ತುಮಕೂರು ಅಶೋಕನಗರದ ಮಹೇಶ್ ಪಿ.ಯು. ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ

Spread the love

.

ತುಮಕೂರು: ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಿರಿ ಎಂದು ಅಚರ್ಡ್ ಮಾದಕ ದ್ರವ್ಯ ವ್ಯಸನಿಗಳ ಪುನರ್ವಸತಿ ಕೇಂದ್ರದ ನಿರ್ದೇಶಕರಾದ ಡಾ. ಸದಾಶಿವಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಟ್ಟಣದ ಅಶೋಕನಗರದಲ್ಲಿರುವ ಮಹೇಶ್ ಪಿಯು ಕಾಲೇಜಿನಲ್ಲಿ ಜೆ ಸಿ ಐ‌ ತುಮಕೂರು ಮೆಟ್ರೋ ನೇತೃತ್ವದಲ್ಲಿ ಹಾಗೂ ಮಹೇಶ್ ಪಿಯು ಕಾಲೇಜಿನ ಸಹಯೋಗದೊಂದಿಗೆ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು, ಶ್ರೀ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಡಾ. ಸದಾಶಿವಯ್ಯ, ನಿಖಿಲ್ ಶರ್ಮಾ, ‌ ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಪಟೇಲ್ ಉದ್ಘಾಟಿಸಿ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಡಾ. ಸದಾಶಿವಯ್ಯ ಮಾತನಾಡಿ ಭಾರತ ದೇಶದಲ್ಲಿ ಮಾದಕ ದ್ರವ್ಯಕ್ಕೆ ದಾಸರಾಗಿ ಲಕ್ಷಾಂತರ ಮಂದಿ ಹದಿ ಹರೆಯದ ವಯಸ್ಸಿನವರು ತುತ್ತಾಗಿದ್ದಾರೆ. ಇದರಿಂದ ಅವರ ಸಂಪೂರ್ಣ ಭವಿಷ್ಯ ಹಾಳಾಗಿದೆ. ವಿದ್ಯಾರ್ಥಿಗಳು ಸಹ ಧೂಮಪಾನ, ಮದ್ಯಪಾನ, ತಂಬಾಕು ಹಾಗೂ ಡ್ರಗ್ಸ್ ಸೇರಿದಂತೆ ಇನ್ನಿತರ ಮಾದಕ ದ್ರವ್ಯಗಳ ದುಶ್ಚಟಕ್ಕೆ ದಾಸರಾಗದೆ, ವ್ಯಾಯಾಮ, ಯೋಗಾಸನ, ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುವ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡುಗೆಯನ್ನು ನೀಡಬೇಕೆಂದು ಜಾಗೃತಿ ಮೂಡಿಸಿದರು.

ಗ್ರೀನ್ ಟ್ರೀ ಕಂಪನಿಯ ನಿಖಿಲ್ ಶರ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಮಹೇಶ್ ಪಿಯು ವಿದ್ಯಾ ಸಂಸ್ಥೆಯು ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿದ್ದು, ಇಂದು ಈ ಒಂದೊಳ್ಳೆ ಕಾರ್ಯಕ್ರಮದಲ್ಲಿ ‌ನಾವುಗಳು ಭಾಗವಹಿಸಿರುವುದು ಸಂತಸವಾಗಿದೆ,ಯುವ ಪೀಳಿಗೆಯು ಯಾವುದೇ ದುಶ್ಚಟಕ್ಕೆ ತುತ್ತಾಗಬೇಡಿ, ಶ್ರೀ ಸ್ವಾಮಿ ವಿವೇಕಾನಂದರ ಮತ್ತು ಕುವೆಂಪು, ಭಗತ್ ಸಿಂಗ್ ಸೇರಿದಂತೆ ಮುಂತಾದ ಮಹನೀಯರ ಜೀವನ ಚರಿತ್ರೆಗಳನ್ನು ಓದಿ, ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಮುಂದಿನ ಭವಿಷ್ಯದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕೆಂದು ತಿಳಿಸಿದರು.

ಪ್ರಾಂಶುಪಾಲರಾದ ವಿದ್ಯಾ ಪಟೇಲ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅತಿ ದೊಡ್ಡ ಜವಾಬ್ದಾರಿಯಾಗಿದೆ, ಸಮಯಪ್ರಜ್ಞೆಯಿಂದ ತಾವು ಎದರಿಸುವ ಪರೀಕ್ಷೆಗಳು ಮತ್ತು ದಿನ ನಿತ್ಯದ ಕೆಲಸ ಕಾರ್ಯಗಳನ್ನು ಆರಂಭಿಸಲು ಮುಂದಿನ ಭವಿಷ್ಯದಲ್ಲಿ ಸಾಕಷ್ಟು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜೆ.ಸಿ, ಕಲಾಕೆಂಪರಾಜು. ಜೆ.ಎಫ್.ಎಂ,ನಯನಜನಾರ್ಧನ್. ಜೆ.ಸಿ, ಲತಾ ಶ್ರೀನಿವಾಸ್. ಮತ್ತು ಕಾಲೇಜಿನ ಉಪನ್ಯಾಸಕರಗಳಾದ ಶ್ರೀನಿವಾಸ್ ಕಲ್ಲೂರು. ಹರೀಶ್ ಕುಮಾರ್. ನಾಗಲಕ್ಷ್ಮಿ. ಪ್ರಿಯಾಂಕ. ಮಂಜುಳಾ. ರೋಹಿಣಿ. ಉಷಾರಾಣಿ ಸೇರಿದಂತೆ ಆಡಳಿತ ಮಂಡಳಿ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.

ವರದಿ- ಸಚಿನ್ (ಮಾಯಸಂದ್ರ.)

Right Click Disabled