ತುರುವೇಕೆರೆ ತಾಲೂಕಿನ ಮಾಯಸಂದ್ರ ಕ್ಲಸ್ಟರ್ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬ ಆಚರಣೆ.
ವರದಿ -ಸಚಿನ್ ಮಾಯಸಂದ್ರ.
ತುರುವೇಕೆರೆ: ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಿರುವುದಾಗಿ ಮಾವಿನಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರಾದ ಸುಧಾ ರವರು ಹೇಳಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಮಾಯಸಂದ್ರ ಕ್ಲಸ್ಟರ್ ವತಿಯಿಂದ ಹಮ್ಮಿಕೊಂಡಿದ್ದ ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದು ಮಾಯಸಂದ್ರ ಕ್ಲಸ್ಟರ್ ನ ಎಲ್ಲಾ ಶಾಲೆಗಳಿಂದ 123 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ, ಶಿಕ್ಷಣ ಇಲಾಖೆಯು ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಸಹ ಹಬ್ಬವನ್ನು ಇದರಿಂದ ಮಕ್ಕಳಿಗೆ ಹೊಸತನ ಸೃಷ್ಟಿಯಾಗುತ್ತದೆ, ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಸಂತೋಷದಾಯಕ ಚಟುವಟಿಕೆಯನ್ನು ಹೊಂದಬೇಕು ಎಂಬ ಸರ್ಕಾರದ ಚಿಂತನೆಯಾಗಿದ್ದು,ಈ ಚಿಂತನೆ ಸಲಹೆ ಹಾಗೂ ಮಾರ್ಗದರ್ಶನದಡಿಯಲ್ಲಿ ಕಲಿಕಾ ಹಬ್ಬ ಜರುಗಿವೆ, ಕೋವಿಡ್ 19 ರ ಸಾಂಕ್ರಾಮಿಕ ರೋಗವು ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಅಡ್ಡವಾಗಿದ್ದು, ಈ ಸಮಸ್ಯೆಗೆ ಮಕ್ಕಳಿಗೆ ಸರ್ಕಾರವು ಋಣಾತ್ಮಕ ಶಿಕ್ಷಣ ನೀಡಲು ಮುಂದಾಗಿದ್ದು, ಯಾವುದೇ ಒತ್ತಡವಿಲ್ಲದೆ ಮಕ್ಕಳಿಗೆ ಆನಂದಮಯ ಚಟುವಟಿಕೆಯ ಕಾರ್ಯವಾಗಬೇಕೆಂಬ ಇಲಾಖೆಯ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತಾ ಶಿವಕುಮಾರ್ . ಮುಂತಾದ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಕರಿಬಸಪ್ಪ. ಮಾಯಸಂದ್ರ ಕ್ಲಸ್ಟರ್ ಸಿ.ಆರ್.ಪಿ.ಗಳಾದ ಕೃಷ್ಣಮೂರ್ತಿ. ಗಿರೀಶ್. ಸಂಘದ ನಿರ್ದೇಶಕರಾದ ಕೃಷ್ಣಮೂರ್ತಿ. ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಲತಾ. ಶ್ವೇತ.ಶೃತಿ. ನಾಜಿಮಾ. ಮುಖ್ಯ ಶಿಕ್ಷಕರದ ಶಿವಲಿಂಗೇಗೌಡ, ದೇವರಾಜು. ಶಿವಶಂಕರ್. ಸಿದ್ದಲಿಂಗಪ್ಪ ಹಾಗೂ ಕ್ಲಸ್ಟರ್ ನ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.