ಇದೇನಾ ಸರಕಾರಿ ಜಿಲ್ಲಾ ಆಸ್ಪತ್ರೆಯ (ವೆನ್ಲಾಕ್) ಕಾರ್ಯವೈಖರಿ?
ಮಣಿಪಾಲದಿಂದ ತುರ್ತು ಚಿಕಿತ್ಸೆಗಾಗಿ (ವೆಂಟಿಲೇಟರ್ ನಲ್ಲಿ)ಬಂದ ರೋಗಿಯನ್ನು ವೈದ್ಯರ ಅನುಮತಿ ಇದ್ದರೂ, ಸುಮಾರು 1ಗಂಟೆಗಳ ಕಾಲ ತಡೆದು ನಿಲ್ಲಿಸಿ, ರೋಗಿಯ ಮನೆಯವರಿಗೆ ಹಿಂಸೆ ಕೊಟ್ಟ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಯ ನಡತೆ ನಿಜಕ್ಕೂ ಜನಸಾಮಾನ್ಯರು ತಲೆ ತಗ್ಗಿಸುವಂತಿದೆ. ಸರಕಾರಿ ಆಸ್ಪತ್ರೆಯು ನಿಜವಾಗಿಯೂ ಬಡವರಿಗಾಗಿ ಇದೆಯೋ ಎಂಬ ಅನುಮಾನ ಇಂದಿನ ಘಟನೆಯಿಂದ ಸ್ಪಷ್ಟವಾಗಿದೆ. ತುರ್ತು ಸಂದರ್ಭದಲ್ಲಿಯೂ ಸಿಬ್ಬಂದಿಗಳು ಈ ರೀತಿಯಾಗಿ ನಡೆದುಕೊಳ್ಳುವುದು, ಸರಕಾರದ ನಿರ್ಲಿಪ್ತತೆಯನ್ನು ತೋರಿಸುತ್ತದೆ. ಅದೂ ಸಹ ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ರವರ ಜಿಲ್ಲೆಯಲ್ಲಿಯೇ ಆಗಿರುವುದು ವಿಪರ್ಯಾಸವಾಗಿದೆ.