ಜೋಅಪ್ಪೆಮ್ಮನೊಟ್ಟುಗುಕ್ಲೆ ತುಳು ಕವಿಗೋಷ್ಠಿ

Spread the love

ಅಪ್ಪೆಮ್ಮೆ ತುಳು ನಾಟಕದ ಕೃತಿ ಬಿಡುಗಡೆಯ ಪ್ರಯುಕ್ತ ನಡೆದ ಅಪ್ಪೆಮ್ಮನೊಟ್ಟುಗು ಜೋಕ್ಲೆ ತುಳು ಕವಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಪ್ರೌಢಶಾಲಾ 16ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಡುಪಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು , ಮತ್ತು ಸಾಹಿತಿ ಪೂರ್ಣಿಮ

ಜನಾರ್ದನ್ ಕೊಡವೂರು ಅಧ್ಯಕ್ಷತೆಯಲ್ಲಿ ಮಕ್ಕಳ ಕವಿಗೋಷ್ಠಿ ಯಶಸ್ವಿವಾಗಿ ನಡೆಯಿತು.
 
ಜನಾರ್ದನ್ ಕೊಡವೂರು ಮಾತನಾಡಿ, ಮಕ್ಕಳಲ್ಲಿ ತುಳು ಭಾಷಾ ಬರವಣಿಯ ಕಲೆಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹೆತ್ತವರೊಂದಿಗೆ ನಡೆಸಿದ ಮಕ್ಕಳ ಕವಿಗೋಷ್ಠಿ ನಿಜಕ್ಕೂ ಅಪರೂಪದ ಅಭಿವೃಕ್ತಿಯಾಗಿದೆ ಎಂದರು. 
 
ಪೂರ್ಣಿಮಾ ಜನಾರ್ಧನ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ಕೂಡಾ ತಮ್ಮ ಹೆತ್ತವರ ಬಗ್ಗೆ ಸೊಗಸಾಗಿ ಕವಿತೆಗಳನ್ನು ರಚಿಸಿ ಮನದಾಳದಿಂದ ವಾಚಿಸಿ ಸೈ ಎನಿಸಿಕೊಂಡರು ಎಂದರು. ಕವಿಗೋಷ್ಠಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಾದ ಸುಶಾಂತ್ ಎಸ್.ಆಚಾರ್ಯ ಮುದರಂಗಡಿ, ಶಿವಾನಿ ಅಂಬಲಪಾಡಿ, ತೃಷ ಅದಮಾರು, ಸಂದರ್ಶಿನಿ ಕಾರ್ಕಳ, ಸಾನ್ವಿ ಪೆರ್ಡೂರು, ಕಾರ್ತಿಕ ಮುದ್ರಾಡಿ, ಶಾನ್ವಿ ಕಾರ್ಕಳ, ಸುಪ್ರಿಯ ಕಾರ್ಕಳ, ಪ್ರೇಕ್ಷಾ ಆಚಾರ್ಯ ನಕ್ರೆ, ನಂದಿನಿ ಅಲೆವೂರು, ಮಹಾಲಕ್ಷ್ಮೀ  ಬನ್ನಂಜೆ, ಯಶಸ್ ಪಿ.ಸುವರ್ಣ ಕಟಪಾಡಿ, ಪೂರ್ವಿ ಎಸ್.ಕೋಟ್ಯಾನ್ ಉದ್ಯಾವರ, ಮಿಶಾ ಆರ್ ಕೋಟ್ಯಾನ್ ಪಡುಬಿದ್ರಿ, ಅಭಿಷೇಕ್ ಕುಂಜಾರುಗಿರಿ, ವೈಷ್ಣವಿ ವಿ.ದೇವಾಡಿಗ ಉಡುಪಿ ಇವರು ಸ್ವರಚಿತ ಕವನವಾಚನ ನಡೆಸಿದರು. 
 
ನಾಟಕಕಾರ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಡಾ.ವಿದ್ಯಾ ಸರಸ್ವತಿ ನಿರೂಪಿಸಿದರು. ಸಾಹಿತಿ ದಯಾನಂದ ಕೆ.ಶೆಟ್ಟಿ ದೆಂದೂರು ವಂದಿಸಿದರು.   ಈ ಸಂದರ್ಭದಲ್ಲಿ ಪುತ್ತೂರು ಶ್ರೀ ಭಗವತಿ ಯಕ್ಷಕಲಾ ಬಳಗದ ಪ್ರಣಮ್ಯ ಉಪಾಧ್ಯ ಮತ್ತು ವೈಷ್ಣವಿ ಅವರಿಂದ ಯಕ್ಷನೃತ್ಯ ಕಾರ್ಯಕ್ರಮ ಹಾಗೂ ಸುದರ್ಶನ್ ಆಚಾರ್ಯ ಬೆಳ್ಮಣ್ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು.  

Right Click Disabled