ಆಸ್ತಿಗಾಗಿ ತಮ್ಮನ ಕೊಲೆ ಮೂರು ದಿನ ಬಳಿಕ ಶವ ಪತ್ತೆ ಕಾರವಾರ :
ಉತ್ತರ ಕನ್ನಡ ಜಿಲ್ಲೆಯ ಸೊರಬಾ ತಾಲೂಕಿನಲ್ಲಿ ಆಸ್ತಿಗಾಗಿ ತಮ್ಮನ್ನು ಕೊಲೆಗೈದ ಘಟನೆ ನಡೆದಿದ್ದು ಪೊಲೀಸರು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ, ಸೊರಬ ತಾಲೂಕಿನ ಅನವಟ್ಟಿ ಪಟ್ಟಣದ ಸಮೀಪದ ತುಡಿನೀರು ಗ್ರಾಮದ ಸಲೀಂ (25)ವರ್ಷ, ಡಿಸೆಂಬರ್ 15 ರಂದು ಬೆಳೆ ಕಾಯಲು ರಾತ್ರಿ ಹೊಲಕ್ಕೆ ಹೋಗಿದ್ದ ಮಗ ವಾಪಾಸ್ ಬರಲಿಲ್ಲ ಹೊಲಕ್ಕೆ ಹೋಗಿ ಪೋಷಕರು ಹುಡುಕ್ಕಿದ್ದಾರೆ ಆದರೆ ಮಗ ಮಾತ್ರ ಸಿಕ್ಕಿರಲಿಲ್ಲಾ, ಇದರಿಂದ ಕುಟುಂಬಸ್ಥರು ಗಾಬರಿ ಆಗಿದ್ದರು,ಸಲೀಂ ನಾಪತ್ತೆ ಆಗಿರುವ ಕುರಿತು ಆನವಟ್ಟಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು,ಡಿಸಂಬರ್ 18 ರಂದು ಅದೇ ಗ್ರಾಮದ ಹಳ್ಳದ ಪೊದೆಯಲ್ಲಿ ಸಲೀಂ ಶವವಾಗಿ ಪತ್ತೆಯಾಗಿದ್ದು, ಮೃತ ಸಲೀಂನ ತಲೆ ಮತ್ತು ಎಡಗಾಲಿನ ಹತ್ತಿರ ಯಾವುದೋ ಆಯುಧದಿಂದ ಹಲ್ಲೆ ಮಾಡಿರುವುದು ಪೋಲಿಸರ ಗಮನಕ್ಕೆ ಬಂದಿರುತ್ತದೆ, ಯುವಕನ ಯಾರೋ ಕೊಲೆ ಮಾಡಿ ಹಳ್ಳದಲ್ಲಿ ಎಸೆದು ಹೋಗಿರುವುದು ಕಂಡು ಬರುತ್ತದೆ. ಪೋಲಿಸರು ಕೊಲೆ ಗಾರನನ್ನು ಹಿಡಿಯಲು ಬಲೆ ಬಿಸಿರುತ್ತಾರೆ,ಸಲೀಂ ಕೊಲೆ ಆಗಿರುವ ಅನುಮಾನದ ಮೇಲೆ ಈ ಹಿನ್ನೆಲೆಯಲ್ಲಿ ಮೃತನ ಸಹೋದರನು ಕೇಸ ದಾಖಲಿಸಿದ್ದನು. ರಪೀಕ ಕೇವಲ ಮೋಜು ಮಸ್ತಿ ಅಂತ ಹಿಂದೆ ಬಿದ್ದಿದ್ದನು.ಈತನಿಗೆ ಬಂದ ಜಮೀನಲ್ಲಿ ನೆಟ್ಟಗೆ ಕೃಷಿ ಮಾಡಲಿಲ್ಲಾ ತಮ್ಮ ಸಲೀಂ ಮನೆಯ ಎಲ್ಲಾ ಕುಟುಂಬದ ಸದಸ್ಯರ ಜವಬ್ದಾರಿ ವಹಿಸಿ ಉತ್ತಮವಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ,ಇದರಿಂದ ತಮ್ಮ ಸಲೀಂ ಮೇಲೆ ರಪೀಕನಿಗೆ ದಿನೇ ದಿನೇ ದ್ವೇಷ ಹೆಚ್ಚಾಗುತ್ತಿತ್ತು,ಅದೇ ಕಾರಣಕ್ಕೆ ತಮ್ಮನ ಹತ್ಯೆಗೆ ರಪೀಕ್ ಸ್ಕೆಚ್ ಹಾಕಿದ್ದನು ಎನ್ನುತ್ತಾರೆ ಮೃತನ ಸಹೋದರಿ ರುಕ್ಸಾನಾ.ಈ ಪ್ರಕರಣದ ತನಿಖೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡವನ್ನು ರಚನೆ ಮಾಡಿ ಕೊಲೆಯಾದ ಸನ್ನಿವೇಶ ಮತ್ತು ಅದರ ಹಿಂದಿರುವ ಕಾರಣದ ಹಿಂದೆ ಬಿದ್ದಿದ್ದರು.ಪೋಲಿಸರಿಗೆ ಸಲೀಂ ಕೊಲೆ ನಡೆದಿದ್ದು ಯಾವುದೋ ಬೇರೆ ವಿಷಯಕ್ಕೆ ಅಲ್ಲ.ಮನೆಯ ಆಸ್ಥಿಗಾಗಿ ಎನ್ನುವುದು ಪಕ್ಕಾ ಮಾಹಿತಿ ಗೊತ್ತಾಗಿತ್ತು, ಹೀಗೆ ತನಿಖೆ ಚುರುಕುಗೊಳಿಸುತ್ತಾರೆ,ಈ ವೇಳೆ ಮೃತನ ಸಹೋದರನೆ ಕೊಲೆಗಾರ ಎಂದು ತಿಳಿದು ಬರುತ್ತದೆ,ಪೋಲಿಸರು ಮೃತನ ಸಹೋದರನನ್ನು ಹಿಡಿದು ವಿಚಾರಿಸಿದಾಗ. ಜಮೀನಲ್ಲಿ ಮಲಗಿದ್ದ ಸಲೀಂ ನ ತಲೆಗೆ ದೊಣ್ಣೆ ಯಿಂದ ಬಲವಾಗಿ ಹೊಡೆದು ರಪೀಕ ಕೊಲೆ ಮಾಡಿದ್ದವೆ.ಕೊಲಗೆ ರಪೀಕ್ ನ ಜೊತೆ ಆತನ ಸ್ನೇಹಿತ ಸಂತೋಷ ಸಾಥ ಕೊಟ್ಟುದ್ದು.ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಸಲೀಂ ನ ಮೃತ ದೇಹ ಮತ್ತು ಮಲಗಿದ್ದ ಹಾಸಿಗೆ ಸಮೇತ ಜಮೀನಿನ ಹತ್ತಿರದ ಬದನಿಕಟ್ಟೆ ಹಳ್ಳದ ಪೊದಯಲ್ಲಿ ಬಿಸಾಡಿರುತ್ತಾರೆ, ಎಂದು ಆರೋಪಿ ಪೋಲಿಸರಿಗೆ ತಿಳಿಸುತ್ತಾನೆ, ಕೊನೆಗೂ ಅನವಟ್ಟಿ ಪೋಲಿಸರು ಕೊಲೆ ಪ್ರಕರಣ ಬಯಲು ಮಾಡಿದ್ದರು,