ಮನಗೂಳಿ ಪಟ್ಟಣದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ, 7 ಜನರಿಗೆ ತಲಾ 7 ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಲಾಯಿತು

Spread the love

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಪಂಚಾಯತಿಯಲ್ಲಿ ಪೌರಕಾರ್ಮಿಕರ ದಿನಾಚರಣೆ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಎಲ್ಲ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.

ಸರ್ಕಾರದ ಆದೇಶದಂತೆ ಪೌರಕಾರ್ಮಿಕರಿಗೆ ತಲಾ ಏಳು ಸಾವಿರ ರೂಪಾಯಿ ಗಳಂತೆ 7 ಜನರಿಗೆ ಚೆಕ್ ನೀಡಿ ಸನ್ಮಾನ ಮಾಡಲಾಯಿತು.

ಮಳೆ, ಚಳಿ, ಬಿಸಿಲು ಏನೇ ಇರಲಿ ಅಥವಾ ಕೊರೊನಾದಂತಹ ದೊಡ್ಡ ದೊಡ್ಡ ಸಾಂಕ್ರಾಮಿಕ ರೋಗಗಳೆ ಬರಲಿ ಇವರು ಮಾತ್ರ ತಮ್ಮ ಕೆಲಸ ನಿಲ್ಲಿಸುವುದಿಲ್ಲ.. ಮನೆಯೊಳಗೆ ಬೆಚ್ಚಗೆ ಮಲಗುವುದಿಲ್ಲ..ಅದೆಂತಹದ್ದೇ ಪರಿಸ್ಥಿತಿಯಿರಲಿ ಕೈಯಲ್ಲಿ ಪೊರಕೆ ಹಿಡಿದು ರಸ್ತೆಗೆ ಇಳಿಯುತ್ತಾರೆ. ಒಂದು ದಿನ ಇವರ್‍ಯಾರೂ ಕೆಲಸ ಮಾಡದಿದ್ದರೇ, ಬೀದಿಗಿಳಿಯದಿದ್ದರೇ ನಾವ್ಯಾರೂ ರಸ್ತೆಗಳಲ್ಲಿ, ಮಾರ್ಕೆಟ್‌ಗಳಲ್ಲಿ, ಬಸ್ ನಿಲ್ದಾಣಗಳ್ಲಲಿ ಓಡಾಡಲು ಸಾಧ್ಯವೇ ಇಲ್ಲ. ಹೌದು ಇವರೇ ನಮ್ಮ ಗ್ರಾಮ ,ಸ್ವಚ್ಛಗೊಳಿಸಿ ನಮಗಾಗಿ ತಮ್ಮ ಸುರಕ್ಷತೆಯನ್ನೂ ಬದಿಗಿಟ್ಟ ಪೌರಕಾರ್ಮಿಕರು ಎಂದು ಮಾತನಾಡಿದ ಮನಗೂಳಿ ಪಟ್ಟಣ ಪಂಚಾತಿಯ ಮುಖ್ಯಾಧಿಕಾರಿಗಳಾದ ಶ್ರೀ ಶಬ್ಬೀರ್ ರೇವೂರ್ ಕರ ಮಾತನಾಡಿದರು.

ನಮ್ಮ ನಗರಗಳು, ನಮ್ಮ ಮನೆಯ ಬೀದಿಗಳು, ನಾವು ಓಡಾಡುವ ಸ್ಥಳಗಳು ಸ್ವಚ್ಛವಾಗಿರಲು ಇವರೇ ಪ್ರಮುಖ ಕಾರಣಕರ್ತರು. ಇಂದು ಪೌರಕಾರ್ಮಿಕರ ದಿನ. ಅಂದರೆ ಪೌರಕಾರ್ಮಿಕರ ದಿನ. ಈ ದಿನದ ನೆಪದಲ್ಲೊಮ್ಮೆ ಇವರನ್ನ ನೆನಪಿಸಿಕೊಳ್ಳುವ.. ದಿನ ಎಂದರು.

ನಾವು ಗಣೇಶ ಹಬ್ಬ, ದೀಪಾವಳಿ ಮಾಡಿ ರಸ್ತೆಗಳಲ್ಲಿ ಕಸ ಎಸೆದು ಮನೆಗೆ ಹೋಗುತ್ತಿವೆ. ಬೆಳಗ್ಗೆ ಆ ಕಸ ಕಾಣಿಸುವುದಿಲ್ಲ ಎಂದರೇ ಅದಕ್ಕೆ ಪೌರಕಾರ್ಮಿಕರು ಕಾರಣ. ನಾವು ಕೆಲಸಕ್ಕೆ ಹೋಗುತ್ತೇವೆ, ನಮಗೆ ವಾರದ ರಜೆ, ಹಬ್ಬಗಳ ರಜೆ ಎಂಬ ಸವಲತ್ತುಗಳು ಇವೆ ಅಲ್ಲವೇ? ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ರಜೆಯಾದ್ರೂ ಇರುತ್ತೆ ಅಲ್ಲವೇ.. ಆದ್ರೆ ವಿಪರ್ಯಾಸ ನೋಡಿ ಇವರ್‍ಯಾರಿಗೂ ರಜೆ ಎಂಬುದೇ ಇಲ್ಲ..ರಜೆ ಬೇಕಿದ್ದರೇ ಸಂಬಳ ಕೇಳೋ ಹಾಗಿಲ್ಲ ಅಷ್ಟೆ..

ಪೌರಕಾರ್ಮಿಕರ ಪರಿಸ್ಥಿತಿ ಹೇಗಿರುತ್ತೇ ಗೊತ್ತಿದ್ಯಾ..? ಬೆಳಗ್ಗೆ 5-6 ಗಂಟೆಗೆ ಕೆಲಸಕ್ಕೆ ಹಾಜರಾಗುವ ಇವರಿಗೆ ಕುಡಿಯಲು ನೀರು, ಬಳಸಲು ಶೌಚಾಲಯ, ಬಟ್ಟೆ ಬದಲಿಸಲು ಒಂದು ಪುಟ್ಟ ಕೊಠಡಿ ಸಹ ಇರಲ್ಲ. ಅದರಲ್ಲೂ ಮಹಿಳಾ ಪೌರಕಾರ್ಮಿಕರ ಪರಿಸ್ಥಿತಿ ಊಹಿಸಲಸಾಧ್ಯ.. ಎಂದು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಮುಖ್ಯಾಧಿಕಾರಿಗಳಾದ ಶ್ರೀ ಶಬ್ಬೀರ್ ರೇವೂರ್ ಕರ ಮಾತನಾಡಿದರು.

ಮನಗೂಳಿಯ ಎಲ್ಲ ಪೌರಕಾರ್ಮಿಕರನ್ನು ಕರೆದುಕೊಂಡು ದಿನಾಂಕ 24 ಸಪ್ಟಂಬರ್ ರಂದು ಒಂದು ದಿನ ಬದಾಮಿ ಐಹೊಳೆ ಪಟ್ಟದಕಲ್ಲು ಪಿಕನಿಕ್ ಇಟ್ಟುಕೊಳ್ಳಲಾಗಿದೆ ಎಂದರು .

ಈಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಪಂಚಾಯತಿಯ ಮುಖ್ಯಾಧಿಕಾರಿ ಶ್ರೀ ಶಬೀರ್ ರೇವೂರ್ ಕರ, ಪಟ್ಟಣ ಪಂಚಾಯತಿಯ ಅಧಿಕಾರಿಗಳಾದ ಸತೀಶ್, ಹಿರೇಮಠ ಇನ್ನಿತರ ಉಪಸ್ಥಿತಿಯಲ್ಲಿದ್ದರು. ಅದೇ ರೀತಿ ಎಲ್ಲಾ ಪೌರಕಾರ್ಮಿಕರು ಭಾಗವಹಿಸಿ ಈ ಪೌರಕಾರ್ಮಿಕರ ದಿನಾಚರಣೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.

ವರದಿ: ಮಲ್ಲಿಕಾರ್ಜುನ ಮ ಬುರ್ಲಿ
ಪತ್ರಕರ್ತರು, ಮನಗೂಳಿ

Right Click Disabled