ಮಧ್ಯದ ಅಂಗಡಿ ನಿಯಮಾವಳಿ ಉಲ್ಲಂಘಿಸಿದ ಅಂಗಡಿ ಮೇಲೆ ಕ್ರಮಕ್ಕೆ ಶಾಂತಗೌಡ ಪಾಟೀಲ್ ಆಗ್ರಹ

Spread the love

ಮಾಧ್ಯಮದವರ ಕ್ಯಾಮರಾ ಕಂಡು ಎಸ್ ಪಿಗೆ ಕಂಪ್ಲೇಟ್ ಮಾಡ್ತೇನೆ ಎಂದ ಅಬಕಾರಿ ಅಧಿಕಾರಿ-ಜ್ಯೋತಿ ಮೈತ್ರಿ

ಮುದ್ದೇಬಿಹಾಳ: ಮಧ್ಯ ಮಾರಾಟದ ಸಿಎಲ್ 2. ಸಿಎಲ್ 7 ಸಿಎಲ್ 9 ರ ನಿಯಮಾವಳಿಗಳನ್ನು ಮಧ್ಯದ ಅಂಗಡಿಗಳು ಎಷ್ಟು ಪಾಲನೆ ಮಾಡುತ್ತಿವೆ ? ಮಧ್ಯದ ಅಂಗಡಿಗಳಿಗೆ ಪ್ರತಿ ತಿಂಗಳು ಇಷ್ಟು ಮಧ್ಯ ಮಾರಾಟ ಮಾಡಬೇಕು ಅಂತ ಅಬಕಾರಿ ನಿರೀಕ್ಷಕರೆ ಟಾರ್ಗೆಟ್ ನೀಡುತ್ತಾರೆ ಇದರಿಂದ ಮಾರಾಟಗಾರರು ಡಾಬಾ, ಕಿರಾಣಿ, ಚಹಾದ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡ್ತಾರೆ. ಸರಕಾರ ಮತ್ತು ಅಬಕಾರಿ ಅಧಿಕಾರಿಗಳೇ ಅಕ್ರಮ ಮಧ್ಯಮಾರಾಟಕ್ಕೆ ಪ್ರೇರಣೆ ನೀಡುತ್ತಿದ್ದಾರೆ ಎಂದು ಸಮಾಜಸೇವಕ ಶಾಂತಗೌಡ ಪಾಟೀಲ್ ( ನಡಹಳ್ಳಿ) ಹೇಳಿದರು. ಅವರು ಮಂಗಳವಾರ ಪಟ್ಟಣದ ಅಬಕಾರಿ ಇಲಾಖೆಗೆ ಭೇಟಿ ನೀಡಿ ಅಬಕಾರಿ ನೀರಿಕ್ಷಕ ಅಧಿಕಾರಿ ಜ್ಯೋತಿ ಮೈತ್ರಿ ಅವರೊಂದಿಗೆ ಪಟ್ಟಣದಲ್ಲಿ ಸಿಎಲ್ ಬ್ಲೂ ಪ್ರಿಂಟ್ ನಿಯಮಾವಳಿ ಉಲ್ಲಂಘಿಸಿದ ಅಂಗಡಿಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದಿರೆಂದು ಪ್ರಶ್ನಿಸಿ ಅವರು ಮಾತನಾಡಿದರು. ಸಿಎಲ್ 2 ಪ್ರಕಾರ ಪಾರ್ಸಲ್ ಒಯ್ಯಲು ಮಾತ್ರ ಅವಕಾಶ ಇದೆ. ಆದರೆ ಇಲ್ಲಿ ಕೌಂಟರ್ ಮಾಡಿ ಕುಳಿತು ಕುಡಿಯುತ್ತಾರೆ. ಇದರಂತೆ ಸಿಎಲ್ 7 ಮತ್ತು ಸಿಎಲ್ 9 ನಿಯಮಾವಳಿ ಉಲ್ಲಂಘಿನೆ ಆಗ್ತಿದೆ. ಅವರ ಮೇಲೆ ಏನು ಶಿಸ್ತು ಕ್ರಮ ಜರುಗಿಸಿದ್ದಿರೆಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೆ
ಅಬಕಾರಿ ಡಿಸಿಗೆ ಪೋನ್ ಮಾಡಿ ನನ್ನ ಕಚೇರಿಗೆ ಬಂದು ನನ್ನ ಮೇಲೆ ಜೋರು ಮಾಡ್ತಾ ಇದ್ದಾರೆ. ದಬ್ಬಾಳಿಕೆ ಮಾಡ್ತಾ ಇದ್ದಾರಂತ ಬೇಜವಾಬ್ದಾರಿಯಿಂದ ಮಾತನಾಡಿದ ಜ್ಯೋತಿ ಮೈತ್ರಿಯವರು, ವರದಿ ಮಾಡಲು ತೆರಳಿದ ವರದಿಗಾರರ ಕ್ಯಾಮರಾ ಕಂಡು ಎಸ್ ಪಿ ಅವರಿಗೆ ಕಂಪ್ಲೇಟ್ ಮಾಡ್ತೇನೆ ಅಂತ ಖುರ್ಚಿಯ ಮೇಲೆ ಕುಳಿತು, ತಾನೂಬ್ಬ ಜವಾಬ್ದಾರಿ ಅಧಿಕಾರಿ ಎಂದು ಮರೆತು ಸುಳ್ಳು ಬೊಬ್ಬೆ ಹೊಡೆದು ಗೊಡ್ಡು ಬೆದರಿಕೆ ಹಾಕಿದರು.

ಅಬಕಾರಿ ಡಿಸಿಯವರೂಂದಿಗೆ ಪೂನ್ ನಲ್ಲಿ ಮಾತನಾಡಿದ ಸಮಾಜ ಸೇವಕ ಶಾಂತಗೌಡ ಪಾಟೀಲ್ (ನಡಹಳ್ಳಿ) ನಿಮ್ಮ ಇಲಾಖೆಯು ಮಧ್ಯ ಮಾರಾಟಕ್ಕೆ ಟಾರ್ಗೆಟ್ ನೀಡುತ್ತದೆ. ಇದರಿಂದ ತಾಲ್ಲೂಕಿನಲ್ಲಿ ಎಲ್ಲೆಡೆ ಅಕ್ರಮ ಮಧ್ಯಮರಾಟ ನಡೆಯುತ್ತಿದೆ. ಯಾರಾದರೂ ಇದರ ವಿರುದ್ಧ ಹೋರಾಟಕ್ಕೆ ಕುಳಿತಾಗ ಯಾರೋ ಒಬ್ಬ ಮಧ್ಯ ಮಾರಾಟಗಾರನ ಮೇಲೆ ಕೇಸ್ ಜಡಿಯುತ್ತೀರ. ಆದರೆ ದೊಡ್ಡ ಮಧ್ಯದ ಅಂಗಡಿಗಾರರ ಮೇಲೆ ಯಾಕೆ‌ ಕ್ರಮ ಕೈಗೊಳ್ಳುವುದಿಲ್ಲ ? ಅಕ್ರಮ ಮಧ್ಯ ಮಾರಾಟಕ್ಕೆ ನಿಮ್ಮ ಅಧಿಕಾರಿಗಳದ್ದೇ ಕುಮ್ಮಕ್ಕು ಇದೆ. ಮುದ್ದೇಬಿಹಾಳ ಅಬಕಾರಿ ಮೇಲೆ ಅನೇಕ ಆಮಿಷ ಲಂಚದ ಆರೋಪಗಳು ಇವೆ. ಈ ಕುರಿತು ಕ್ರಮಕ್ಕೆ ಮುಂದಾಗಿ ಅಕ್ರಮ ಮಧ್ಯ ಮಾರಾಟ ಮಾಡಿದವರ ಮೇಲೆ ಕೇಸ್ ಹಾಕ್ತರಾ? ಅವರಿಗೆ ಮಧ್ಯ ಸರಬರಾಜು ಮಾಡಿದವರ ಮೇಲೆ ಏಕಿಲ್ಲ? ಎಂದು ಪ್ರಶ್ನಿಸಿದರು.
ಅಬಕಾರಿ ಜಿಲ್ಲಾಧಿಕಾರಿ ನಾಳೆ ಮುದ್ದೇಬಿಹಾಳ ಅಬಕಾರಿ ಕಚೇರಿಗೆ ಭೇಟಿ ನೀಡುವುದಾಗಿ ಹೇಳಿದರು.

ಪಟ್ಟಣದಲ್ಲಿ ಸಿಎಲ್ ನಿಯಮಾವಳಿ ಉಲ್ಲಂಘಿಸಿದ ಅಂಗಡಿಗಳ ಮೇಲೆ ಕ್ರಮಕ್ಕೆ ಮುಂದಾಗಿ, ಬನ್ನಿರಿ ನಿಯಮಾವಳಿ ಪರಿಶೀಲನೆ ಮಾಡಿ ಎಂದು ಶಾಂತಗೌಡ ಪಾಟೀಲ್ ಅಬಕಾರಿ ನಿರೀಕ್ಷಕ ಅಧಿಕಾರಿ ಜ್ಯೋತಿ ಮೈತ್ರಿಗೆ ಹೇಳಿದಾಗ ಬನ್ನಿ ಹೋಗೋಣವೆಂದು ಆರಂಭಿಕ ಶೂರತನ ತೋರಿದ ಅಧಿಕಾರಿ, ನಂತರ ಇಲ್ಲ ಈಗ ಬ್ಲೂ ಪ್ರಿಂಟ್ ರಿನಿವಲ್ ಗೆ ಹೋಗಿವೆ ಎಂದು ವರಸೆ ಬದಲಿಸಿದರು.
ಒಬ್ಬ ಜವಾಬ್ದಾರಿ ಅಧಿಕಾರಿಯಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಸಿಎಲ್ ನಿಯಮಾವಳಿ ಉಲ್ಲಂಘಿಸಿದ ಮೇಲೆ ಕ್ರಮಕ್ಕೆ ಜರುಗಿಸಿ, ಅಕ್ರಮ ಮಧ್ಯ ಮಾರಾಟಕ್ಕೆ ತಡೆಹಾಕಿ ಎಂದು ಹೇಳಲು ಬಂದ ಸಮಾಜದ ಗಣ್ಯ ವ್ಯಕ್ತಿಯ ಮೇಲೆ, ವರದಿಗೆ ಬಂದ ಮಾಧ್ಯಮವರ ಮೇಲೆ ಹರಿಹಾಯ್ದ ಜ್ಯೋತಿ ಮೈತ್ರಿ ನಡೆದುಕೊಂಡ ರೀತಿ ಖಂಡನೆಯವಾಗಿತ್ತು.
ಈ‌ ಸಂದರ್ಭದಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ಹುಲಗಪ್ಪ ನಾಯಕಮಕ್ಕಳ ಉಪಸ್ಥಿತರಿದ್ದರು.

ವರದಿ-ಅನಿಲ್ ತೇಲಂಗಿ

Right Click Disabled