ಮಾಯಸಂದ್ರ ಗ್ರಾಮದಲ್ಲಿ ರಕ್ತ-ಸಂಬಂಧಗಳ ಬಾಂಧವ್ಯಕ್ಕೆ ಸಾಕ್ಷಿಯಾದ ನಾಗರಹಬ್ಬ!

Spread the love

ವರದಿ- ಸಚಿನ್ ಮಾಯಸಂದ್ರ.

ತುರುವೇಕೆರೆ: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳತ್ತ ಸಾಂಪ್ರದಾಯಕ ಹಬ್ಬ ಆಚರಣೆಗಳು ಕಡಿಮೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಸಂಬಂಧಗಳ ಬಾಂಧವ್ಯ ಬೆಸೆದು, ಸಾಂಪ್ರದಾಯಕ ಹಬ್ಬ ಆಚರಣೆಗಳಿಗೆ ಇಂದಿಗೂ ಸಾಕ್ಷಿಯಾದ ಮಾಯಸಂದ್ರ ಗ್ರಾಮದ ನಾಗರಹಬ್ಬ!

ಹೌದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ತಡ ದಿನವಾದ ಶನಿವಾರದಂದು ಗ್ರಾಮದಲ್ಲಿ ಗ್ರಾಮಸ್ಥರಿಂದ ಸಾಂಪ್ರದಾಯಿಕ ಹಬ್ಬವಾದ ನಾಗರಪೂಜಾ ಆಚರಣೆ ನಡೆಯಿತು.

ಮಕರ ಸಂಕ್ರಮಣ ಹಬ್ಬದ ‌ ಆದ ನಂತರ ‌ಪ್ರತಿ ವರ್ಷಕ್ಕೊಮ್ಮೆ ನಡೆಯುವ ಈ ಹಬ್ಬಕ್ಕೆ ವಾರದಿಂದಲೇ ಗ್ರಾಮದ ಹಲವಾರು ಮನೆಗಳಲ್ಲಿ ನಾಗರ ಪೂಜೆಯ ಮುಂಜಾಗೃತವಾಗಿ ಮನೆಗಳನ್ನು ಶುದ್ದಿ ಮಾಡುವ ಮೂಲಕ, ಯಾವುದೇ ಮಾಂಸಹಾರಗಳನ್ನು ಸೇವಿಸದೆ, ಕಟ್ಟುನಿಟ್ಟಾಗಿ ಕೆಲ ನಿಯಮಗಳನ್ನು ಪಾಲಿಸುವುದರ‌ ಜೊತೆಗೆ, ಗ್ರಾಮದಲ್ಲಿ ಮತ್ತು ಹೊರ ಜಿಲ್ಲೆ,ರಾಜ್ಯ, ಹೊರದೇಶಗಳಲ್ಲಿಯೂ ಸಹಾ ತಮ್ಮ ಒಡಹುಟ್ಟಿದ ಅಣ್ಣ ತಮ್ಮಂದಿರನ್ನು ‌ಈ ಹಬ್ಬಕ್ಕೆ ಕರೆಯುವ ಸಂಪ್ರದಾಯವಿದೆ.

ಯಾವುದೇ ಹಬ್ಬ ಹರಿದಿನಗಳಲ್ಲಿ ಸೇರದ ‌ ಸಂಬಂಧಗಳು, ಈ ಹಬ್ಬದಲ್ಲಿ ಮಾತ್ರ ಸ್ವಯಂ ಪ್ರೇರಿತವಾಗಿ ಸೇರುವುದು ‌ ವಾಡಿಕೆ. ಜೊತೆಗೆ ಅಷ್ಟೇ ಭಕ್ತಿ ಪೂರಕವಾಗಿ ಈ ಹಬ್ಬವನ್ನು ಆಚರಿಸುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಸಹ ‌ ಸಾಂಪ್ರದಾಯಿಕ ಹಬ್ಬ ಆಚರಣೆಗಳಿಗೆ ಜೀವಂತ ಸಾಕ್ಷಿಯಾಗಿದೆ.

ಈ ವೇಳೆ ನಾಗರಹಬ್ಬದ ಕುರಿತು‌ ಶಿವಮೊಗ್ಗದಿಂದ ಆಗಮಿಸಿದ್ದ ಮಾಯಸಂದ್ರ ‌ ಗ್ರಾಮದ ‌ ದಿವಂಗತರಾರ ಶ್ರೀರಾಜಯ್ಯ ರತ್ನಮ್ಮ ನವರ ‌ ಪುತ್ರರಾದ ಮುರುಳಿಧರ್ ರವರು ‌ ಮಾತನಾಡಿ, ‌ ತಲೆತಲಾಂತರಗಳಿಂದಲೂ ಸಹ ಗ್ರಾಮದಲ್ಲಿ ನಾಗರಪೂಜೆಯನ್ನು ವಿಶೇಷವಾಗಿ ಗ್ರಾಮಸ್ಥರು ಆಚರಿಸುತ್ತಿದ್ದು, ಗ್ರಾಮ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಿಯ ಆಶೀರ್ವಾದದೊಂದಿಗೆ ಗ್ರಾಮದಿಂದ ಉದ್ಯೋಗ ಹರಸಿ, ಬೇರೆಡೆ ಬಂದಿರುವಂತಹ ಹಲವಾರು ಕುಟುಂಬಗಳು ಉನ್ನತ ಸ್ಥಾನದಲ್ಲಿ, ಹಾಗೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಮುಂದುವರೆದ ಉದಾಹರಣೆಗಳಿವೆ. ಅದರಂತೆ ವರ್ಷಕ್ಕೊಮ್ಮೆ ಜಾತ್ರೆ ಮತ್ತು ಸಾಂಪ್ರದಾಯಕ ಹಬ್ಬ ಆಚರಣೆಗಳಿಗೆ ನಾವುಗಳು ಭಾಗವಹಿಸಲು, ಗ್ರಾಮದಲ್ಲಿರುವ ‌ ನಮ್ಮ ಸಹೋದರರು ದಿನಾಂಕವನ್ನು ತಿಳಿಸಿದ ಕೂಡಲೇ ತಪ್ಪದೇ ನಾವು ಮತ್ತು ನಮ್ಮ ಕುಟುಂಬವು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಪೂಜಾ ಕೈಂಕರ್ಯಗಳು ನಡೆಸುತ್ತೇವೆ. ನಾಗರಹಬ್ಬದ ವಿಶೇಷವೇನೆಂದರೆ‌ ಕಣ್ಣು ಮತ್ತು ಚರ್ಮ, ಸಂತಾನ, ಲಗ್ನ, ವಾಸಿಯಾಗದ ಗಾಯಗಳಿಗೆ ಈ ಪೂಜೆಯಿಂದ ಹಲವು ಸಮಸ್ಯೆಗಳು ಬಗೆಹರಿಯುವಂತಹ ನಂಬಿಕೆಗಳ ಉದಾಹರಣೆಗಳಿವೆ. ಒಟ್ಟಾಗಿ ಸೇರಿ ಆಚರಿಸುವ‌ ಇಂತಹ ಆಚರಣೆಗಳಿಂದ ಅಣ್ಣ ತಮ್ಮಂದಿರ ಸಂಬಂಧಗಳ ಬಾಂಧವ್ಯ, ಗಟ್ಟಿಯಾಗುತ್ತದೆ. ಇದರಿಂದ ‌ ರಕ್ತ ಸಂಬಂಧಗಳ ಪಾತ್ರ ಏನೆಂಬುದು ಹಾಗೂ ನಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಹಬ್ಬ ಆಚರಣೆಯ ಬಗ್ಗೆ ‌ ಅರಿವು ಮೂಡಿಸುವ ಅಗತ್ಯ ಕಾರ್ಯವಾದ ಈ ನಾಗರ ಹಬ್ಬ ಮತ್ತು ಗ್ರಾಮದಲ್ಲಿ ನಡೆಯಲಿರುವ ಶ್ರೀಕೊಲ್ಲಾಪುರದಮ್ಮ ದೇವಿಯ ಜಾತ್ರೆ ಸಾಕ್ಷಿಯಾಗಿದೆ ಎಂದರು.

ಈ ವೇಳೆ ಅಜಯ್ ಅಧೀಕ್ಷಕರು ಪಶುಪಾಲನ ಮತ್ತು ಪಶುಸೇವಾ ವೈದ್ಯ ಇಲಾಖೆ ಮತ್ತು ವೀರಯೋಧ ಯೋಗಾನಂದಸ್ವಾಮಿ ಮತ್ತು ಕುಟುಂಬವು ಆಗಮಿಸಿ ‌ ವಿಶೇಷ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ, ಶಶಿಕುಮಾರ್, ಮೋಹನ್, ಗಿರಿಧರ್, ಬಾಲ ಮೋಹನ್. ರಾಜೀವ್, ಹಾಗೂ ‌ ಹಲವಾರು ಗ್ರಾಮಸ್ಥರು ಕುಟುಂಬಸ್ಥರು ಭಾಗವಹಿಸಿದ್ದರು.

Right Click Disabled