ಮುತಾಲಿಕ್ ರವರಿಗೆ ದ ಕ ಜಿಲ್ಲೆಗೆ ನಿರ್ಭಂದ ಉಡುಪಿ ಜಿಲ್ಲಾ ಶ್ರೀರಾಮಸೇನೆ ಗರಂ

Spread the love


ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರ್ ರವರ ಮನೆಗೆ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷಾದ ಪ್ರಮೋದ್ ಮುತಾಲಿಕ್ ರವರು ಭೇಟಿ ನೀಡಿ, ಸಾಂತ್ವಾನ ಹೇಳಲು ಹೋಗಬೇಕಾಗಿದ್ದ ವಿಷಯ ತಿಳಿದ ರಾಜ್ಯ ಸರಕಾರ ಅವರಿಗೆ ದ ಕ ಜಿಲ್ಲೆಗೆ ನಿರ್ಬಂದ ಹೇರಿರುವುದು ಸರಕಾರದ ಹೇಡಿತನದ ಪರಮಾವದಿ ಮತ್ತು ಹಿಂದೂ ಕಾರ್ಯಕರ್ತರಿಗೆ ಮಾಡಿದ ದ್ರೋಹ ಏಂದು ಶ್ರೀರಾಮಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರ್ಬಂದ ಏನ್ನುವುದು ಕೇವಲ ಮುತಾಲಿಕ್ ರವರಿಗೆ ಮಾತ್ರ ಯಾಕೆ? ಉಳಿದ ನಾಯಕರಿಗೆ ಯಾಕಿಲ್ಲ? ರಾಜಕೀಯ ನಾಯಕರಿಗೂ ನಿರ್ಬಂದ ಹೇರಿ ಏಂದು ಸರಕಾರಕ್ಕೆ ತಾಕೀತು ಮಾಡಿದ್ದಾರೆ.
ನೀವು ನಿಮ್ಮ ಅಧಿಕಾರಕ್ಕಾಗಿ ಹಿಂದುತ್ವವನ್ನು ಬಳಸಿಕೋಂಡರೆ, ಪ್ರಮೋದ್ ಮುತಾಲಿಕ್ ರವರು ಹಿಂದುಗಳ ರಕ್ಷಣೆಗಾಗಿ ಹಿಂದುತ್ವವನ್ನು ಮಾಡುತ್ತಿದ್ದಾರೆ.ದಕ್ಷಿಣ ಭಾರತದಲ್ಲಿ ಹಿಂದುಗಳನ್ನು ಒಂದುಗೂಡಿಸಿದ್ದು ಮುತಾಲಿಕ್ ರವರೇ ಹೋರತು, ನಿಮ್ಮ ಶಾಸಕರು ಮಂತ್ರಿಗಳಲ್ಲ ಎಂಬುದನ್ನು ನೆನಪಿಸಿಕೋಳ್ಳಿ. ಎಲ್ಲಾ ರಾಜಕೀಯ, ಸಂಘಟನೆಯ ಸಾಯಕರಿಗೆ ನಿರ್ಬಂದ ಹೇರಿ, ಅದು ಹೋರತು ಕೇವಲ ಮುತಾಲಿಕ್ ರವರಿಗೆ ಮಾತ್ರ ನಿರ್ಬಂದ ಆದರೆ ಖಂಡಿತಾ ರಾಜ್ಯದ ಹಿಂದುಗಳು ನಿಮಗೆ ಸರಿಯಾಗಿ ಬುದ್ದಿಯನ್ನು ಕಲಿಸಲಿದ್ದಾರೆ ಏಂದು ಅಂಬೆಕಲ್ಲು ಸರಕಾರದ ಆದೇಶದ ಬಗ್ಗೆ ಏಚ್ಚರಿಕೆ ನೀಡಿದ್ದಾರೆ.

Right Click Disabled