ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ

Spread the love

 ಬೆಂಗಳೂರು ನಗರದ ಪೊಲೀಸ್ ಠಾಣೆಯಲ್ಲಿ 2021 ನೇ ಸಾಲಿನಲ್ಲಿ ಒಟ್ಟು 4555 ಪ್ರಕರಣಗಳನ್ನು ದಾಖಲಿಸಿ 5753 ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, 183 ಪ್ರಕರಣಗಳಲ್ಲಿ 141 ಜನ ವಿದೇಶಿಯರ ದಸ್ತಗಿರಿ ಮಾಡಿ, ಸುಮಾರು 60 ಕೋಟಿ ಮೌಲ್ಯದ 3705 ಕೆ.ಜಿ. ಹಾಗೂ 2022ನೇ ಸಾಲಿನಲ್ಲಿ ಒಟ್ಟು 1716 ಪ್ರಕರಣಗಳನ್ನು ದಾಖಲಿಸಿ 2262 ಆರೋಪಿಗಳನ್ನು ದಸ್ತಗಿರಿ ಹಾಗೂ 53 ಪ್ರಕರಣಗಳಲ್ಲಿ 45 ಜನ ವಿದೇಶಿಯರನ್ನು ದಸ್ತಗಿರಿ ಹಾಗೂ ಸುಮಾರು 55 ಕೋಟಿ ಮೌಲ್ಯದ 2005 ಕೆ.ಜಿ.ಯಷ್ಟು ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

 2021 ಮತ್ತು ಜೂನ್ 2022ರ ಇಲ್ಲಿಯವರೆಗೆ ಬೆಂಗಳೂರು ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು , ಕಳ್ಳಸಾಗಾಣಿಕೆ ದಂಧೆಯಲ್ಲಿ ತೊಡಗಿದ್ದ ಸ್ಥಳೀಯ ಹಾಗೂ ವಿದೇಶಿ ಆರೋಪಿಗಳನ್ನು ದಸ್ತಗಿರಿ ಮಾಡಿ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗಿದೆ.

 ಮಾದಕ ವಸ್ತುಗಳ ವ್ಯವಹಾರದಲ್ಲಿ ತೊಡಗಿದ್ದ ಆರೋಪಿಗಳ ವಿರುದ್ಧ PIT NDPS ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಬಂಧನದ ಆದೇಶ ಹೊರಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 ದಾಖಲೆ ಪ್ರಮಾಣದಲ್ಲಿ ವಿವಿಧ ಮಾದಕ ವಸ್ತುಗಳ ಬಳಕೆ ಮತ್ತು ಸೇವನೆ ಮಾಡಿತ್ತಿರುವ ಗ್ರಾಹಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ.

 ಮಾದಕ ವಸ್ತುವಾದ ಎಮ್.ಡಿ.ಎಮ್.ಎ ಕ್ರಿಸ್ಟಲ್ ತಯಾರಿಸುವ “Narco Lab” (ಪ್ರಯೋಗಾಲಯ) ಪತ್ತೆ ಮಾಡಿ ಓರ್ವ ವಿದೇಶಿ ಪ್ರಜೆಯನ್ನು ದಸ್ತಗಿರಿ ಮಾಡಿ ಎಮ್.ಡಿ.ಎಮ್.ಎ ತಯಾರಿಕೆಗೆ ಬಳಸುವ ವಿವಿಧ ರಾಸಾಯನಿಕ ಪದಾರ್ಥಗಳನ್ನು ಹಾಗೂ ಉಪಕರಣಗಳನ್ನು ಜಪ್ತಿ ಮಾಡಿ ಅಪಾರ ಪ್ರಮಾಣದ ಎಮ್.ಡಿ.ಎಮ್.ಎ ಕ್ರಿಸ್ಟಲ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

 Darkweb ಅಂತರ್ಜಾಲ ಪ್ರವೇಶಿಸಿ, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರಿಯ ಮಾದಕ ವಸ್ತು ಮಾರಾಟಗಾರರಿಂದ, Crypto currency ಮುಖೇನ ಖರೀದಿಸಿ ಸ್ಥಳೀಯ ಮತ್ತು ಅಂತರ್ ರಾಷ್ಟ್ರೀಯ ಕೊರಿಯರ್ ಸೇವೆಗಳ ಮೂಲಕ ಆಮದು ಮಾಡಿಕೊಂಡು ಗ್ರಾಹಕರ ಮನೆಗಳಿಗೆ Swiggy ಮತ್ತು Dunzo ಮೂಲಕ ಸರಬರಾಜು ಮಾಡುತ್ತಿದ್ದ ಕುಖ್ಯಾತ ಜಾಲವನ್ನು ಪತ್ತೆ ಮಾಡಿ ಹೆಚ್ಚು ಪ್ರಮಾಣದ ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಕಾನೂನು ರೀತ್ಯ ಕ್ರಮ ಜರುಗಿಸಲಾಗಿದೆ.

 ಮಾದಕದ್ರವ್ಯ ವಸ್ತುಗಳಲ್ಲಿ ಹೆಚ್ಚಾಗಿ ತೆಲಂಗಾಣ, ಒಡಿಶಾ, ಆಂದ್ರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಮ್, ರಾಜ್ಯಗಳಿಂದ ಗಾಂಜವನ್ನು ಹಾಗೂ ಎಮ್.ಡಿ.ಎಮ್.ಎ. ಎಕ್ಸ್ಟೆಸಿ ಇತರೆ ಸಿಂತೆಟಿಕ್ ಡ್ರಗ್ಸ್ ಗಳು ದೆಹಲಿ, ಪಂಜಾಬ್, ಕೇರಳ, ಮಹಾರಾಷ್ಟ್ರ, ಗೋವಾ ರಾಜ್ಯ ಮೂಲಗಳಿಂದ ಸರಬರಾಜಾಗುತ್ತಿರುವುದು ತನಿಖೆಯಿಂದ ಕಂಡುಬಂದಿರುತ್ತದೆ. ಕರ್ನಾಟಕ ರಾಜ್ಯದ ಗಡಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳೊಂದಿಗೆ ಮಾದಕ ವಸ್ತು ಸಾಗಾಣಿಕೆ ಹಾಗೂ ಆರೋಪಿಗಳ ಮಾಹಿತಿಯನ್ನು ಕಾಲಕಾಲಕ್ಕೆ ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತಿರುತ್ತದೆ.

 ಮಾದಕ ವಸ್ತುಗಳ ಬಳಕೆ ಮತ್ತು ನಿಯಂತ್ರಣ ಸಲುವಾಗಿ Toll Free No. 1908 ದೂರವಾಣಿಯ ಮುಖಾಂತರ ಸಾರ್ವಜನಿಕರು ಮಾಹಿತಿ ನೀಡುವ ಸೇವೆಯನ್ನು ಪ್ರಾರಂಭಿಸಲಾಗಿದೆ.

 ಶಾಲಾ ಕಾಲೇಜುಗಳು ವಿದೇಶಿಯರು ವಾಸಿಸುತ್ತಿರುವ ಪ್ರದೇಶಗಳು, ಮತ್ತು ಕೊಳಚೆ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆ, ಮೆರವಣಿಗೆಗಳನ್ನು ನಡೆಸುವುದರ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲು ಹಾಗೂ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾದಕ ದ್ರವ್ಯದ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶಾಲಾ- ಕಾಲೇಜುಗಳಲ್ಲಿ ಡ್ರಗ್ ಅವೇರ್‌ನೆಸ್ ಪ್ರೋಗ್ರಾಮ್ ಅನ್ನು ನಡೆಸಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಠಾಣಾ ಸರಹದ್ದಿನ ಬೀಟ್ ಮತ್ತು ಸಬ್ ಬೀಟ್‌ಗಳಲ್ಲಿ ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಅಧಿಕಾರಿ/ಸಿಬ್ಬಂದಿಯವರುಗಳಿಗೆ ಮಾದಕ ವಸ್ತುಗಳ ನಿಗಾವಣೆ, ತನಿಖೆ, ಪತ್ತೆಕಾರ್ಯ ಇತ್ಯಾದಿಗಳ ಬಗ್ಗೆ ಜಾಗೃತಿ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ.

 ವಿಶೇಷವಾಗಿ ವಿದೇಶಿ ಪ್ರಜೆಗಳು ಮಾದಕ ವಸ್ತುಗಳ ಮಾರಾಟ/ಸೇವನೆಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಯಾವ ಮೂಲಗಳಿಂದ ಮಾದಕ ವಸ್ತುಗಳ ಸರಬರಾಜಾಗುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿರುವ ವಿದೇಶಿಯರನ್ನು ದಸ್ತಗಿರಿ ಮಾಡಿ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತಿದೆ. ವಿದೇಶಿಯರು ವಾಸದ ಬಗ್ಗೆ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಒದಗಿಸುವಂತೆ ಈಗಾಗಲೆ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ವಿಶೇಷ ಕಾರ್ಯಾಚರಣೆಗಳನ್ನು ನಡೆಸಿ ಇಂತಹ ಕೃತ್ಯವೆಸಗುವಂತಹವರ ವಿರುದ್ಧ ಕಠಿಣ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತಿದೆ.

 ವಿದೇಶಿ ಪ್ರಜೆಗಳಿಗೆ ಬಾಡಿಗೆಗೆ ಮನೆ ನೀಡುವ ಮುನ್ನ ಸಂಪೂರ್ಣ ಗುರುತಿನ ದಾಖಲಾತಿಗಳಾದ ಪಾಸ್‌ಪೋರ್ಟ್, ವಿಸಾ, ಇತರೆ ಸರ್ಕಾರದಿಂದ ವಿತರಿಸಿರುವ ದಾಖಲಾತಿಗಳನ್ನು ಪರಿಶೀಲಿಸಿ, ನಂತರ ಕರಾರು ಪತ್ರಗಳನ್ನು ಮಾಡಿಕೊಂಡು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಮನೆಯ ಮಾಲೀಕರಿಗೆ ವಿಶೇಷ ಸೂಚನೆ ನೀಡಲಾಗುತ್ತಿದೆ. ಈ ಸೂಚನೆಗಳನ್ನು ಪಾಲನೆ ಮಾಡದೆ ಇರುವ ಮನೆಯ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

 ದಿನಾಂಕ 25-06-2021 ರಿಂದ ದಿನಾಂಕ 26-06-2022 ರವರೆಗೆ ಒಟ್ಟು 4353 ಕೆ.ಜಿ. 116 ಗ್ರಾಂ 190 ಮಿಲಿಗ್ರಾಂ 6679 ಎಮ್.ಡಿ.ಎಮ್.ಎ., ಎಕ್ಸ್ ಟೆಸಿ ಮಾತ್ರೆಗಳು ಹಾಗೂ 2995 ಎಲ್.ಎಸ್.ಡಿ.ಸ್ಟ್ರಿಪ್ಸ್ ಹಾಗೂ ಇತ್ಯಾದಿ ಮಾದಕ ವಸ್ತುಗಳನ್ನು ನಾಶ ಪಡಿಸಲು ಮಾನ್ಯ ನ್ಯಾಯಾಲಯದಿಂದ ಆದೇಶ ಪಡೆಯಲಾಗಿದೆ. ಈ ನಾಶಪಡಿಸುತ್ತಿರುವ ಮಾದಕ ವಸ್ತುಗಳ ಒಟ್ಟು ಅಂದಾಜು ಮೌಲ್ಯ 41,80,71,464/- (ನಲವತ್ತೊಂದು ಕೋಟಿ ಎಂಬತ್ತು ಲಕ್ಷ ಎಪ್ಪತ್ತೊಂದು ಸಾವಿರದ ನಾಲ್ಕು ನೂರ ಅರವತ್ನಾಲ್ಕು ರೂಗಳಾಗಿರುತ್ತದೆ)

Right Click Disabled