ಅತಿಥಿಗಣ್ಯರಿಂದ ಹಾಗೂ ಪೋಲಿಸ್ ಆದಿಕಾರಿಗಳಿಂದ ಅಂತಿಮ ನಮನ ಸಲ್ಲಿಸಲಾಯಿತು,

Spread the love

ಅಂಕೋಲಾ ಮೂಲದ ಅಂಡಮಾನ್ – ನಿಕೋಬಾರ್ ನಲ್ಲಿ ನೌಕಾಸೇನಾ ಸಿಬ್ಬಂದಿ ಸಾವು* ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೂಲದ ನಿವಾಸಿ ನಾಗರಾಜ ಕಳಸ (33) ವರ್ಷ ಅಂಡಮಾನ್ ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನೌಕಾ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಕಸ್ಮಿಕ ದುರಂತದಲ್ಲಿ ಮೃತಪಟ್ಟಿದ್ದಾರೆ, ಮೂಲತ: ಲಕ್ಷೇಶ್ವರದ ನಾಗರಾಜ .2010 ರಲ್ಲಿ ಐ ಎನ್ ಎಸ್,ಚಿಲ್ಕಾದಲ್ಲಿ ತರಬೇತಿ ಪಡೆದು ಭಾರತೀಯ ನೌಕಾಪಡೆಗೆ ಸೇರ್ಪಡೆ ಯಾಗಿದ್ದರು,ಮುಂಬೈನಲ್ಲಿ ಕರ್ತವ್ಯ ಕ್ಕೆ ಸೇರಿದ್ದ ಅವರು ಪ್ರಸ್ತುತ ಅಂಡಮಾನ್ – ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಕರ್ತವ್ಯ ಮುಂದುವರೆಸಿದ್ದರು.ಸೇವಾ ನಿವೃತ್ತಿ ಗೆ ಒಂದೆರಡು ವರ್ಷ ಬಾಕಿ ಇರುವಾಗಲೇ ಕಳೆದ 3-4 ದಿನಗಳ ಹಿಂದೆ ನಡೆದ ಆಕಸ್ಮಿಕ ದುರಂತದಲ್ಲಿ ಮೃತಪಟ್ಟಿದ್ದಾರೆ,ಇಂದು ಹುಟ್ಟುರಿಗೆ ಮೃತ ದೇಹ ವನ್ನು ತಂದು ಸಾರ್ವಜನಿಕ ಅಂತಿಮ ದರ್ಶನ ಕ್ಕೆ ಅವಕಾಶ ನೀಡಿ ನಂತರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

Right Click Disabled