ಮಹಾವೀರ ಜಯಂತಿ ಅಂಗವಾಗಿ ಜಿತೋನಿಂದ “ಅಹಿಂಸಾ ಓಟ”: ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರಿ – ರಾಜ್ಯಪಾಲರು ಭಾಗಿ

Spread the love

ಬೆಂಗಳೂರು; ಮಹಾವೀರ ಜಯಂತಿ ಅಂಗವಾಗಿ ಏಪ್ರಿಲ್ 2 ರಂದು ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ನಿಂದ ಐಐಎಫ್ಎಲ್ ಜಿತೋ “ಅಹಿಂಸಾ ಓಟ” ಆಯೋಜಿಸಲಾಗಿದೆ. ಶಾಂತಿ – ಸೌಹಾರ್ದತೆ ಸ್ಥಾಪನೆಯ ಮಹತ್ವಾಕಾಂಕ್ಷೆಯೊಂದಿಗೆ ಗಿನ್ನೆಸ್ ದಾಖಲೆ ಸ್ಥಾಪಿಸುವ ಓಟಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಲಿದ್ದಾರೆ.

ಈ ಮೂಲಕ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡುವ ಗುರಿಯೊಂದಿಗೆ ಬೃಹತ್ ಮಟ್ಟದಲ್ಲಿ ಅಹಿಂಸಾ ಓಟ ಆಯೋಜಿಸಲಾಗಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿತೋ ಬೆಂಗಳೂರು ಚಾಪ್ಟರ್ ಅಧ್ಯಕ್ಷ ಬಿಂದಿ ಎಚ್. ರೈಸ್, ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಶಾಲಾ ಮೈದಾನದಿಂದ ಮೂರು ವಿಭಾಗಗಳಲ್ಲಿ ಶಾಂತಿ ಓಟ ಏರ್ಪಡಿಸಲಾಗಿದೆ. ರಾಜ್ಯಪಾಲರ ಜೊತೆಗೆ ಸಿಸ್ಟರ್ ಬಿ.ಕೆ. ಶಿವಾನಿ ಮತ್ತಿತರರು ಭಾಗವಹಿಸಲಿದ್ದಾರೆ. ಕಾಲಮಿತಿ, ವಯೋಮಿತಿಯೊಳಗೆ 10 ಕಿಲೋಮೀಟರ್, 5 ಕಿಲೋಮೀಟರ್ ಮೋಜಿನ ಓಟ ಹಾಗೂ 3 ಕಿಲೋಮೀಟರ್ ಮೋಜಿನ ಓಟ ಏರ್ಪಡಿಸಿದ್ದು, ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಶಾಂತಿ ಓಟದಲ್ಲಿ ಭಾಗವಹಿಸಲು ಏಪ್ರಿಲ್ 1 ರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ದೇಶಾದ್ಯಂತ 58 ಮತ್ತು ವಿದೇಶಗಳ 23 ಸ್ಥಳಗಳಲ್ಲಿ ಸಹ ಓಟದಲ್ಲಿ ಭಾಗವಹಿಸುತ್ತಿವೆ. ಜಿತೋ ಸಂಸ್ಥೆ ಬಹುಹಂತದ ಪಾಲುದಾರಿಕೆಯನ್ನು ಹೊಂದಿದ್ದು, ಸಮಾಜದಲ್ಲಿ ಸೌಹರ್ದತೆ, ಜಾಗತಿಕ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿತೋ ಮಹಿಳಾ ವಿಭಾಗ ಸಹ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಸಾಮಾಜಿಕ ಚಟುವಟಿಕೆಯಲ್ಲಿ ನಿರತವಾಗಿದೆ. ಸಮಾಜದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಹಾವೀರರ ಅಹಿಂಸಾ ತತ್ವಗಳನ್ನು ಪಸರಿಸುವ ಉದ್ದೇಶ ಹೊಂದಲಾಗಿದೆ. ಶಾಂತಿ ಓಟ ಪ್ರತಿಯೊಬ್ಬರದಲ್ಲಿ ಜಾತಿ, ಧರ್ಮ, ಬಣ್ಣ, ಲಿಂಗಗಳಲ್ಲೂ ಶಾಂತಿ ವಾತಾವರಣ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಈ ಓಟದಲ್ಲಿ ಕ್ರೀಡಾಪಟುಗಳು, ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು, ವ್ಯಾಪಾರಿ ವಲಯದ ಪ್ರಮುಖರು ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾರಿಷಸ್ ಪ್ರಧಾನಿ ಹಾಗೂ ವಿವಿಧ ಗಣ್ಯರು ಓಟಕ್ಕೆ ಬೆಂಬಲ ನೀಡಿದ್ದಾರೆ ಎಂದರು. ಹೆಚ್ಚಿನ ಮಾಹಿತಿಗೆ ಸಿದ್ಧಾರ್ಥ್ ಬೋಹಾರಾಗೆ ಸಂಪರ್ಕಿಸುವಂತೆ ಕೋರಲಾಗಿದೆ: 90089 00002.

ಸುದ್ದಿಗೋಷ್ಠಿಯಲ್ಲಿ ಜಿತೋ ದಕ್ಷಿಣ ವಿಭಾಗದ ಅಧ್ಯಕ್ಷ ದಿನೇಶ್ ಬೋಹ್ರಾ, ಉತ್ತರ ವಿಭಾಗದ -ಅಧ್ಯಕ್ಷ ಇಂದರ್‌ಚಂದ್ ಬೋಹ್ರಾ, ಸುನಿತಾ ಗಾಂಧಿ, ಬಿಂದು ರೈಸೋನಿ, ಮೋನಿಕಾ ಪಿರ್ಗಲ್, ಸುಮನ್ ವೇದ್ಮುತಾ, ಎನ್.ಎಸ್.ಎಸ್. ಅಧಿಕಾರಿ ಪ್ರತಾಪ್ ಲಿಂಗಯ್ಯ ಮಾಧ್ಯಮ ಉಸ್ತುವಾರಿ ಸಿದ್ದಾರ್ಥ್ ಬೋಹರಾ ಉಪಸ್ಥಿತರಿದ್ದರು.

Right Click Disabled