ಉಡುಪಿ ಜಿಲ್ಲೆಗೂ ಬರಲಿದೆಯಾ ಕಂಟಕ? ಬಚಾವ್ ಆದ “ಸುಧೀರ್ ಸೋನ್”

Spread the love

ಉಡುಪಿ: ಕಾಪು ಬಜರಂದದಳದ ಸಂಚಾಲಕರಾದ ಸುಧೀರ್ ಸೋನ್ ರವರು ಬಚಾವ್ ಆದ ಘಟನೆ ಇಂದು ಕಾಪು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಇಂದು ಬೆಳಿಗ್ಗೆ ಸುಧೀರ್ ಸೋನಾರವರ ಮನೆಗೆ ಬಂದ ಇಬ್ಬರು ಅಪರಿಚಿತರು “ಆಶಿಫ್” ರವರು ನಿಮ್ಮ ಹತ್ತಿರ ಮಾತನಾಡಬೇಕೆಂದು ಕಾರಿನಲ್ಲಿ ಕಾಯುತ್ತಿದ್ದಾರೆ ಬನ್ನಿ ಎಂದು ಕರೆದಿದ್ದಾರೆ.ಕರೆಯಲು‌ ಬಂದ ಇಬ್ಬರು ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್ ಸೋನ್ ಮತ್ತು ಅವರ ಪತ್ನಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿದರು. ಆ ಅಪರಿಚಿತರು ಹೋಗುವಾಗ ಅವರ ಬಳಿ ಇದ್ದ ಆಯುಧಗಳನ್ನು ಗಮನಿಸಿದ ಸುಧೀರ್ ಸೋನ್ ರವರು ಕೂಡಲೇ ಕಾಪು ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿದರು. ದೂರು ಸ್ವೀಕರಿಸಿದ ಪೋಲಿಸರು ಸುಧೀರ್ ರವರಿಗೆ ಧೈರ್ಯದ ಭರವಸೆ ನೀಡಿದರು. ನಂತರ ಕಾರ್ಯಪ್ರವತ್ತರಾದ ಕಾಪು ಪೋಲಿಸರು “ಆಶೀಫ್” ಎಂಬಾತನನ್ನು ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ.

Right Click Disabled