ಲಕ್ಷಾಂತರ ಮರ ಕಳ್ಳತನ ಅರಣ್ಯ ಅಧಿಕಾರಿಗಳೆ ಸಾಥ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅರಣ್ಯ ಪ್ರದೇಶವಿರುವ ಪಶ್ಚಿಮ ಘಟ್ಟವೆಂದ ಹೆಸರಾದ ಭಾಗದಲ್ಲಿ ಇರುವ ಅಪರೂಪದ. ಅಳವಿನ ಅಂಚಿನಲ್ಲಿರುವ ಸಿಂಗಳಿಕಗಳು ವಾಸಿಸುವ ಸೂಕ್ಷ್ಮ ಪ್ರದೇಶವಾಗಿದ್ದು, ಕುಮಾಟಾ ತಾಲೂಕಿನ ನಿಂದ ಸಿದ್ದಾಪುರ ಘಟ್ಟಪ್ರದೇಶ ಹೆದ್ದಾರಿಯ ಭಾಗದಲ್ಲಿ ಅರಣ್ಯ ಪ್ರದೇಶ ವಿರುವ ಸಾಂತಗಲ್,ಉಳ್ಳುರು ಮಠ,ಸಂತೆಗುಳಿ ಗ್ರಾಮದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದು ಸಾಗಿಸಲಾಗಿದ್ದು,ಈವರೆಗೂ ಯಾವುದೇ ಆರೋಪಿಯನ್ನು ಬಂದಿಸದೆ. ಇದ್ದ ಕಾರಣ ಅಲ್ಲಿನ ಅರಣ್ಯ ಅಧಿಕಾರಿಗಳೇ ಈ ಅಕ್ರಮಕ್ಕೆ ಸಾಥ್ ನಿಡಿದ್ದಾರೆ .ಎಂದು ಆರೋಪ ಕೇಳಿ ಬರುತ್ತಿದೆ, ಹೆದ್ದಾರಿಯ ಎರಡು ಕಡೆಗಳಲ್ಲಿ ಅರಣ್ಯ ತಪಾಸಣಾ ಕೇಂದ್ರಗಳವೆ.ಹೀಗಿದ್ದಲ್ಲಿ ದಟ್ಟ ಅರಣ್ಯ ಭಾಗದಲ್ಲಿ ಇರುವ ಸಾಂತಗಲ್. ಉಳ್ಳುರುಮಠ,ಸಂತೆಗುಳಿ ಗ್ರಾಮದಲ್ಲಿ ಬೀಟೆ,ಸಾಗವಾನಿ,ಮರಗಳನ್ನು ನಿರಂತರವಾಗಿ ಕಡಿದು ಸಾಗಿಸಲಾಗುತ್ತದೆ, ಪ್ರತಿ ಒಂದೊಂದು ಮರವು ಎರಡರಿಂದ ಮೂರು ಲಕ್ಷ ರೂಪಾಯಿ ಬೆಲೆಬಾಳುವಂತದ್ದು ಮರಗಳು ಅರಣ್ಯ ರಕ್ಷಕರೆ ಬಕ್ಷಕರಾದರೇ ಅರಣ್ಯ ಸಂಪತ್ತು ಹೇಗೆ ಉಳಿಯುತ್ತದೆ,ಎಂಬ ಮಾತು ಜನರಲ್ಲಿ ಕೇಳಿ ಬರುತ್ತಿದ್ದು, ತಪಾಸಣಾ ಕೇಂದ್ರಗಳಿದ್ದರೂ ಲಕ್ಷಾಂತರ ಮೌಲದ್ಯ ಮರಗಳ ಕಳ್ಳಸಾಗಣಿಕೆ ನಿರಂತರ ನಡೆಯುತ್ತಿದ್ದು ಈ ರೀತಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲು ಅರಣ್ಯಾಧಿಕಾರಗಳೇ ಸಾಥ ನೀಡುತ್ತಿದ್ದಾರೆ,ಎಂದು ಗ್ರಾಮದ ಅರಣ್ಯ ಸಂರಕ್ಷಣಾ ಸಮಿತಿಯವರು ಅರೋಪಿಸಿದ್ದಾರೆ, ರಾತ್ರಿಯ ವೇಳಯಲ್ಲಿ ಸಹ ಯಾವುದೇ ಗುಪ್ತ ವ್ಯವಸ್ಥೆ ಇಲ್ಲವಾಗಿದ್ದು ಇದು ಮರಗಳ್ಳರಿಗೆ ಅನೂಕೂಲ ಮಾಡಿಕೊಟ್ಟಂತಾಗಿದೆ ಎನ್ನುತ್ತಿದ್ದರೆ,ಸ್ಥಳಿಯರು ಚೆಕ್ ಪೊಸ್ಟ್ ಗಳಲ್ಲಿ ಭದ್ರತೆ ಉತ್ತಮವಾಗಿದ್ದು, ಮರಗಳ ಸಾಗಾಟ ನಡೆದಿಲ್ಲ ಎನ್ನುತ್ತಿದ್ದರೆ,ಕುಮಟಾ ವಿಭಾಗದ ಅರಣ್ಯ ಸಂರಕ್ಷಣಾದೀಕಾರಿಗಳು ಹಾಗಾದರೆ ಆಮರ ಗಳು ಹೇಗೆ ಕಡಿದು ಕಳ್ಳತನ ಮಾಡಿದ್ದಾರೆ.ಇದಕ್ಕೆ ಅರಣ್ಯ ಅಧಿಕಾರಗಳ ಕುಮ್ಮಕ್ಕು ಇಲ್ಲದೇ ಅರಣ್ಯದಲ್ಲಿ ಇರುವ ಮರಗಳು ಎನಾಯಿತು ಎಲ್ಲಿಗೆ ಹೊಯಿತು ಎಂಬ ಪ್ರಶ್ನೆ ಜನರಲ್ಲಿ ಮುಡುತ್ತಿದೆ.