SDPI. ಮತ್ತು CFI ನಿಷೇದಿಸಲು ಶ್ರೀರಾಮಸೇನೆಯಿಂದ ಮನವಿ

Spread the love


ಇತ್ತೀಚೆಗೆ ರಾಜ್ಯ ಹಾಗೂ ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಯಲ್ಲಿ SDPI ಸಂಘಟನೆಯು ನೇರವಾಗಿ ಭಾಗಿಯಾಗಿರುವುದು ಹಾಗೂ ಇತ್ತೀಚೆಗೆ ಬಿಹಾರದಲ್ಲಿ ಬಂಧನಕ್ಕೋಳಗಾದ ಆರೋಪಿಗಳ ಮಾಹಿತಿ ಅನುಸಾರ ಪ್ರಧಾನಿ ಮೋದೀಜಿಯವರನ್ನು ಹತ್ಯೆ ಮಾಡಲು ಸಂಚು ಮಾಡಿರುವುದು ಅತ್ಯಂತ ಖೇದಕರವಾಗಿದೆ. ಈಗಾಗಲೇ ಈ ಮತೀಯ ಸಂಘಟನೆಯನ್ನು ನಿಷೇದಿಸುವಂತೆ ಕೇರಳ ರಾಜ್ಯದ ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಿರುವುದು ಪ್ರಸ್ತುತ ಈ ಸಂಘಟನೆಯ ನಿಜಾಂಶವನ್ನು ಬಯಲು ಮಾಡಿದೆ.
ಕರ್ನಾಟಕ ರಾಜ್ಯದಲ್ಲೂ ಈ ಸಂಘಟನೆಯು ವಿವಿದ ಕಾನೂನು ಬಾಹಿರ ಕ್ರತ್ಯಗಳಲ್ಲಿ ಭಾಗವಹಿಸುತ್ತಿರುವುದು ಮೆಲ್ನೋಟಕ್ಕೆ ಸತ್ಯವಾಗಿದೆ. ಹಾಗಾಗಿ ಈ ಸಂಘಟನೆಯನ್ನು ನಿಷೇದಿಸುವಂತೆ ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಉಡುಪಿ ಜಿಲ್ಲಾಧಿಕಾರಿಯ ಮೂಲಕ ಮುಖ್ಯಮಂತ್ರಿಗಳನ್ನು ಮನವಿ ಮೂಲಕ ಆಗ್ರಹಿಸಿದೆ.
ಈ ಸಂಧರ್ಭದಲ್ಲಿ ಮಂಗಳೂರು ವಿಭಾಗಾಧ್ಯಕ್ಷರಾದ ಮೋಹನ್ ಭಟ್, ಉಡುಪಿ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೆಕಲ್ಲು, ಜಿಲ್ಲಾ ಮುಖಂಡರಾದ ಶರತ್ ಮಣಿಪಾಲ, ನಿತೇಶ್, ಸುದೀಪ್ ನಿಟ್ಟೂರು, ಸುಜಿತ್ ನಿಟ್ಟೂರು,ಜೀವನ್ ಪೂಜಾರಿ, ರಾಜೇಶ್ ನಿಟ್ಟೂರ್, ಅಜಿತ್ ರಾವ್, ಶ್ರೀನಿವಾಸ್ ಭಟ್, ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.

Right Click Disabled