ಕೆ.ಆರ್.ಪೇಟೆ ದರ ಕುಸಿತಕ್ಕೆ ಬೇಸತ್ತು ಸೇವಂತಿಗೆ ಫಸಲು ಉಳುಮೆ ಮಾಡಿದ ರೈತ

ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೆಟ್ಟದ ಹೊಸೂರು ಗ್ರಾಮದ ರೈತ ಭರತ ಎಂಬುವವರು ತಮ್ಮ ಎರಡು ಎಕರೆ ಜಮೀನಿನಲ್ಲಿ 2ಲಕ್ಷ ಸಾಲ ಮಾಡಿ ಸೇವಂತಿಗೆ ಹೂವಿನ ಬೆಳೆ ಬೆಳೆದಿದ್ದರು, ಮಾರುಕಟ್ಟೆಯಲ್ಲಿ ದಿಡೀರ್ ಬೆಲೆ ಕುಸಿದ ಕಾರಣ ಹೂವು ಕೂಯ್ಲು ಮಾಡಿ ಮಾರಾಟ ಮಾಡಿದರೆ ನಷ್ಟವೇ ಹೊರತು ಲಾಭ ಸಿಗುವುದಿಲ್ಲ ಅಲ್ಲದೆ ಈ ಬೆಳೆಯಲ್ಲಿ ನಾಲ್ಕು ಲಕ್ಷ ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತ ಬೇಸತ್ತು ತಮ್ಮ ಟ್ಯಾಕ್ಟರ್ ನ ಮೂಲಕ 2 ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಹೂವಿನ ಫಸಲನ್ನು ಕೊಯ್ಲು ಮಾಡದೇ ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡುವ ಮೂಲಕ ತಮ್ಮ ನೋವನ್ನು ಹೊರ ಹಾಕಿದ್ದಾರೆ,
ವರದಿ: ಲೋಕೇಶ್.ವಿ