ಕೆ.ಆರ್.ಪೇಟೆ ಶ್ರೀಕೃಷ್ಣ ಧರ್ಮದ ಪ್ರತೀಕ : ಡಾ|ಜೆ.ಎನ್.ರಾಮಕೃಷ್ಣೇಗೌಡ

Spread the love

ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಹೇಮಗಿರಿ ಬಿಜಿಎಸ್ ಎಜುಕೇಶನ್ ಸೆಂಟರ್ ಆವರಣದಲ್ಲಿ ನಡೆದ ಶ್ರೀ ಕೃಷ್ಣವೇಶಭೂಷಣ ಸ್ಪರ್ಧೆಯ ಸಮಾರಂಭಕ್ಕೆ ಮಾರ್ಗದರ್ಶನ ಮತ್ತು ಬಿಜಿಎಸ್ ಶಾಖಾಮಠದ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರು ನೇತೃತ್ವವಹಿಸಿ ಮಾತನಾಡಿ ಶ್ರೀಕೃಷ್ಣನ ಜನನ, ಕಂಸನ ಸೆರೆಮನೆಯಲ್ಲಿ ಆಯ್ತು ಆದರೆ ಬೆಳದಿದ್ದು ನಂದನವನದ ಯಶೋಧೆಯ ಪಾಲನೆಯಲ್ಲಿ ನಂದ ಮಹಾರಾಜನ ಪಿತೃತ್ವದಲ್ಲಿ ಬೃಂದಾವನದ ಸರ್ವರ ಪ್ರೀತಿ ಪಾತ್ರನಾಗಿ ಬೆಳೆದು ಹಲವಾರು ರಾಕ್ಷಸರನ್ನು ಸಂಹರಿಸಿದ ವಿಶ್ವ ವಿರಾಟ ರೂಪಿ ಶ್ರೀಕೃಷ್ಣ, ಕೃಷ್ಣನ ಆಗರ್ಭ ಶ್ರೀಮಂತಿಕೆ, ಕುಚೇಲನ ಕಡು ಬಡತನ ಇವೆರಡು ಅವರ ಸ್ನೇಹಕ್ಕೆ ಎಂದೂ ಅಡ್ಡಿಯಾಗಲಿಲ್ಲ, ಶ್ರೀಕೃಷ್ಣನ ಜನ್ಮ ವೃತಾಂತ್ತ ಒಂದು ಕಾರ್ಯ ನಿಮಿತ್ತವಾದದ್ದು ಹೊರತು ಸಾಮಾನ್ಯವಾದುದ್ದಲ್ಲ, ಆಚರಣೆ ನಮ್ಮೆಲ್ಲರಿಗೂ ಒಂದು ಸದವಾಕಾಶ ಕಾರಣ ನಮ್ಮ ಶಾಲೆ ಮಕ್ಕಳನ್ನ ರಾಧೆ-ಕೃಷ್ಣರ ವೇಷಭೂಷಣಗಳನ್ನ ಮಾಡಿ ಪ್ರೀತಿ ಸ್ವರೂಪಿ ಭಗವಂತನನ್ನ ಕಾಣುತ್ತೇವೆ. ಅಷ್ಟೇ ಅಲ್ಲದೆ ದೇಶ ಕಂಡ ಮಾಹಾನ್ ನಾಯಕರುಗಳಾದ ಗಾಂಧೀ, ಚೆನ್ನಮ್ಮ ರಾಯಣ್ಣ, ಸ್ವಾಮೀ ವಿವೇಕಾನಂದ ಮುಂತಾದ ಮಹನೀಯರ ಬಗ್ಗೆ ಪರಿಚಯಿಸಿ ಅವರ ವೇಷಭೂಷಣಗಳನ್ನು ಮಾಡಿ ಇಂತಹ ಮಹಾನ ವ್ಯಕ್ತಿಗಳ ಆದರ್ಶ, ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆಯರ ವೇಷಭೂಷಣ ಧರಿಸಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಭರತನಾಟ್ಯ ಕೋಲಾಟ ನೃತ್ಯ ಕಾರ್ಯಕ್ರಮದ ಜೊತೆಗೆ ಕೃಷ್ಣ ವೇಷಧಾರಿ ಮಕ್ಕಳಿಗೆ ಆಯೋಜಿಸಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ,

ವರದಿ -ಲೋಕೇಶ್.ವಿ

Right Click Disabled