ಮುತ್ತುಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ, ಉಪಾಧ್ಯಕ್ಷರಾಗಿ ಆನಂದ್ ಕುಮಾರ್ ಆಯ್ಕೆ.

Spread the love

ವರದಿ-ಸಚಿನ್ ಮಾಯಸಂದ್ರ.

ತುರುವೇಕೆರೆ: ತಾಲೂಕಿನ ಮುತ್ತುಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ಮತ್ತು ಉಪಾಧ್ಯಕ್ಷರಾಗಿ ಆನಂದಕುಮಾರ್ ಆಯ್ಕೆಯಾದರು.

13 ಸದಸ್ಯರ ಬಲವುಳ್ಳ ಸಂಘದಲ್ಲಿ ತಡ ದಿನವಾದ ಸೋಮವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಿತು, ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಮತ್ತು ಚಂದ್ರಯ್ಯನವರು ಸ್ಪರ್ಧಿಸಿದ್ದು 12 ಮತಗಳನ್ನು ಲಕ್ಷ್ಮಣ ಪಡೆದುಕೊಂಡರು. 1 ಮತವನ್ನು ಚಂದ್ರಯ್ಯನವರು ಪಡೆದುಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್ ಕುಮಾರ್ ಅವಿರೋಧ ಆಯ್ಕೆಯಾದರು.

ಸಹಕಾರ ಇಲಾಖೆಯ ತುರುವೇಕೆರೆ ವಿಭಾಗದ ಚುನಾವಣಾಧಿಕಾರಿಗಳಾದ ಶಿವಕುಮಾರ್ ರವರು ಲಕ್ಷ್ಮಣರವರು ಅಧಿಕ ಮತಗಳಿಂದ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು, ನೂತನ ಅಧ್ಯಕ್ಷ ಲಕ್ಷ್ಮಣನವರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ತಮ್ಮ ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಲಕ್ಷ್ಮಣರವರು ನನ್ನ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮತ್ತು ಸಂಘದ ವತಿಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸಗಳು ಹಾಗೂ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು‌ ರೈತರಿಗೆ ಒದಗಿಸುವ ಪ್ರಾಮಾಣಿಕ ಕೆಲಸವನ್ನು ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿಎಂ.ಆರ್.ಗಿರೀಶ್ ಮಾ.ಗ್ರಾ.ಪಂ.ಅಧ್ಯಕ್ಷರು. ಸದಸ್ಯರುಗಳಾದ ಗಂಗಾಧರಯ್ಯ, ತಮ್ಮಣ್ಣಗೌಡ, ಸುರೇಶ್, ನಾಗರಾಜು, ಗಿರಿಜಾ, ರೂಪ. ಸುರೇಶ್, ಚಂದ್ರಯ್ಯ. ಹಾಗೂ ಮುಂತಾದ ಸದಸ್ಯರುಗಳು ಗ್ರಾಮದ ಹಿರಿಯ ಮುಖಂಡರು ಗ್ರಾಮಸ್ಥರು ಸಂಘದ ‌ಆಡಳಿತ ಮಂಡಳಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Right Click Disabled