ಬಸ್ ಹಾಗೂ ಕಾರು ನಡುವೆ ಬೀಕರ ಅಪಘಾತ ನಾಲ್ವರು ಸ್ಥಳದಲ್ಲೇ ಸಾವು ಕಾರವಾರ :
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ರಾಷ್ಟ್ರೀಯ ಹೆದ್ದಾರಿ 66 ರ ಬಾಳೆಗುಳಿ ವರದರಾಜ ಹೋಟೆಲ್ ಹತ್ತಿರ ಬಾಳೆಗುಳಿ ಕಡೆಯಿಂದ ಅಂಕೋಲಾ ಕಡೆಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ಅಂಕೋಲಾ ಕಡೆಯಿಂದ ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ ನವಲಗುಂದ ಕಡೆಗೆ ಹೊರಟ್ಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ದಾಟಿ ವಿರುದ್ದ ದಿಕ್ಕಿಗೆ ಬಂದು ಜೋರಾಗಿ ಬಸ್ ಗೆ ಗುದ್ದಿದ ಪರಿಣಾಮ ಕಾರು ಸಂಪೂರ್ಣ ಜಖಂ ಗೊಂಡು ನುಜ್ಜು ಗುಜ್ಜಾಗಿದೆ, ಕಾರಿನಲ್ಲಿದ್ದ ನಾಲ್ಕು ಜನ ಸಿಲುಕಿ ಮೃತ ಪಟ್ಟಿದ್ದು ,ವಿಷಯ ತಿಳಿದ ಅಂಕೋಲಾ ಪೋಲಿಸರು ದಾವಿಸಿದ್ದರು,ಪಿ.ಎಸ್ ಐ ಪ್ರವೀಣ ಕುಮಾರ,ಮುತ್ತಿತರು ಸ್ವತ: ಕಬ್ಬಿಣದ ಸಲಕೆ ಬಳಸಿ ಬಳಸಿ ಡೋರ್ ಓಪನ್ ಮಾಡಿ ದೇಹ ಹೊರ ತೆಗೆದಿದ್ದಾರೆ, ಈ ಮೂಲಕ ಹೊಸ ವರ್ಷದ ಮೊದಲ ದಿನ ಸಂಭವಿಸಿದ್ದು ಭಿಕರ ರಸ್ತೆ ಅಪಘಾತದಲ್ಲಿ ನಾಲ್ವರು ದುರಂತ ಸಾವಿಗೀಡಾಗಿದ್ದು ಮೃತರು ತುಳುನಾಡಿನವರು ಎಂದು ಗುರುತಿಸಲಾಗಿದೆ,ಈ ಪ್ರಕರಣ ಅಂಕೋಲಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ,

