ಮಲ್ಪೆ: ಸಮಾಜಸೇವಕ ಸತೀಶ್ ಕುಂದರ್‌ರಿಗೆ ಸನ್ಮಾನ

Spread the love


ಮಲ್ಪೆ: ಕನ್ನಿಪಾರ್ಟಿ ಮಲ್ಪೆ ಇವರ ಮಹಾಸಭೆಯು ದಿನಾಂಕ 17-07-2022 ರಂದು ಮಲ್ಪೆಯಲ್ಲಿ ನಡೆಯಿತು.ಮಲ್ಪೆ ಕನ್ನಿಪಾರ್ಟಿಯವರ ಮಹಾಸಭೆಯು ಶ್ರೀ ಜಯಕರ ಸುವರ್ಣರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಸಭೆಯಲ್ಲಿ ಮಲ್ಪೆಯ ಸಮಾಜಸೇವಕ ಸತೀಶ ಕುಂದರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಮಲ್ಪೆ ಸುತ್ತಮುತ್ತಲಿನ ಪರಿಸರದಲ್ಲಿ ಸಮಾಜಸೇವಕರಾಗಿ ಗುರುತಿಸಲ್ಪಟ್ಟಿರುವ ಸತೀಶ್ ಕುಂದರ್‌ರವರು ಅಪಘಾತ ಅಥವಾ ಇನ್ಯಾವುದೋ ತುರ್ತು ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಆಪತ್ಭಾಂದವನಾಗಿ ಬಂದು ಗಾಯಾಳುಗಳನ್ನು ತನ್ನದೆ ಖರ್ಚಿನಲ್ಲಿ ಆಸ್ಪತ್ರೆಯವರೆಗೆ ಸಾಗಿಸಿ ತುರ್ತು ಚಿಕಿತ್ಸೆಯ ಆಸ್ಪತ್ರೆಯ ಬಿಲ್ಲನ್ನು ಹಣವಿಲ್ಲದವರಿಗೆ ತಾನೇ ಪಾವತಿಸಿ ಮಾನವೀಯತೆ ಮೆರೆಯುವ ಓರ್ವ ಆದರ್ಶ ಸಮಾಜ ಸೇವಕನಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಸುಮಾರು 400ಕ್ಕೂ ಮಿಕ್ಕಿ ಶವಗಳ ಅಂತ್ಯ ಸಂಸ್ಕಾರದಲ್ಲಿ ಓರ್ವ ಮುಂದಾಳಾಗಿ ನಿಂತು ಶವಗಳು ಯಾವುದೇ ರೋಗಿಯದ್ದಾಗಿರಲಿ, ಶವಗಳು ಕೊಳೆತಿರಲಿ ಅಥವಾ ಯಾರೂ ಮುಟ್ಟದೇ ಇರುವಂತಹ ಸ್ಥಿತಿ ಇದ್ದರೂ ಕೂಡ ಸತೀಶ್ ಕುಂದರ್‌ರವರು ಅಂತಹ ಶವಗಳನ್ನು ಕೋಡ ತಾನೇ ಸ್ನಾನ ಮಾಡಿಸಿ ಅಲಂಕರಿಸಿ ಶವ ಸಂಸ್ಕಾರಕ್ಕೆ ಅಣೀಗೊಳಿಸುತ್ತಾರೆ. ಶವ ಸಂಸ್ಕಾರದ ವಿಧಿ ವಿಧಾನಗಳಂತೆ ಮಾಡಿ ಓರ್ವ ಗುರಿಕಾರನಂತೆ ಎಲ್ಲಾ ಜವಬ್ದಾರಿಗಳನ್ನು ನಿರ್ವಹಿಸಿ ಶವ ಸಂಸ್ಕಾರದ ಧಾರ್ಮಿಕ ಕಾರ್ಯಕ್ರಮವನ್ನು ಸತ್ತ ವ್ಯಕ್ತಿಯ ಮನೆಯಿಂದ ರುದ್ರಭೂಮಿಯವರೆಗೂ ಯಾವುದೇ ಫಲಾಪೇಕ್ಷೆ ಇಲ್ಲದೇ ಸತೀಶ್ ಕುಂದರ್ ಮಲ್ಪೆ ನೆರವೇರಿಸಿ ಕೊಡುವುದು ಅವರ ವಿಶೇಷತೆಯಾಗಿದೆ ಸತೀಶ್ ಕುಂದರ್ ಮಲ್ಪೆ ಇವರ ಈ ಸಮಾಜಸೇವೆಯನ್ನು ಗುರುತಿಸಿ ಕನ್ನಿ ಪಾರ್ಟಿ ಮಲ್ಪೆ ಇವರು ಸನ್ಮಾನಿಸಿರುತ್ತಾರೆ.

Right Click Disabled