ಗುಲ್ಬರ್ಗದಲ್ಲಿ ಪ್ರಪ್ರಥಮ ಬಾರಿಗೆ ತುಳು ಭಾಷೆ/ಲಿಪಿಯನ್ನು ಪರಿಚಯಿಸುತ್ತಿರುವ ಉಡುಪಿಯ ಯುವಕರು
ಮೂಲತ: ಉಡುಪಿ ಹೆಬ್ರಿಯ ಕಳತ್ತೂರಿನ ಸಹೋದರರಾದ ಸಂತೋಷ್ ಮತ್ತು ಸತೀಶ್ ಪೂಜಾರಿಯವರು ಇತ್ತೀಚೆಗೆ ಗುಲ್ಬರ್ಗದಲ್ಲಿ ತಮ್ಮ ನೂತನ ಹೋಟೆಲನ್ನು ಗುಲ್ಬರ್ಗದ ಗೋವಾ ಹೋಟೆಲ್ ಸರ್ಕಲ್ ಬಳಿ ಪ್ರಾರಂಬಿಸಿದರು. ಇದರ ಉಧ್ಘಾಟನೆಯನ್ನು ಗುಲ್ಬರ್ಗದ ಸಹಬಜಾರ್ ರಾಜಶೇಖರ ಶಿವಚಾರ್ಯರು ಗಣ್ಯರ ಸಮ್ಮುಖದಲ್ಲಿ ನೇರವೇರಿಸಿದರು.
ಆದರೆ ಈ ಸಮಾರಂಭಕ್ಕೆ ಬಂದ ಗಣ್ಯರಿಗೆ ತುಳುನಾಡ ಗಂಡುಕಲೆ ಯಕ್ಷಗಾನ ಹಾಗೂ ತುಳು ಲಿಪಿಯಲ್ಲಿ ಬರೆದ ಅಕ್ಷರಗಳಿಂದ ಕೂಡಿದ ಸ್ಮರಣಿಕೆ ನೀಡಿ ಏಲ್ಲರಿಂದಲೂ ಪ್ರಶಂಶೆಗೆ ಪಾತ್ರರಾಗಿದ್ದಾರೆ.
ಇವರ ಹೋಟೆಲ್ ಪಂಚಮಿಯ ಗೋಡೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು, ಯಕ್ಷಗಾನದ ಪೋಟೋ,ಹಾಗೂ ತುಳುಲಿಪಿಯ ಫಲಕಗಳೇ ರಾರಾಜಿಸುತ್ತಿರುವುದು ಗುಲ್ಬರ್ಗ ಜನರಿಗೆ ತುಳು ಬಾಷೆಯ ಮೇಲೆ ಅಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಹೋದರರ ಭಾಷಾಪ್ರೇಮ ಕರಾವಳಿಯ ಜನರು ಹೆಮ್ಮೆ ಪಡುವ ವಿಷಯ.