ಹೊನ್ನಾವರ ನೆರೆ ನಿರ್ವಹಣೆ ಬಗ್ಗೆ :

Spread the love


ಇಂದು ದಿನಾಂಕ 16-07-2022 ರಂದು ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಈವರೆಗೆ ಒಟ್ಟೂ 22 ಕಾಳಜಿ ಕೇಂದ್ರ ಗಳನ್ನು ತೆರೆಯಲಾಗಿದ್ದು, ನೆರೆ ಪೀಡಿತ ಪ್ರದೇಶಗಳಿಂದ ಒಟ್ಟೂ 1042 ಜನರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿರುತ್ತದೆ. ಇನ್ನೂ ಹಲವು ಜನರು ತಮ್ಮ‌ ಸಂಬಂಧಿಕರ ಮನೆಗಳಿಗೆ ತೆರಳಿರುತ್ತಾರೆ. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಪೊಲೀಸ್ ರಕ್ಷಣೆ ಒದಗಿಸಲಾಗಿರುತ್ತದೆ.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 69 ರಲ್ಲಿ ಗೇರುಸೊಪ್ಪ ಸೂಳೆಮುರ್ಕಿ ಹತ್ತಿರ ಗುಡ್ಡ ಕುಸಿತದ ಕಾರಣ ರಸ್ತೆ ಕುಸಿದಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ.

Right Click Disabled