ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಗೋಪಾಲ್ ಖಾರ್ವಿ ಆಯ್ಕೆ

Spread the love

23ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್ ಶಿಪ್ ಇವರು ಆಯೋಜಿಸಿದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ-ಕನ್ಯಾನ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ಇವರು 400ಮೀ ಫ್ರೀಸ್ಟೈಲ್ ಚಿನ್ನದ ಪದಕ, 200ಮೀ ಫ್ರೀಸ್ಟೈಲ್ ಚಿನ್ನದ ಪದಕ, 100ಮೀ ಫ್ರೀಸ್ಟೈಲ್ ಚಿನ್ನದ ಪದಕ, 4×100 ಮಿಡ್ಲೆ ರಿಲೇಯಲ್ಲಿ ಚಿನ್ನದ ಪದಕ, 4×50 ಫ್ರೀಸ್ಟೈಲ್ ರಿಲೇ ಚಿನ್ನದ ಪದಕ, ಬೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪಡೆದಿರುತ್ತಾರೆ. ಒಟ್ಟು 6 ಪದಕಗಳನ್ನು ಪಡೆದಿರುತ್ತಾರೆ.

ಇವರು ಉಡುಪಿಯ ಅಜ್ಜರಕಾಡು ಈಜು ಕೊಳದ ತರಬೇತುದಾರರಾಗಿರುತ್ತಾರೆ. 2013 ರಲ್ಲಿ ಕೈ ಕಾಲುಗಳನ್ನು ಕೋಳದಿಂದ ಬಂಧಿಸಿ ಅರಬ್ಬೀ ಸಮುದ್ರದಲ್ಲಿ 3.71 ಕಿ.ಮೀ. ಈಜಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ.



ಶ್ರೀ ಗೋಪಾಲ್ ಖಾರ್ವಿ ಕೋಡಿ ಕನ್ಯಾನ ಇವರಿಗೆ ಭಾರತ ಮತ್ತು ಅಮೇರಿಕನ್ ವಿಶ್ವವಿದ್ಯಾಲಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಾದ “BEST SPORTS ACHIVER AWARD” ಮತ್ತು
“CERTIFICATE OF EXCELLENCE AWARD” ನೀಡಿ ಗೌರವಿಸಿದ್ದು, ಈ ಹಿಂದೆ ಗೋಪಾಲ್ ಖಾರ್ವಿಯವರು ಕರ್ನಾಟಕದ ಅತ್ಯುತ್ತಮ ಪ್ರಶಸ್ತಿಗಳಾದ ಕರ್ನಾಟಕ ರಾಜ್ಯೋತ್ಸವ, ಹಾಗೂ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಯನ್ನು, ರಾಜ್ಯ ಮಟ್ಟರ ಸಂದೇಶ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಇವರ ಈ ಸಾಧನೆಯನ್ನು ಮನಗಂಡ ರಾಜ್ಯ ಸರಕಾರವು ಕರ್ನಾಟಕದ ಕೊಂಕಣಿ 9ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಜೀವನ ಚರಿತ್ರ ಗೋಪಾಲ್ ಖಾರ್ವಿ ಎಂಬ ಪಾಠವನ್ನು ಪ್ರಕಟಿಸಿರುವುದು ಅವರ ಸಾಧನೆಗೆ ಸಂದ ಅತ್ಯಂತ ಗೌರವಯುತ ಪ್ರಶಸ್ತಿಗಳೊಂದು.

Right Click Disabled