್ಮ ಮನಸ್ಸಿಗೆ ಬಂದಷ್ಟು ಕಬ್ಬಿನ ಫಸಲಿಗೆ ನೀಡುತ್ತಿದ್ದಾರೆ, ಕೋರಮಂಡಲ ಸಕ್ಕರೆ ಕಾರ್ಖಾನೆ ಯಲ್ಲಿ ಉಪಉದ್ಪನ್ನಗಳಾದ ವಿದ್ಯುತ್ ,ಮೊಲಾಸಸ್,ಮಡ್ಡಿಯ ಉತ್ಪಾದನೆಯಿಂದ ಬರುವ ಆದಾಯ ಕೊಡಬಹುದು.ಇವೆಲ್ಲವನ್ನೂ ಲೆಕ್ಕ ಹಾಕಿದರೆ ಒಂದು ಟನ್ ಗೆ 600 ರೂ ಕಾರ್ಖಾನೆಗೆ ಲಾಭಾಂಶ ಬರುತ್ತೆ. ಇದರಲ್ಲಿ 70% ರೈತರಿಗೆ 30 % ಆಡಳಿತ ವೆಚ್ಚಕ್ಕೆ ಬಳಸಿಕೊಳ್ಳುತ್ತೇವೆ ಎಂದು ನಿರ್ಮಾಣದ ಸಮಯದಲ್ಲಿ ಕಾನೂನು ಒಪ್ಪಂದಗಳಿವೆ ಆದರೆ ಇಂತಹ ಜನ ಸ್ನೇಹಿ ಒಪ್ಪಂದಗಳು ಕಾರ್ಖಾನೆ ನಿರ್ಮಾಣವಾಗಿ 20 ವರ್ಷಗಳು ಕಳೆದರು ಅನುಷ್ಟಾನ ಆಗಿಲ್ಲ.ಕಬ್ಬು ಹಣ ಹೊರತುಪಡಿಸಿ ಬೇರೆ ಯಾವುದೇ ಹಣ ನೀವು ರೈತರಿಗೆ ನೀಡಿಲ್ಲ.ಮೊದಲು ಈ ಹಣ ನೀಡಿ ನಂತರ ಮಾತನಾಡಿ,ತಾಲ್ಲೂಕಿನ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಸತ್ಯವನ್ನು ಹೊರಗೆ ತರುವವರನ್ನು ಮತ್ತು ಎಥನಾಲ್ ಎನ್ನುವ ಅಪಾಯಕಾರಿ ಘಟಕವನ್ನು ಜನರಿಗೆ ಹರಿವು ಮೂಡಿಸಿ ಪ್ರಶ್ನಿಸಿದರೆ ಕೆಟ್ಟ ಕಿಡಿಗೇಡಿಗಳು ಎಂದು ಹೋರಾಟಗಾರರನ್ನು ಬಿಂಬಿಸುವವರಿಗೆ ತಕ್ಕ ಪಾಠ ಕಲಿಸಬೇಕು ಕಾರ್ಖಾನೆಯವರು ಸತ್ಯ ಮರೆಮಾಚುವ ಕೆಲಸ ಮಾಡುತ್ತಿದ್ದಾರೆ ಇಂತಹ ಆರೋಪಗಳಿಗೆಲ್ಲ ಹೋರಾಟಗಾರರು ಜಗ್ಗುವುದಿಲ್ಲ ಎದುರುವುದಿಲ್ಲ ಕೂಡಲೇ ಹೋರಾಟಗಾರರ ಬಗ್ಗೆ ಲಘುವಾಗಿ ಹೇಳಿಕೆಗೆ ಕ್ಷಮೆಯಾಚಿಸಿಬೇಕು ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಿದರೆ ಉಗ್ರ ಹೋರಾಟವನ್ನು ಕಾರ್ಖಾನೆಯ ಮುಂದೆ ನಡೆಸಬೇಕಾಗುತ್ತದೆ ಎಂದು ತಾಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಹೇಳಿದರು.
ಈ ಸಂದರ್ಭದಲ್ಲಿ ಕರೋಟಿ ತಮ್ಮಯ್ಯ,ರೈತ ಮುಖಂಡ ಕೃಷ್ಣಾಪುರ ಮಿಲ್ ರಾಜಣ್ಣ, ಅಕ್ಕಿಮಂಚನಹಳ್ಳಿ ಹೊನ್ನಪ್ಪ,ಯುವ ಮುಖಂಡ ಯಶೋದಾರ, ಸೇರಿದಂತೆ ಉಪಸ್ಥಿತರಿದ್ದರು.
