ಕೋಟ ಗ್ರಾಮಕರ್ಣಿಕನಿಂದ ದಲಿತ ಯುವತಿಯ ಮೇಲೆ ಲೈಂಗಿಕ ಕಿರುಕುಳ

Spread the love


ಆ ದಲಿತ ಮಹಿಳೆ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಸಣ್ಣಪುಟ್ಟ ದಾಖಲಾತಿಗಳನ್ನು ಮಾಡಿಸಿಕೊಡುತ್ತಿದ್ದಳು. ಆ ಹೆಣ್ಣುಮಗಳು 15/7/2022ರ ಶುಕ್ರವಾರದ ಸಂಜೆ 4 ಗಂಟೆಗೆ ಗೃಂಥಾಲಯದಲ್ಲಿದ್ದಳು. ಆ ಸಂದರ್ಭದಲ್ಲಿ ಅದರ ಎದುರು ಭಾಗದಲ್ಲಿರುವ ಕಛೇರಿಯೆ ಗ್ರಾಮಲೆಕ್ಕಿಗರ ಕಛೇರಿ. ಅಲ್ಲಿ ಅಂತರ್ಜಾತಿ ವಿವಾಹವಾದ ಒಂದು ಕುಟುಂಬ ಇವರ ಪರಿಚಯಸ್ಥರಾಗಿದ್ದು ಅವರು ಸಮಸ್ಯೆಗಳನ್ನು ಹೇಳೀಕೊಂಡರು. ಆಗ ಕೋಟದ ಗ್ರಾಮಕರ್ಣಿಕರಾದ ಚೆಲುವರಾಜ್ ಎಂಟರಿAದ ಹತ್ತು ಜನ ಸಮಸ್ಯೆ ಪರಿಹಾರಕ್ಕಾಗಿ ಕಾಯುತ್ತಿದ್ದರೂ ಬೇರೆ ಜನರೊಂದಿಗೆ ಅನವಶ್ಯಕವಾಗಿ ಹರಟೆ ಹೊಡೆಯುತ್ತಿದ್ದ. ಆಗ ಸಮಸ್ಯೆ ಪರಿಹಾರಕ್ಕೆ ಇಷ್ಟೊಂದು ಜನ ಕಾಯುತ್ತಿದ್ದಾರೆ ನೀವು ನೋಡಿದರೆ ಕಾಲಹರಣ ಮಾಡುತ್ತಿದ್ದೀರಿ ಎಂದರು. ಅಲ್ಲಿದ್ದ ಜನರು. ಮೊದಲೇ ಪರಿಚಯಸ್ಥಳಾದ ದಲಿತ ಹೆಣ್ಣು ಮಗಳಿಗೆ ಸುಮಾರು 2 ವರ್ಷದಿಂದ (ಕೊರೋನ ಕಾಲದಿಂದ) ಲೈಂಗಿಕತೆಗೆ ಬೇಡಿಕೆ ಇಡುತ್ತಿದ್ದು ಅನೇಕ ರೀತಿಯಲ್ಲಿ ಆಮಿಷಗಳನ್ನೊಡ್ಡಿದ್ದು(ಹಣ, ಮನೆ, ಬಂಗಾರ, ಬಟ್ಟೆ). ಈ ಕಾರ್ಯ ಅವನಿಂದ ಫಲಕಾರಿಯಾಗದಿದ್ದಾಗ ಅದೇ ಸಿಟ್ಟಿನಿಂದ ದಲಿತ ಹುಡುಗಿ ಆ ದಂಪತಿ ಹತ್ತಿರ ಮಾತಾಡಿ ಅವರಿಗೆ ಪ್ರಚೋದನೆ ನೀಡಿದಳು ಎಂದು ಅವನು ಭಾವಿಸಿಕೊಂಡ. ಅದೇ ಸಿಟ್ಟಿನಿಂದ ದಲಿತ ಹೆಣ್ಣುಮಗಳ ಮೇಲೆ ರೇಗಾಡಿದ. ಆ ಸಂದರ್ಭದಲ್ಲಿ ಜೀವಬೆದರಿಕೆ ಒಡ್ಡಿದ. ಮಂಡ್ಯದಿAದ ಗೂಂಡಾಗಳನ್ನು ಕರೆತರುವೆ ಎಂದು ಎಲ್ಲರೆದುರಿನಲ್ಲಿ ಬಾಯಿಗೆ ಬಂದAತೆ ಬೈದ. ಅವರಿಗೆ ಈ ಹಿಂದೆಯೆ ಆ ಹುಡುಗಿ ದಲಿತ ಮಹೆಳೆಯೆಂಬುದು ತಿಳಿದಿತ್ತು. ಅವನ ಕಾಮತೀಟೆಗೆ ಸಹಕರಿಸಿಲ್ಲ ಎಂದು ಆ ಹುಡುಗಿಯ ಮೇಲೆ ರೇಗಾಡಿದ. ಆ ನಂತರ ತುಂಬ ರಾಜಕೀಯ ಬಲಾಢ್ಯ ಬಳಸಿ ಮಹಿಳೆ 20ರಂದು ನೀಡಿದ ದೂರನ್ನು ಎಫ್.ಐ.ಆರ್ ಆಗಿ ಮಾಡಿಲ್ಲಾ. ಅದನ್ನು ರಾಜಿಯನ್ನಾಗಿ ಬಗೆಹರಿಸಿ ದಲಿತ ಹೆಣ್ಣುಮಗಳಿಗೆ ಅನ್ಯಾಯ ಮಾಡಬೇಕೆಂಬ ದುರುದ್ದೇಶ ಅಲ್ಲಿಯ ಪಂಚಾಯತ್ ಅಧ್ಯಕ್ಷರಿಗೂ ಇತ್ತು. ಈ ದುರುದ್ದೇಶದಿಂದ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿಲ್ಲ. ಆ ನಂತರ ದಲಿತ ಹಾಗೂ ಸಾಮಾಜಿಕ ಹೋರಾಟಗಾರರಾದ ಹಲವರು ಠಾಣೆಗೆ ಬೇಟಿನೀಡಿ ಮುಕದ್ದಮೆ ದಾಖಲಿಸಲಾಯಿತು.
ದಿನಾಂಕ 15ರಂದು ನಡೆದ ಘಟನೆ ಒತ್ತಾಯದ ಮೇರೆಗೆ ಮೊಕದ್ದಮೆ ದಾಖಲಿಸಲಾಯಿತು. ಆದ್ದರಿಂದ ಈ ಜಿಲ್ಲೆಯ ಜನರು ಅದರಲ್ಲಿಯು ದಲಿತ ಹೆಣ್ಣುಮಕ್ಕಳು ಬದುಕುವುದೇ ಕಷ್ಟವಾಗಿದೆ. ಪ್ರಜ್ಣಾವಂತರ ಜಿಲ್ಲೆ ಉಡುಪಿಯಲ್ಲಿ ಇಂತಹ ಪರಿಸ್ಥಿತಿಯಾದರೆ ಮುಂದೆ ಬದುಕುವ ದಾರಿ…………..?

Right Click Disabled