ಪ್ರತಿಯೊಬ್ಬರು ‌ಸಮಾಜಕ್ಕೆ ಕೈಲಾದ ಕೊಡುಗೆಯನ್ನು ನೀಡಿ: ನಿವೃತ್ತ ಜಾನುವಾರು ಅಧಿಕಾರಿ ವೆಂಕಟೇಗೌಡ ಅಭಿಪ್ರಾಯ

Spread the love

.

ವರದಿ- ಸಚಿನ್ ಮಾಯಸಂದ್ರ.

ತುರುವೇಕೆರೆ : ಪ್ರತಿಯೊಬ್ಬರು ಸಮಾಜಕ್ಕೆ ತಮ್ಮ ಕೈಲಾದ ಕೊಡುಗೆ ನೀಡಬೇಕು ನಿವೃತ್ತ ಜಾನುವಾರು ಅಧಿಕಾರಿ ವೆಂಕಟೇಗೌಡ ಹೇಳಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ತುರುವೇಕೆರೆ ನೇತೃತ್ವದಲ್ಲಿ ಪಶು ಆಸ್ಪತ್ರೆ ಮಾಯಸಂದ್ರ ಸಹಯೋಗದೊಂದಿಗೆ ತಾಲೂಕಿನ ದೊಡ್ಡಶೆಟ್ಟಿಕೆರೆ ಗ್ರಾಮದಲ್ಲಿ ಹಾಲು ಉತ್ಪದಕರ ಸಹಕಾರ ಸಂಘದ ಆವರಣದಲ್ಲಿ ಜಾನುವಾರುಗಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಸಮಾಜಕ್ಕೆ ತಮ್ಮ ಕೈಲಾದ ಕೊಡುಗೆಯನ್ನು ನೀಡಬೇಕು, ಸಮಾಜವೇ ಕೊಡುಗೆದಾರರನ್ನು ಗೌರವಿಸುತ್ತದೆ ನಿವೃತ್ತ ಅಧಿಕಾರಿಯಾದರೂ ಸಹ ಇಂದಿಗೂ ಸಹ ಜಾನುವಾರುಗಳ ಕಾಯಿಲೆ ಮುಂತಾದ ಸಮಸ್ಯೆಗಳಿಗೆ ಸಾರ್ವಜನಿಕರು ಕರೆ ಮಾಡುತ್ತಾರೆ, ನಾವು ಸಹ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಸಂದರ್ಭದಲ್ಲಿ ಜಾನುವಾರಗಳನ್ನು ಪರೀಕ್ಷಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡುವ ಕಾರ್ಯವನ್ನು ಮುಂದುವರಿಸಿದ್ದೇನೆ. ರೈತರಿಗೆ ಉಪಯುಕ್ತ ಮಾಹಿತಿಗಳನ್ನು ತಿಳಿಸಿದ್ದೇನೆ, ನನ್ನ ಸೇವೆಗೆ ಸಮಾಜ ಗುರುತಿಸಿರುವುದು ನನ್ನ ಸೌಭಾಗ್ಯ ಎಂದರು.

ಈ ವೇಳೆ ಮಹಿಳಾ ಹಾಲು ಉತ್ಪಾದಕರ ಕಾರ್ಯಕಾರಿಣಿ ‌ ಸಂಯುಕ್ತಾಶ್ರಯದಲ್ಲಿ 60 ಮಿಶ್ರತಳಿ ಹಸುಗಳು, 20 ಮಿಶ್ರತಳಿ ಕರುಗಳು, ಹಳ್ಳಿಕರ್ ತಳಿಗಳು ಮತ್ತು ಸ್ಥಳೀಯ ದನ ಕರುಗಳಿಗೆ ‌ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು ಮತ್ತು ಸಂಬಂಧಿಸಿದ ಚಿಕಿತ್ಸೆಯನ್ನು ನೀಡಲಾಯಿತು. ಸುಮಾರು 360 ಮೇಕೆಗಳಿಗೆ ಪ್ರತಿಷ್ಠಿತ ಜಂತು ಔಷಧಿಯನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿವೃತ್ತ ಜಾನುವಾರು ಅಧಿಕಾರಿ ವೆಂಕಟೇಗೌಡರವರಿಗೆ ತಮ್ಮ ಪಶು ಇಲಾಖೆ ಸೇವೆಯನ್ನು ಶ್ಲಾಘಿಸಿ ಸಂಘದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಮೋಹನಕುಮಾರಿ ಹೊನ್ನೇಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಪುಟ್ಟರಾಜು ಮುಖ್ಯ ಪಶು ವೈದ್ಯಧಿಕಾರಿಗಳು ತುರುವೇಕೆರೆ. ಕಲ್ಪತರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಕೆಂಪೇಗೌಡ, ಗೌರವಾಧ್ಯಕ್ಷರಾದ ಶ್ರೀ ಕೃಷ್ಣ ಮೆಡಿಕಲ್ ಸ್ಟೋರ್ ಮಾಲೀಕರಾದ ಮಂಜಣ್ಣ. ಮತ್ತು ಸಂಘದ ಪದಾಧಿಕಾರಿಗಳಾದ ಇಂದ್ರಮ್ಮ, ಶೀಲಾ, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

Right Click Disabled