ಬೈಂದೂರು: ಭಾರೀ ಗಾಳಿ ಮಳೆಗೆ ಧರೆಗುರುಳಿದ ಮರ-ವಿದ್ಯುತ್ ಕಂಬ : ಮೆಸ್ಕಾಂ ಸಿಬ್ಬಂದಿ ಸುಸ್ತೋ – ಸುಸ್ತು..!
ಬೈಂದೂರು : ಗಂಗೊಳ್ಳಿ ಹಾಗೂ ನಾಡಗುಡ್ಡೆ ಅಂಗಡಿ ಅವಳಿ ಮೆಸ್ಕಾಂ ಶಾಖೆಯ ಹಲವು ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಬಾರಿ ಗಾಳಿ ಮಳೆಯಿಂದಾಗಿ ಹಲವೆಡೆ ಮರ, ವಿದ್ಯುತ್ ಕಂಬಗಳ ಮೇಲೆ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ನೆಲಕ್ಕೆ ಉರುಳಿದ ಪರಿಣಾಮ ಕೆಲ ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.
ಸತತವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಎದೆಗುಂದದೆ ಸಾರ್ವಜನಿಕರಿಗೆ ವಿದ್ಯುತ್ ಸಮಸ್ಯೆ ಆಗದ ಹಾಗೆ ತಕ್ಷಣ ತುಂಡಾಗಿರುವ ವಿದ್ಯುತ್ ಕಂಬವನ್ನು ರಾತ್ರಿ ಹಗಲು ದುರಸ್ತಿ ಯ ಕಾರ್ಯಚರಣೆ ಮಾಡಿದರು,
ಗಂಗೊಳ್ಳಿ ಹಾಗೂ ನಾಡ ಗುಡ್ಡೆ ಅಂಗಡಿ ಮೆಸ್ಕಾಂ ಶಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಕೂಡ ಜನರಿಗೆ ವಿದ್ಯುತ್ ಪೂರೈಸಿದ ಮೆಸ್ಕಾಂ ಸಿಬ್ಬಂದಿಗಳಿಗೆ ಭಾಗದ ಜನ ಮೆಚ್ಚುಗೆ ವ್ಯಕ್ತಪಡಿಸಿದರು