ಬೈಂದೂರು : ಮರವಾಯಿ ತಿಂದವರಿಗೆ ವಾಂತಿ, ಬೇಧಿ ಫಿಕ್ಸ್, ತಿನ್ನುವ ಮುನ್ನ ಹುಷಾರ್ !
ಬೈಂದೂರು ತಾಲೂಕಿನ ಆಲೂರು ಸುತ್ತಮುತ್ತಲಿನ ಭಾಗದಲ್ಲಿನ ಜನರು ಮರವಾಯಿ ಖಾದ್ಯ ಸೇವನೆ ಮಾಡಿದವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ವರ್ಷ ಮೀನುಗಳು ಹಾಳಾಗದಂತೆ ಕೆಮಿಕಲ್ ಬಳಸುತ್ತಾರೆ ಅನ್ನೋ ಆರೋಪ ಕೇಳಿಬಂದಿತ್ತು. ಇದು ರಾಜ್ಯದಾದ್ಯಂತ ದೊಡ್ಡಮಟ್ಟದ ಚರ್ಚೆಗೂ ಕಾರಣವಾಗಿತ್ತು. ಇವಾಗ ಕೆಮಿಕಲ್ ಮರವಾಯಿ ಕರಾವಳಿ ಮಾರುಕಟ್ಟೆಗೆ ಬಂದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಇದರಿಂದಾಗಿ ಜನರು ಮರವಾಯಿ ತಿನ್ನಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಕೆಲವರು ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಕುಂದಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಮಳೆಗಾಲದ ಆರಂಭದಲ್ಲಿಯೂ ಇದೇ ರೀತಿ ಮರವಾಯಿ ಖಾದ್ಯ ತಿಂದು ಕುಂದಾಪುರ ಬಹುತೇಕ ಜನರಿಗೆ ವಾಂತಿ, ಬೇಧಿ ಸೇರಿದಂತೆ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು.
ಈಗ ಸಿಗುತ್ತಿರುವ ಮರವಾಯಿ ಅನ್ಯರಾಜ್ಯದ್ದು ಅನ್ನೋ ಗುಸು ಗುಸು ಮಾತುಗಳು ಕೇಳಿ ಬರುತ್ತಿದೆ, ಈ ಘಟನೆಗೆ ಸಂಬಂಧಪಟ್ಟಂತೆ ವೈದ್ಯಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಗೊಂದಲಕ್ಕೆ ವೈದ್ಯರು ವರದಿ ನೀಡಬೇಕೆಂಬುದು ಪಬ್ಲಿಕ್ ನೆಕ್ಸ್ಟ್ ಆಶಯ