ವಿಶ್ವ ಮಾದಕವಸ್ತು ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನಾಚರಣೆ

Spread the love

ಕುಂದಾಪುರ: ಜೂನ್ 26 ರಂದು ಕುಂದಾಪುರದ ಹೋಟೆಲ್ ಶರೋನ್‌ನಲ್ಲಿ ವಿಶ್ವ ಮಾದಕವಸ್ತು ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನವನ್ನು ಆಚರಿಸಲಾಯಿತು. ಸಭೆಯಲ್ಲಿ ಮಾದಕ ವಸ್ತು ಮಾರಾಟ ಮತ್ತು ಕಳ್ಳಸಾಗಣೆಯನ್ನು ಹೇಗೆ ಹತ್ತಿಕ್ಕುವುದೆನ್ನುವುದರ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಉಡುಪಿ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಯವರಾದ ಶಂಕರ ನಾಯ್ಕರವರು ವಿವರವಾಗಿ ನೆರೆದ ಔಷಧ ವ್ಯಾಪಾರಸ್ಥರಿಗೆ ತಿಳಿಸಿದರು. ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಹಾಗೂ ಔಷಧ ನಿಯಂತ್ರಣ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜರುಗಿತು. ಮಾನಸಿಕ ಖಿನ್ನತೆಗೆ ಬಳಸುವ ಔಷಧಗಳು ಮತ್ತು ಇತರ ಅಮಲು ಬರುವ ಔಷಧಗಳ ದುರುಪಯೋಗ ಆಗುವ ಕುರಿತು ಸವಿವರವಾಗಿ ತಿಳಿಹೇಳಿ ಔಷಧ ವ್ಯಾಪಾರಸ್ಥರು ಹೇಗೆ ಅದನ್ನು ತಡೆಗಟ್ಟಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದೆಂದು ವಿವರಿಸಿದರು. ಸಭೆಯಲ್ಲಿ ಕುಂದಾಪುರ ವಲಯದ ಎಲ್ಲಾ ಔಷಧ ವ್ಯಾಪಾರಸ್ಥರು ಉಪಸ್ಥಿತರಿದ್ದು ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಸಹಕರಿಸಿದರು. ಉಡುಪಿ ಜಿಲ್ಲಾ ಸಂಘದ ಖಜಾಂಚಿಯವರಾದ ಸುಬ್ರಹ್ಮಣ್ಯ ರಾವ್ ಮತ್ತು ಉಪಾಧ್ಯಕ್ಷರಾದ ಹಲ್ಸನಾಡು ಸದಾಶಿವ ರಾವ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಜಿಲ್ಲಾ ಸಂಘದ ಕಾರ್ಯಕಾರಿ ಸದಸ್ಯರಾದ ನಿತಿನ್ ಶೆಟ್ಟಿಯವರು ನಿರ್ವಹಿಸಿದರು.

Right Click Disabled